ಶ್ರಮ ಲೂಟಿಗೆ ಹೊಸ ನೀತಿ; ಏನಿದು ಕೆಲಸದ ಸಮಯದಲ್ಲಿ 9-9-6 ನಿಯಮ?

Date:

Advertisements

ದೀರ್ಘ ಕೆಲಸದ ಸಮಯವನ್ನು ಉತ್ತೇಜಿಸಲು ಐಟಿ ಮತ್ತು ತಂತ್ರಜ್ಞಾನ ಕಂಪನಿಗಳ ಸಿಇಒಗಳು ಹೊಸ ನೀತಿಗೆ ಶಿಫಾರಸು ಮಾಡುತ್ತಿದ್ದಾರೆ. ‘ಗ್ರೆಪ್ಟೈಲ್‌’ ಸಂಸ್ಥೆಯ ಭಾರತೀಯ ಮೂಲದ ಸಹ-ಸಂಸ್ಥಾಪಕಿ ದಕ್ಷ ಗುಪ್ತಾ, ಕ್ಯಾಲಿಫೋರ್ನಿಯಾ ಮೂಲದ ಮಹಿಳಾ ಬಿಲಿಯನೇರ್, ಉದ್ಯಮಿ ಲೂಸಿ ಗುವೊ ಸೇರಿದಂತೆ ಹಲವಾರು ಟೆಕ್ ಉದ್ಯಮಿಗಳು ಕೆಲಸದ ಅವಧಿಯ ವಿಸ್ತರಣೆ ಆಗಬೇಕೆಂದು ಹೇಳುತ್ತಿದ್ದಾರೆ. ಅದಕ್ಕಾಗಿ, ‘9-9-6 ನಿಯಮ’ವನ್ನು ಪ್ರಸ್ಥಾಪಿಸಿದ್ದಾರೆ. ಇದು ಹೊಸ ರೀತಿಯ ಕೆಲಸದ ವೇಳಪಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

9-9-6 ನಿಯಮವು ಉದ್ಯೋಗಿಗಳು ವಾರದಲ್ಲಿ 6 ದಿನಗಳ ಕಾಲ ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೆ ಕೆಲಸ ಮಾಡುವ ಕೆಲಸದ ವೇಳಾಪಟ್ಟಿಯನ್ನು ಸೂಚಿಸುತ್ತದೆ. ಅಂದರೆ, ಉದ್ಯೋಗಿಗಳು ದಿನನಿತ್ಯ ಬರೋಬ್ಬರಿ 12 ಗಂಟೆ, ವಾರಕ್ಕೆ 96 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಕಾನೂನಿನ ಪ್ರಕಾರ, ನೌಕರರು ಮತ್ತು ಕಾರ್ಮಿಕರು ದುಡಿಯುವ ಅವಧಿಯು ಊಟದ ಬಿಡುವು ಸೇರಿದಂತೆ ದಿನಕ್ಕೆ 9 ಗಂಟೆ, ವಾರಕ್ಕೆ 54 ಗಂಟೆಗಳ ಇರಬೇಕು. ಹೆಚ್ಚುವರಿ ಸಮಯದ ದುಡಿಮೆಗೆ ಹೆಚ್ಚುವರಿ ಪಾವತಿ (ಒಟಿ) ನೀಡಬೇಕು. ಅದೂ, 2 ಗಂಟೆಗಳಿಗಿಂತ ಹೆಚ್ಚು ಇರುವಂತಿಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ವಾರಕ್ಕೆ 72 ಗಂಟೆ, 96 ಗಂಟೆಗಳ ಕೆಲಸದ ಅವಧಿ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಸೇರಿದಂತೆ ಹಲವರು ಉದ್ಯೋಗಿಗಳ ಶ್ರಮ ಲೂಟಿ ಮಾಡುವ ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ, ‘9-9-6 ನಿಯಮ’ದ ಹೊಸ ಪ್ರಸ್ತಾಪವೂ ಸುದ್ದಿಯಲ್ಲಿದೆ.

ದಕ್ಷ ಗುಪ್ತಾ ಮತ್ತು ಲೂಸಿ ಗುವೊ ಅವರು ಈ ‘9-9-6 ನಿಯಮ’ವು ತಂತ್ರಜ್ಞಾನ ವಲಯಗಳಲ್ಲಿ, ಅದರಲ್ಲೂ ವಿಶೇಷವಾಗಿ ಸ್ಟಾರ್ಟ್‌ಅಪ್‌ಗಳಲ್ಲಿಅಳವಡಿಸಬೇಕು. ಈ ವಿಧಾನವು ತೀವ್ರ ಉತ್ಪಾದಕತೆಗೆ ಸಹಾಯವಾಗುತ್ತದೆ ಎಂದು ವಾದಿಸಿದ್ದಾರೆ.

