‘ವಿಶ್ವಗುರು’ ಎಂಬ ಅಸಂಬದ್ಧ ಪ್ರಲಾಪ ನಿಲ್ಲಿಸಿ, ಕೇಳಿ ಸಾಕಾಗಿದೆ: ಗಾಯಕಿ ಅನುರಾಧಾ ಪೌದ್ವಾಲ್

Date:

ಭಾರತವನ್ನು ‘ವಿಶ್ವಗುರು’ ಎಂದು ಕರೆಯುವ ಅಸಂಬದ್ಧ ಪ್ರಲಾಪವನ್ನು ಮೊದಲು ನಿಲ್ಲಿಸಿ, ಇದನ್ನು ಕೇಳಿ ಕೇಳಿ ಭ್ರಮನಿರಸನವಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಶ್ರೀ ಪುರಸ್ಕೃತ ಅನುರಾಧಾ ಪೌದ್ವಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸಾವಿರಾರು ಶಾಲೆಗಳು ಮುಚ್ಚಲ್ಪಟ್ಟಿರುವಾಗ ‘ವಿಶ್ವಗುರು’ ಎಂಬ ಬಿರುದು ಅರ್ಥಹೀನ ಎಂದು ಟೀಕಿಸಿದ್ದಾರೆ.

- Advertisement -

ಏನಿದು ಘಟನೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅನುರಾಧಾ, ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. “ಕೆಲವು ವರ್ಷಗಳ ಹಿಂದೆ ನಾನೂ ಕೂಡ ಭಾರತ ವಿಶ್ವಗುರು ಆಗುತ್ತದೆ ