ಕುನಾಲ್ ಕಮ್ರಾ ಜೊತೆ ಟ್ವೀಟ್‌ ವಾರ್ | ಓಲಾ ಷೇರು ಕುಸಿತ; ಭವಿಶ್ ದುರಹಂಕಾರದ ಫಲವೆಂದ ನೆಟ್ಟಿಗರು

Date:

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವೆ ವಿಚಾರದಲ್ಲಿ ಹಾಸ್ಯನಟ (ಸ್ಟ್ಯಾಂಡಪ್ ಕಾಮಿಡಿಯನ್) ಕುನಾಲ್ ಕಮ್ರಾ ಜೊತೆ ‘ಓಲಾ ಇವಿ’ ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ವಾರ್ ನಡೆಸಿದ ಮರುದಿನವೇ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಷೇರುಗಳು ಕುಸಿತಗೊಂಡಿದೆ.

- Advertisement -

ಇಂದು ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಓಲಾ ಷೇರುಗಳು ಸುಮಾರು ಶೇಕಡ 8ರಷ್ಟು ಕುಸಿದಿದ್ದು ಓಲಾ ಹೂಡಿಕೆದಾರರಿಗೆ ಭಾರೀ ನಷ್ಟ ಉಂಟು ಮಾಡಿದೆ. ವಹಿವಾಟಿನ ಅಂತ್ಯದ ವೇಳೆ ಷೇರಿನ ಬೆಲೆ ಶೇಕಡ 8.38ರಷ್ಟು ಇಳಿದು 90.75ಕ್ಕೆ ಸ್ಥಿರವಾಗಿದೆ. ಭವಿಶ್ ಅಗರ್ವಾಲ್ ಅವರ ದುರಂಕಾರದಿಂದಾಗಿ ನಮಗೆ ನಷ್ಟವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಣೇಶನ್ ಅಯ್ಯರ್ ಎಂಬ ಹೂಡಿಕೆದಾರರು ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭವಿಶ್ ಅಗರ್ವಾಲ್ ಅವರ ದುರಹಂಕಾರವು ಹೂಡಿಕೆದಾರನಾದ ನಾನು ಬೆಲೆ ತೆರುವಂತೆ ಮಾಡಿದೆ. ನಾನು ನನ್ನ ಓಲಾ ಷೇರುಗಳನ್ನು 40 ಸಾವಿರ ರೂಪಾಯಿ ನಷ್ಟಕ್ಕೆ ಮಾರಾಟ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಕೆಟ್ಟು ನಿಲ್ಲುತ್ತಿವೆ ‘ಓಲಾ ಇವಿ’; ಓಲಾ ಸಿಇಒ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವೀಟ್ ವಾರ್

“ಈ ಕಂಪನಿಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ವಿಷಕಾರಿ ವ್ಯಕ್ತಿ ಸಂಸ್ಥೆ ಮುನ್ನಡೆಸುವಾಗ ಸಂಸ್ಥೆಗೆ ಭವಿಷ್ಯವಿಲ್ಲ. ಕುನಾಲ್ ಕಮ್ರಾ ಅವರು ರಾಕ್ಷಸ ಮನಸ್ಥಿತಿಯ ವ್ಯಕ್ತಿಯನ್ನು ಬಯಲು ಮಾಡಿದ್ದಾರೆ. ಇತರ ಹೂಡಿಕೆದಾರರು ಕೂಡಾ ನಷ್ಟದೊಂದಿಗೆ ಓಲಾ ಷೇರಿನಿಂದ ಹೂಡಿಕೆ ಹಿಂಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

“ಓಲಾ ತನ್ನ ಹೂಡಿಕೆದಾರರ ಸಂಪತ್ತನ್ನು ಬರಿದು ಮಾಡಿದೆ. ನಿಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಹೂಡಿಕೆದಾರರ ಬಗ್ಗೆ ತುಂಬಾ ತಿರಸ್ಕಾರವಿದ್ದರೆ ನೀವು ಎಂದಿಗೂ ಸಂಪತ್ತನ್ನು ಗಳಿಸಲು ಸಾಧ್ಯವಿಲ್ಲ” ಎಂದು ಮತ್ತೋರ್ವ ಬಳಕೆದಾರರು ಹೇಳಿದ್ದಾರೆ.

