ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

Date:

Advertisements

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ದೇಶಭಕ್ತರು ಮತ್ತು ಕ್ರಾಂತಿಕಾರಿಗಳನ್ನು ‘ಅರಾಜಕತಾವಾದಿಗಳು’ ಎಂದು ಕರೆದಿತ್ತು. ಬ್ರಿಟಿಷ್ ಆಳ್ವಿಕೆಯ ಪರವಾಗಿ ಕೆಲಸ ಮಾಡಿತ್ತು. ಆರ್‌ಎಸ್‌ಎಸ್‌ ಕೈಗಳು ಮಹಾತ್ಮ ಗಾಂಧಿಯವರ ರಕ್ತದ ಕಲೆಗಳಿಂದ ತುಂಬಿಕೊಂಡಿವೆ ಎಂದು ಕಾಂಗ್ರೆಸ್‌ ಹೇಳಿದೆ.

ಬುಧವಾರ, ಆರ್‌ಎಸ್‌ಎಸ್‌ನ ಶತಮಾನೋತ್ಸವದ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, “ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸ್ಥಾಪಕ ಕೆ.ಬಿ ಹೆಡಗೇವಾರ್ ಸೇರಿದಂತೆ ಹಲವು ಸದಸ್ಯರು ಜೈಲಿಗೆ ಹೋಗಿದ್ದಾರೆ” ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ಕಾಂಗ್ರೆಸ್‌ ಟೀಕಿಸಿದೆ. ಮೋದಿ ಹೇಳಿಕೆ ಸುಳ್ಳು ಎಂದು ಹೇಳಿದೆ.

“ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ. ಹಿಂದುತ್ವ ಸಂಘಟನೆ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಬ್ರಿಟಿಷರೊಂದಿಗೆ ಕೈ ಜೋಡಿಸಿತ್ತು. ಆರ್‌ಎಸ್‌ಎಸ್ ‘ದೇಶವನ್ನು ವಿಭಜಿಸುತ್ತದೆ” ಎಂದು ಕಾಂಗ್ರೆಸ್‌ ಆರೋಪಿಸಿದೆ.

“ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್‌ ನಾಯಕರು ಜೈಲಿಗೆ ಹೋಗಿಲ್ಲ, ಅದನ್ನು ಬ್ರಿಟಿಷರು ಎಂದಿಗೂ ನಿಷೇಧಿಸಿರಲಿಲ್ಲ. 1942ರಲ್ಲಿ ಬ್ರಿಟಿಷರ ವಿರುದ್ಧ ಪ್ರಾರಂಭವಾದ ‘ಕ್ವಿಟ್ ಇಂಡಿಯಾ ಚಳುವಳಿ’ಯ ಸಮಯದಲ್ಲಿ, ಇಡೀ ದೇಶ ಜೈಲಿಗೆ ಹೋಗುತ್ತಿದ್ದಾಗ, ಆರ್‌ಎಸ್‌ಎಸ್ ಈ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು” ಎಂದು ಕಾಂಗ್ರೆಸ್ ತಿಳಿಸಿದೆ.

ಹಿಂದುತ್ವ ಸಂಘಟನೆಯು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ವಿಭಜನೆಯನ್ನು ಸೃಷ್ಟಿಸಿತು. ದೇಶವನ್ನು ಎರಡು ಭಾಗಗಳಾಗಿ ವಿಭಜಿಸಿತು ಮತ್ತು ಅದನ್ನು ಅವಮಾನಿಸಿತು.

ಜನವರಿ 30, 1948 ರಂದು ನವದೆಹಲಿಯಲ್ಲಿ ಮಹಾತ್ಮ ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದನು. ಗೋಡ್ಸೆ ಆರ್‌ಎಸ್‌ಎಸ್ ಸದಸ್ಯನಾಗಿದ್ದನು. ಆದರೆ, ಆ ಹತ್ಯೆಗೆ ಬಹಳ ಹಿಂದೆಯೇ ಆತ ಸಂಘ ತೊರೆದಿದ್ದನೆಂದು ಆರ್‌ಎಸ್‌ಎಸ್‌ ಹೇಳಿಕೊಂಡಿತ್ತು.

ಒಂದು ಶತಮಾನದ ಹಿಂದೆ ರಚನೆಯಾದಾಗಿನಿಂದ ಆರ್‌ಎಸ್‌ಎಸ್ ದೇಶಕ್ಕೆ ಪ್ರಯೋಜನಕಾರಿಯಾದ ಒಂದೇ ಒಂದು ಕೆಲಸವನ್ನು ಮಾಡಿಲ್ಲ, ಬದಲಾಗಿ ಕೇವಲ ಹಾನಿಯನ್ನುಂಟುಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.

ಆರ್‌ಎಸ್‌ಎಸ್‌ನಂತಹ ಕೋಮುವಾದಿ ಮತ್ತು ದ್ವೇಷಪೂರಿತ ಸಂಘಟನೆಯ ಕಾರ್ಯಕರ್ತರು ನೇರವಾಗಿ ಸರ್ಕಾರವನ್ನು ನಡೆಸುತ್ತಿರುವುದು ನಮ್ಮ ದೇಶದ ದುರಂತ. ಸಂವಿಧಾನಕ್ಕಿಂತ ಮನುಸ್ಮೃತಿಯನ್ನು ಯಾವಾಗಲೂ ಪ್ರತಿಪಾದಿಸುವವರು ಈಗ ನಮ್ಮ ದೇಶದಲ್ಲಿ ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳಾಗುತ್ತಿದ್ದಾರೆ. ಅವರಿಂದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, ಆರ್‌ಎಸ್‌ಎಸ್‌ಗೆ ಇರುವುದು ಒಂದೇ ಒಂದು ಕಾರ್ಯಸೂಚಿ, ಅದು ದೇಶದಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಹೆಚ್ಚಿಸುವ ಮೂಲಕ ಅಧಿಕಾರ ಪಡೆಯುವುದು. ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ದ್ವೇಷ ಮತ್ತು ಉನ್ಮಾದವನ್ನು ಹರಡುವುದು ಎಂದು ಹೇಳಿದೆ.

ದೇಶದ ಹೆಚ್ಚಿನ ಸಮಸ್ಯೆಗಳಿಗೆ ಆರ್‌ಎಸ್‌ಎಸ್ ಮೂಲ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ. ಈ ಸಂಘಟನೆ ದೇಶಕ್ಕೆ ಬೆಂಕಿ ಹಚ್ಚುವುದನ್ನು ಮತ್ತು ಅದನ್ನು ಅವಮಾನಿಸುವುದನ್ನು ನಿಲ್ಲಿಸಿದ ದಿನ ದೇಶದ ಅರ್ಧಕ್ಕಿಂತ ಹೆಚ್ಚು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಪಕ್ಷವು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X