ಮೋದಿ-ಅದಾನಿ ಸಾಕ್ಷ್ಯಚಿತ್ರ ಹಂಚಿಕೆ; 24 ಎಕ್ಸ್ ಖಾತೆದಾರರಿಗೆ ಮುಂಬೈ ಪೊಲೀಸರ ನೋಟಿಸ್

Date:

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಕುರಿತ ಸಾಕ್ಷ್ಯಚಿತ್ರವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಆರೋಪದ ಮೇಲೆ ಸುಮಾರು 24 ಖಾತೆದಾರರಿಗೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. Hotmail ಸಹಸಂಸ್ಥಾಪಕ ಸಬೀರ್ ಭಾಟಿಯಾ ನಿರ್ದೇಶನದ ಈ ಸಾಕ್ಷ್ಯಚಿತ್ರದಲ್ಲಿ ಮೋದಿ ಹಾಗೂ ಅದಾನಿ ಅವರ ಮೇಲೆ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

“How Adani and Modi Stole India” ಹೆಸರಿನ ಈ ಸಾಕ್ಷ್ಯಚಿತ್ರವು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಯೂಟ್ಯೂಬ್ ಮತ್ತು ಮೆಟಾ ಸೇರಿದಂತೆ ಆನ್‌ಲೈನ್ ವೇದಿಕೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು‌ ವಿಡಿಯೋವನ್ನು ತೆಗೆದುಹಾಕುವಂತೆ ಸೂಚನೆ ನೀಡಿದ ಬಳಿಕ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಮುಂಬೈ ಪೊಲೀಸರ ಪಶ್ಚಿಮ ವಲಯದ ಸೈಬರ್ ವಿಭಾಗಕ್ಕೆ ಹಲವು ಎಕ್ಸ್ ಖಾತೆಗಳ ಮೂಲಕ ಪ್ರಮುಖ ಕಂಪನಿಯೊಂದನ್ನು ಗುರಿಯಾಗಿಸಿಕೊಂಡ ಆಕ್ಷೇಪಾರ್ಹ ವಿಷಯವನ್ನು ಪ್ರಕಟಿಸಿ ಹರಡಲಾಗುತ್ತಿದೆ ಎಂಬ ದೂರು ಬಂದಿತ್ತು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಂಬಂಧಿತ ಪೋಸ್ಟ್‌ಗಳಲ್ಲಿ ಸುಳ್ಳು, ದಾರಿತಪ್ಪಿಸುವ ಹಾಗೂ ಮಾನಹಾನಿಕರ ಹೇಳಿಕೆಗಳು ಮತ್ತು ಆರೋಪಗಳಿವೆ. ಯಾವುದೇ ಸ್ಪಷ್ಟವಾದ ವಾಸ್ತವಿಕ ಅಥವಾ ಕಾನೂನುಬದ್ಧ ಆಧಾರವಿಲ್ಲದೆ ಇವುಗಳನ್ನು ವಿವಿಧ ಎಕ್ಸ್ ಖಾತೆಗಳ ಮೂಲಕ ಸಾರ್ವಜನಿಕವಾಗಿ ಹರಡಲಾಗುತ್ತಿದ್ದು, ಇದರಿಂದ ಕಂಪನಿಯ ಹೆಸರು, ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ವರ್ಚಸ್ಸಿಗೆ ಗಂಭೀರ ಹಾನಿಯಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 352 ಮತ್ತು 356ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಅಂಶಗಳನ್ನು ಪೊಲೀಸರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಸೆಕ್ಷನ್ 352 ಉದ್ದೇಶಪೂರ್ವಕ ಅವಮಾನಕ್ಕೆ ಸಂಬಂಧಿಸಿದ್ದರೆ, ಸೆಕ್ಷನ್ 356 ಮಾನಹಾನಿಗೆ ಸಂಬಂಧಿಸಿದೆ. ವಿವಾದಿತ ಪೋಸ್ಟ್‌ಗಳನ್ನು ತುರ್ತಾಗಿ ಪರಿಶೀಲಿಸಿ, ಅನ್ವಯಿಸುವ ಕಾನೂನು ಮತ್ತು ಎಕ್ಸ್‌ನ ನೀತಿಗಳಿಗೆ ಅನುಗುಣವಾಗಿ ಅವುಗಳನ್ನು ತೆಗೆದುಹಾಕಲು ಅಥವಾ ಅವುಗಳಿಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರು ಎಕ್ಸ್ ಸಂಸ್ಥೆಯನ್ನು ಕೋರಿದ್ದಾರೆ.

