ಆರ್ಮಿ ಆವರಣದಲ್ಲಿ ಪ್ರೇಮ ನಿವೇದನೆ; ಸೇನಾ ಕ್ಯಾಪ್ಟನ್‌ಗೆ ನಿವೃತ್ತ ಸೇನಾ ಅಧಿಕಾರಿಗಳ ಬೆಂಬಲ

Date:

ಪ್ರೀತಿ ಮತ್ತು ಯುದ್ಧದ ಮೈದಾನದಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವ ಹಳೆಯ ಮಾತಿದೆ. ಆದರೆ, ದೇಶ ಕಾಯುವ ಸೇನಾ ನಿಯಮಾವಳಿಗಳು ಎಲ್ಲಿಗೆ ಕೊನೆಗೊಳ್ಳುತ್ತವೆ ಮತ್ತು ಒಬ್ಬ ಸೈನಿಕನ ವೈಯಕ್ತಿಕ ಸಂತೋಷದ ಅಭಿವ್ಯಕ್ತಿ ಎಲ್ಲಿಂದ ಆರಂಭವಾಗುತ್ತದೆ ಎನ್ನುವ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

- Advertisement -

ಸೇನಾ ವಿಮಾನ ವಿಭಾಗದ ಯುವ ಪೈಲಟ್, ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರು ಮಿಲಿಟರಿ ಹೆಲಿಕಾಪ್ಟರ್ ಮುಂಭಾಗದಲ್ಲಿ ತಮ್ಮ ಭಾವಿ ಪತ್ನಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚರ್ಚೆಯನ್ನೂ ಹುಟ್ಟುಹಾಕಿದೆ. ವಿಮರ್ಶಕರು ಮತ್ತು ಕೆಲವು ನೆಟ್ಟಿಗರು ಇದನ್ನು ಮಿಲಿಟರಿ ಘನತೆ, ಶಿಸ್ತು ಹಾಗೂ ನಿಯಮಾವಳಿಗಳ ಉಲ್ಲಂಘನೆ ಎಂದು ಕರೆದರೆ, ಭಾರತೀಯ ಸೇನೆಯ ಕೆಲವು ನಿವೃತ್ತ ಅಧಿಕಾರಿಗಳು ಭಾರದ್ವಾಜ್ ಅವರ ‘ಲವ್ ಪ್ರಪೋಸ್‌’ಗೆ ಬಂಬಲ ನೀಡಿದ್ದಾರೆ. ಆದಾಗ್ಯೂ, ಅನೇಕರು ಇದನ್ನು ವರ್ಷಗಳ ಕಠಿಣ ಮಿಲಿಟರಿ ತರಬೇತಿಯ ನಂತರದ ವೈಯಕ್ತಿಕ ಸಂತೋಷದ ಕ್ಷಣ ಎಂದು ಕೊಂಡಾಡಿದ್ದಾರೆ. ಯುವಜನರಲ್ಲದೆ ಇನ್ನಾರು ಮಾಡಲು ಸಾಧ್ಯ. ಸೇನೆಯಲ್ಲಿ ಇಂತಹ ಅವಕಾಶಗಳು ಇರಬೇಕು ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಮಹಾರಾಷ್ಟ್ರದ ನಾಸಿಕ್‌ನ ಕಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಭಾರದ್ವಾಜ್ ಸೇರಿದಂತೆ ಹಲವರು ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಪಾಸಿಂಗ್ ಔಟ್ ಪರೇಡ್ ಮತ್ತು ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದ ನಂತರ, ಸೇನಾ ಆವರಣದಲ್ಲಿ ಸೇನೆಯ ಹೆಲಿಕಾಪ್ಟರ್ ಬಳಸಿಕೊಂಡು ತಮ್ಮ ಭಾವಿ ಪತ್ನಿ ಆರುಷಿ ಅವರ ಎದುರು ಭಾರದ್ವಾಜ್ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಮಾಡಿದ್ದಾರೆ, ಆಕೆಗೆ ಉಂಗುರ ತೊಡಿಸಿದ್ದಾರೆ. ಅವರು ಆರ್ಮಿ ಆವರಣದಲ್ಲಿ ‘ಲವ್ ಪ್ರಪೋಸ್’ ಮಾಡಿದ ಕಾರಣಕ್ಕಾಗಿ ಭಾರದ್ವಾಜ್ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಭಾರತೀಯ ಸೇನೆಯು ಈ ವಿಷಯದ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Bharat Bhardwaj

ಇನ್ನು, ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಲವು ಮಾಜಿ ಸೇನಾ ಅಧಿಕಾರಿಗಳು ಭಾರದ್ವಾಜ್ ಪರವಾಗಿ ಮಾತನಾಡಿದ್ದಾರೆ. ನಾರ್ದರ್ನ್ ಆರ್ಮಿಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ಅವರು, “ಯುವ ಅಧಿಕಾರಿಯು ದೇಶದ ಮೇಲಿನ ಪ್ರೀತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಬೇಕೆಂದು ಬಯಸುವ ಸಮಾಜ, ಆತ ತನ್ನ ಭಾವಿ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ವಿರೋಧಿಸುತ್ತಿರುವುದು ಸರಿಯಲ್ಲ” ಎಂದಿದ್ದಾರೆ.