“ನಾನು ಓಲಾ ಗ್ರಾಹಕನಲ್ಲ. ಆದರೆ ಓಲಾ ಹೂಡಿಕೆದಾರನಾಗಿದ್ದೇನೆ. ಭವಿಶ್ ಅಗರ್ವಾಲ್ ಅವರು ಈ ರೀತಿ ಜಗಳವಾಡುವ ಬದಲು ಗ್ರಾಹಕ ಸೇವೆಯನ್ನು ಸುಧಾರಿಸುವತ್ತ ಗಮನ ಹರಿಸಿ ಎಂದು ವಿನಂತಿಸುತ್ತೇನೆ” ಎಂದು ತಿಳಿಸಿದರು.

ಕುನಾಲ್ ಕಮ್ರಾ- ಭವಿಶ್ ಅಗರ್ವಾಲ್ ಟ್ವೀಟ್ ವಾರ್

ಕುನಾಲ್ ಕಮ್ರಾ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಓಲಾ ಸರ್ವೀಸ್‌ ಸೆಂಟರ್‌ ಬಳಿ ನಿಲ್ಲಿಸಲಾಗಿರುವ ರಾಶಿಗಳಷ್ಟು ಓಲಾ ಸ್ಕೂಟರ್‌ಗಳ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಓಲಾ, ರ್‍ಯಾಪಿಡೋಗಳಿಂದ ಬೈಕ್ ಟ್ಯಾಕ್ಸಿ : ಆಟೋ ಚಾಲಕರಿಗೆ ಎದುರಾದ ಮತ್ತೊಂದು ಸಂಕಷ್ಟ

“ಭಾರತೀಯ ಗ್ರಾಹಕರಿಗೆ ಧ್ವನಿ ಇಲ್ಲವೇ? ದ್ವಿಚಕ್ರ ವಾಹನಗಳು ಅನೇಕ ಕೂಲಿ ಕಾರ್ಮಿಕರ ಜೀವನದ ಅವಿಭಾಜ್ಯ ಭಾಗವಾಗಿವೆ. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸಮಸ್ಯೆ ಹೆಚ್ಚುತ್ತಿದೆ. ಕಂಪನಿಯು ತೀರಾ ಕಳಪೆಮಟ್ಟದ ಸೇವೆ ಒದಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಸಮಸ್ಯೆಗಳ ಬಗ್ಗೆ ಕಮೆಂಟ್‌ ಮಾಡಿ” ಎಂದು ಕಮ್ರಾ ಹೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಭವಿಶ್ ಅಗರ್ವಾಲ್ “ಇದು ದುಡ್ಡಿಗಾಗಿ ಮಾಡಿರುವ ಟ್ವೀಟ್ (ಪೇಯ್ಡ್‌ ಟ್ವೀಟ್). ಕಮ್ರಾ ಅವರು ತಮ್ಮ ವಿಫಲ ಹಾಸ್ಯ ವೃತ್ತಿಯಿಂದ ಗಳಿಸುವುದಕ್ಕಿಂತ ಹೆಚ್ಚು ಹಣ ಕೊಡುತ್ತೇನೆ. ನಾವು ಸೇವಾ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ” ಎಂದಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಕಮ್ರಾ, “ನಾನು ಟ್ವೀಟ್‌ ಮಾಡಲು ಹಣ ಪಡೆದಿದ್ದೇನೆ ಎಂದು ನೀವು ಸಾಬೀತುಪಡಿಸಿದರೆ, ಈ ಟ್ವೀಟ್‌ ಮತ್ತು ಈ ಹಿಂದೆ ಖಾಸಗಿ ಕಂಪನಿಗಳ ವಿರುದ್ಧ ಹಾಕಿರುವ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕುತ್ತೇನೆ” ಎಂದು ಹೇಳಿದ್ದರು. ಇಬ್ಬರ ನಡುವೆ ಟ್ವೀಟ್ ವಾರ್ ನಡೆದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...