ನಿಮಯವನ್ನು ಸಮರ್ಥಿಸಿಕೊಂಡಿರುವ ಲೂಸಿ ಗುವೊ, “ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೆ ಕೆಲಸದಿಂದ ನನಗೆ ಕೆಲಸ ಮತ್ತು ಜೀವನವನ್ನು ಸಮತೋಲನವಾಗಿ ನಿಭಾಯಿಸಲು ಸಾಧ್ಯವಾಗಿದೆ. ರಾತ್ರಿ 9 ಗಂಟೆಗೆ, ನೀವು ನಿಮ್ಮ ಸ್ನೇಹಿತರೊಂದಿಗೆ ಊಟಕ್ಕೆ ಹೋಗಬಹುದು. ನೀವು 9ರಿಂದ 9ರವರೆಗೆ ಮಲಗಬೇಕಾಗಿಲ್ಲ. 90 ಗಂಟೆಗಳ ಕೆಲಸದ ವಾರವು ‘ಮುಖ್ಯ’. ಸ್ಪಷ್ಟವಾಗಿ ಹೇಳಬೇಕೆಂದರೆ ನನ್ನ ಸಲಹೆಯು ಉದ್ಯೋಗಿಗಳಿಗೆ ಅಲ್ಲ, ಸಂಸ್ಥಾಪಕರಿಗೆ ಮಾತ್ರ ಸೀಮಿತವಾಗಿದೆ” ಎಂದು ಹೇಳಿಕೊಂಡಿದ್ದಾರೆ.

ಆದಾಗ್ಯೂ, ಈ ನಿಮಯದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಮಾದರಿಯನ್ನು ಕಳಪೆ ಕೆಲಸ ಮತ್ತು ಜೀವನ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಹಲವರು ವಿರೋಧಿಸಿದ್ದಾರೆ.

ಹಲವಾರು ಉದ್ಯಮಿಗಳೂ ಕೂಡ ಕೆಲಸದ ಅವಧಿ ವಿಸ್ತರಣೆಯನ್ನು ಖಂಡಿಸಿದ್ದಾರೆ. ಉದ್ಯಮಿ, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಸಿಇಒ ನಮಿತಾ ಥಾಪರ್, ”ನಾವು ಮಾಲೀಕರು. ಹೆಚ್ಚು ಬಂಡವಾಳ ಹಾಕಿರುತ್ತೇವೆ. ಲಾಭಗಳಿಕೆ ಆದ್ಯತೆಯಾಗಿರುತ್ತದೆ. ಅದಕ್ಕಾಗಿ ನಾವು ಟನ್‌ಗಟ್ಟಲೆ ಕೆಲಸ ಮಾಡಬಹುದು. ದಿನದ 24 ಗಂಟೆಯೂ ಕೆಲಸ ಮಾಡಬಹುದು. ಆದರೆ, ಉದ್ಯೋಗಿಗಳ ಕತೆ ಏನು? ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದು ಅವರ ಮೇಲೆ ಹೆಚ್ಚು ಒತ್ತಡ ಹೇರಿದಂತೆ ಆಗುತ್ತದೆ. ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಅದು ತಪ್ಪು. ಉದ್ಯೋಗಿಗಳಿಗೆ ಸಮಂಜಸವಾದ ಕೆಲಸದ ಸಮಯದ ಮಿತಿ ಇರಬೇಕು” ಎಂದು ಹೇಳಿದ್ದರು.

ಅಂತೆಯೇ, ಕ್ಯೂರ್‌ಫಿಟ್ ಸಂಸ್ಥಾಪಕ ಮುಖೇಶ್ ಬನ್ಸಾಲ್ ಅವರು, “ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ದುಡಿಯಬೇಕೆಂದು ನಿರೀಕ್ಷಿಸುವುದು ಮೂರ್ಖತನ. 40 ಗಂಟೆಗಳ ಸಂಬಳದಲ್ಲಿ 70-90 ಗಂಟೆಗಳ ಕೆಲಸ ಕೇಳಲು ಸಾಧ್ಯವಿಲ್ಲ. ಅದು ಸರಿಯಲ್ಲ” ಎಂದಿದ್ದರು.

ವಾರವೊಂದರಲ್ಲಿ 70 ಗಂಟೆಗಳ ಕಾಲ ದುಡಿಯವುದು ಉದ್ಯೋಗಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಅಧಿಕ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳು ತಲೆದೋರಬಹುದು ಎಂದು ವೈದ್ಯರು ಹೇಳುತ್ತಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

Download Eedina App Android / iOS

X