“ಸೇನೆಯಲ್ಲಿ ಯುವಕರು ಇಂತಹ ಸಾಹಸ ಮತ್ತು ಉತ್ಸಾಹ ತೋರದಿದ್ದರೆ ಇನ್ನಾರು ಮಾಡುತ್ತಾರೆ. ಇದರಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ದೇಶದಾದ್ಯಂತ ನಡೆಯುವ ಸೇನಾ ಪ್ರದರ್ಶನಗಳಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಲಿಕಾಪ್ಟರ್ ಹಾಗೂ ಯುದ್ಧೋಪಕರಣಗಳ ಮುಂದೆ ಹೆಮ್ಮೆಯಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಯುವ ಸೈನಿಕನ ಪ್ರೀತಿಯ ಕ್ಷಣಕ್ಕೆ ರಾಷ್ಟ್ರೀಯ ಭದ್ರತೆಯ ಆಯಾಮ ಕೊಡುವುದು ಮೂರ್ಖತನ. ವಿಮರ್ಶಕರು ಸಣ್ಣ ತಪ್ಪುಗಳನ್ನು ಹುಡುಕುವ ಬದಲು ಅಧಿಕಾರಿಯ ವೃತ್ತಿಪರ ಸಾಮರ್ಥ್ಯದ ಕಡೆಗೆ ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

image 143

ಮತ್ತೊಬ್ಬ ಹಿರಿಯ ನಿವೃತ್ತ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಕೂಡ ಈ ಟೀಕೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. “ಸೇನೆಯ ಯುವ ಪೈಲಟ್‌ಗಳು ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ದೂರವಿದ್ದು ದೇಶಕ್ಕಾಗಿ ನಿರಂತರ ಸೇವೆ ಸಲ್ಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ವೈಯಕ್ತಿಕ ಸಂತೋಷಕ್ಕೆ ಅಡ್ಡಿಪಡಿಸಬಾರದು” ಎಂದಿದ್ದಾರೆ.

ಕರ್ನಲ್ ಎ.ಜೆ. ರೈನಾ ಅವರು, “ಒಂದು ವೇಳೆ ಅಲ್ಲಿ ಯಾವುದೇ ನಿಯಮಾವಳಿಗಳ ಉಲ್ಲಂಘನೆಯಾಗಿದ್ದರೆ ಅದನ್ನು ಆಂತರಿಕವಾಗಿ ಹೇಗೆ ನಿಭಾಯಿಸಬೇಕು ಎಂಬುದು ಭಾರತೀಯ ಸೇನೆಗೆ ಚೆನ್ನಾಗಿ ತಿಳಿದಿದೆ. ಅದಕ್ಕೆ ಸಾಮಾಜಿಕ ಮಾಧ್ಯಮಗಳ ತೀರ್ಪು ಬೇಕಾಗಿಲ್ಲ. ಛಾಯಾಚಿತ್ರದಲ್ಲಿರುವ ಪ್ರತಿಯೊಂದು ಹೆಲಿಕಾಪ್ಟರ್ ಕೂಡ ದೇಶದ ತುರ್ತು ಪರಿಸ್ಥಿತಿಯ ಭಾಗವಲ್ಲ” ಎಂದು ಹೇಳಿದ್ದಾರೆ.

image 144

ನಿವೃತ್ತ ಅಧಿಕಾರಿಗಳ ಈ ಬೆಂಬಲವು, ಯುವ ಅಧಿಕಾರಿಯೊಬ್ಬರು ದೇಶದ ಹೆಮ್ಮೆಯ ಸಮವಸ್ತ್ರ ಮತ್ತು ತಮ್ಮ ವೈಯಕ್ತಿಕ ಬದುಕಿನ ಪ್ರೀತಿ ಎರಡನ್ನೂ ಒಟ್ಟಿಗೆ ಗೌರವಿಸಲು ಸಾಧ್ಯವಿದೆ ಮತ್ತು ಒಂದರಿಂದ ಇನ್ನೊಂದರ ಘನತೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...