ನಿರುದ್ಯೋಗ ಹೆಚ್ಚಳಕ್ಕೆ ಮತಗಳ್ಳತನ ನೇರ ಕಾರಣ: ರಾಹುಲ್ ಗಾಂಧಿ

Date:

Advertisements

ನಿರುದ್ಯೋಗ ಹೆಚ್ಚಳಕ್ಕೆ ಮತಗಳ್ಳತನ ನೇರ ಕಾರಣ, ದೇಶದ ಯುವಕರ ಮುಂದಿರುವ ಗಂಭೀರ ಸಮಸ್ಯೆಯಾದ ನಿರುದ್ಯೋಗವು ನೇರವಾಗಿ ಮತ ಕಳ್ಳತನದ ಜೊತೆ ಸಂಬಂಧ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಚುನಾವಣಾ ಪ್ರಕ್ರಿಯೆ ಪ್ರಾಮಾಣಿಕವಾಗುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಿದರು.

“ಯಾವುದೇ ಸರ್ಕಾರ ಸಾರ್ವಜನಿಕ ವಿಶ್ವಾಸದ ಆಧಾರದ ಮೇಲೆ ಅಧಿಕಾರಕ್ಕೆ ಬಂದಾಗ ಅದರ ಮೊದಲ ಜವಾಬ್ದಾರಿ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಆದರೆ ಬಿಜೆಪಿ ಚುನಾವಣೆಗಳನ್ನು ಗೆಲ್ಲುವುದು ಜನರ ಬೆಂಬಲದಿಂದಲ್ಲ, ಬದಲಾಗಿ ಮತ ಕಳ್ಳತನ ಮತ್ತು ಚುನಾವಣಾ ಆಯೋಗದ ದುರುಪಯೋಗದಿಂದ, ಇದೆಲ್ಲದರ ಪರಿಣಾಮವಾಗಿ ನಿರುದ್ಯೋಗವು 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ” ಎಂದು ಹೇಳಿದರು.

“ಉದ್ಯೋಗಗಳು ಕುಸಿಯುತ್ತಿವೆ, ನೇಮಕಾತಿ ಪ್ರಕ್ರಿಯೆಗಳು ಹಾಳಾಗುತ್ತಿವೆ, ಪ್ರತಿಯೊಂದು ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿಯೂ ಭ್ರಷ್ಟಾಚಾರದ ಮೂಲಕವೇ ನಡೆಯುತ್ತಿದೆ,” ಎಂದು ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಯುವಕರ ಶ್ರಮ, ಕನಸು ಮತ್ತು ಹೋರಾಟ ವ್ಯರ್ಥವಾಗುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಮತ್ತು ಕೋಟ್ಯಾಧಿಪತಿಗಳಿಗೆ ಲಾಭ ಕಲ್ಪಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಯುವಕರ ಭರವಸೆಯನ್ನು ಹಾಳುಮಾಡುವುದು, ಅವರನ್ನು ನಿರಾಶೆಗೊಳಿಸುವುದೇ ಈ ಸರ್ಕಾರದ ಗುರುತು. ಇಂದಿನ ನಿಜವಾದ ಹೋರಾಟವು ಉದ್ಯೋಗಕ್ಕಾಗಿ ಮಾತ್ರವಲ್ಲ, ಮತ ಕಳ್ಳತನದ ವಿರುದ್ಧವೂ ಆಗಿದೆ. ಚುನಾವಣೆಗಳಲ್ಲಿ ಮತ ಕಳ್ಳತನ ನಿಲ್ಲುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಯುವಕರು ಇನ್ನು ಮುಂದೆ ಉದ್ಯೋಗ ಕಳ್ಳತನ ಅಥವಾ ಮತ ಕಳ್ಳತನವನ್ನು ಸಹಿಸುವುದಿಲ್ಲ” ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ದೃಶ್ಯ ಹಾಗೂ ಇನ್ನೊಂದೆಡೆ ಪ್ರಧಾನಿ ಮೋದಿ ಸಸಿಗಳನ್ನು ನೆಡುವುದು, ನವಿಲುಗಳಿಗೆ ಆಹಾರ ನೀಡುವುದು ಮತ್ತು ಯೋಗಾಭ್ಯಾಸ ಮಾಡುತ್ತಿರುವ ದೃಶ್ಯಗಳಿರುವ ವಿಡಿಯೊವನ್ನೂ ರಾಹುಲ್ ಗಾಂಧಿ ತಮ್ಮ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X