ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿ ತಡೆಯೊಡ್ಡಿದ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಇಂದು ನಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ ಉತ್ತರ ಪ್ರದೇಶ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವಲ್ಲಿ ವಿಫಲರಾದರು. ಕಡಿಮೆ ಸಂಖ್ಯೆಯ ಪೊಲೀಸರಿದ್ದ ಕಾರಣ ವಿರೋಧಪಕ್ಷದ ನಾಯಕನ ವಿರುದ್ಧ ಬೇಕಂತಲೇ ದಾಳಿ ನಡೆಸಲಾಗಿದೆ ಎಂಬ ಅನುಮಾನ ಮೂಡಿದೆ. ಇದು ವಿರೋಧಪಕ್ಷದ ನಾಯಕನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಹುಲ್ ಗಾಂಧಿ ಅವರು ಹರ್ಚಂದ್‌ಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಥ್ವಾರಾ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?
ಪ್ರತಿಭಟನೆಯ ನಡುವೆಯೂ ರಾಹುಲ್ ಗಾಂಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮತ ಕಳವು ಮಾಡಿದವರೆ ಅಧಿಕಾರದಿಂದ ತೊಲಗಿ. ನಾನು ವೋಟ್ ಚೋರಿಯನ್ನು ವಿವಿಧ ರೂಪಗಳಲ್ಲಿ ಸಾಬೀತುಪಡಿಸುತ್ತೇನೆ” ಎಂದು ಹೇಳಿದರು. ಇದರೊಂದಿಗೆ ಹೈಡ್ರೋಜನ್ ಬಾಂಬ್ ಲೋಡಿಂಗ್ ಆಗುತ್ತಿದೆ. ಶೀಘ್ರದಲ್ಲೇ ಹೊರ ಬರಲಿದೆ ಎಂಬ ಸೂಚನೆ ನೀಡಿದರು. ರಾಹುಲ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ರಾಹುಲ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ರಾಹುಲ್ ಗಾಂಧಿ ಅವರು ಹರ್ಚಂದ್‌ಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಥ್ವಾರಾ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಉತ್ತರ ಪ್ರದೇಶದ ಸಚಿವ ದಿನೇಶ್ ಪ್ರತಾಪ್ ಸಿಂಗ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ” ರಾಹುಲ್ ದೇಶದ ತಾಯಂದಿರಿಂದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
BREAKING : Rahul Gandhi’s convoy attacked by BJP workers in Raebareli
— Ankit Mayank (@mr_mayank) September 10, 2025
Even UP Police also failed to stop the protestors, why such lil force?
Was this a plot against LoP RaGa? pic.twitter.com/OIOsdXbVod
BREAKING : Rahul Gandhi again used ANI mic to convey his message 😂
— Amock_ (@Amockx2022) September 10, 2025
"The main slogan is Vote Chor Gaddi Chhor and i will prove vote chori in different ways"
Hydrogen bomb loading 🔥🔥 pic.twitter.com/1N3Cg60hj8
