ನೀರಿನ ಪಾತ್ರೆ ಮುಟ್ಟಿದ ಕಾರಣಕ್ಕಾಗಿ ದಲಿತ ಬಾಲಕನನ್ನು ಮರಕ್ಕೆ ತಲೆಕೆಳಗಾಗಿ ಕಟ್ಟಿಹಾಕಿ, ಭೀಕರವಾಗಿ ಥಳಿಸಿರುವ ಅಮಾನುಷ ಜಾತಿ ದೌರ್ಜನ್ಯದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಖರ್ಪುರ ಗ್ರಾಮದ ಎಂಟು ವರ್ಷದ ದಲಿತ ಬಾಲಕ ನೀರು ಕುಡಿಯುವ ಉದ್ದೇಶದಿಂದ ಪಾತ್ರೆಯನ್ನು ಮುಟ್ಟಿದ್ದಾರೆ. ಆ ಕಾರಣಕ್ಕಾಗಿ ಬಾಲಕನ ಮೇಲೆ ಪ್ರಬಲ ಜಾತಿಯ ಮೂವರು ಜಾತಿ ದೌರ್ಜನ್ಯ ಎಸಗಿದ್ದಾರೆ. ಬಾಲಕನ ಮೇಲಿನ ಹಲ್ಲೆಯನ್ನು ತಡೆಯಲು ಆತನ ತಾಯಿ ಮತ್ತು ಅರ್ಜಿ ಯತ್ನನಿಸಿದ್ದಾರೆ. ಆದಾಗ್ಯೂ, ಮೂವರು ಅಮಾನುಷವಾಗಿ ಥಳಿಸಿದ್ದಾರೆ.
ಬಾಲಕನ ತಾಯಿ ಪುರಿದೇವಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. “ನನ್ನ ಪುತ್ರ ಆಟವಾಡುತ್ತಿದ್ದಾಗ, ಆತನಿಗೆ ನರನಾರಾಮ್ ಪ್ರಜಾಪತ್ ಮತ್ತು ದೇಮಾರಾಮ್ ಪ್ರಜಾಪತ್ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ. ಅವರು ಹೇಳಿದಂತೆ ಕೆಲಸ ಮುಗಿಸಿದ ಬಾಲಕ, ನೀರು ಕುಡಿಯಲೆಂದು ಪಾತ್ರೆ ಮುಟ್ಟಿದ್ದಾನೆ. ಆ ಕಾರಣಕ್ಕೆ ಆರೋಪಿಗಳು ಬಾಲಕನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), ಸೆಕ್ಷನ್ 127(2) ಮತ್ತು ಸೆಕ್ಷನ್ 137(2) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳ ಬಂಧನಕ್ಕೆ ಹುಟುಕಾಟ ನಡೆಸುತ್ತಿದ್ದಾರೆ ಎಂಧು ಪೊಲೀಸ್ ಅಧಿಕಾರಿ ಸುಖ್ರಾಮ್ ಬಿಷ್ಣೋಯ್ ಹೇಳಿದ್ದಾರೆ.