ನೋಟಿಸ್ ಪಡೆದಿರುವ ಕೆಲವು ಎಕ್ಸ್ ಖಾತೆದಾರರು ಈಗಾಗಲೇ ವಿಡಿಯೋವನ್ನು ತೆಗೆದುಹಾಕಿದ್ದಾರೆ. ಇನ್ನು ಕೆಲವರು ಪೊಲೀಸರ ನೋಟಿಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಈ ಕ್ರಮ ಅನ್ಯಾಯಕರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ರಾಜಕೀಯವಾಗಿ ಸೂಕ್ಷ್ಮವಾದ ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನಹಾನಿ ಕಾನೂನುಗಳು ಮತ್ತು ಆನ್‌ಲೈನ್ ವಿಷಯಗಳ ನಿಯಂತ್ರಣದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?

ಈ ವಿವಾದಿತ ಡಾಕ್ಯುಮೆಂಟರಿ ವಿಡಿಯೋವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಪಕ್ಷದ ಸ್ಥಾಪಕ ರಾಜ್‌ ಠಾಕ್ರೆ, ಉದ್ಯಮಿ ಮೊಯಿನ್‌ ಖುರೇಷಿ, ಪತ್ರಕರ್ತರಾದ ಮೊಹಮ್ಮದ್‌ ಜುಬೇರ್‌ ಹಾಗೂ ಧನ್ಯಾ ರಾಜೇಂದ್ರನ್‌ ಸೇರಿದಂತೆ ಹಲವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇವರಿಗೂ ಮುಂಬೈ ಪೊಲೀಸರು ನೋಟಿಸ್‌ ನೀಡಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ವೇದಿಕೆಯಲ್ಲಿ ಕಂಗಟಿ ಗ್ರಾಮದ ಮಹಿಳೆಯರ ಕೋಲಾಟ ಪ್ರದರ್ಶನ

ನಾಡಹಬ್ಬ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ...

ಏಕನಾಥ ಶಿಂಧೆ ಒಲಿಸಿಕೊಳ್ಳಲು 500 ಕೋಟಿ ಹಣ ನೀಡಿದ ಬಿಜೆಪಿ: ಜಾರಂಗೆ ಪಾಟೀಲ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಬಿಡುಗಡೆ ಮಾಡಿರುವ ವಿವಾದಾತ್ಮಕ ಆಡಿಯೊ...

ಏಷ್ಯನ್ ಪ್ಯಾರಾ ಗೇಮ್ಸ್: ಸಂದೀಪ್, ಹನಿಗೆ ವಿಶ್ವ ದಾಖಲೆಯ ಚಿನ್ನ; ಭಾರತಕ್ಕೆ 100ನೇ ಪದಕದ ಸಂಭ್ರಮ

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು...

ಅರುಣಾಚಲ ಗಡಿಯ ಹಲವೆಡೆ ಚೀನಾ ಸೇನೆ ಜೊತೆ ಸಂಘರ್ಷ ಮುಂದುವರಿಕೆ: ಐಟಿಬಿಪಿ ಮಹಾನಿರ್ದೇಶಕ

ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಸೇನೆಯ ಜೊತೆಗಿನ ಮುಖಾಮುಖಿ ಹಾಗೂ...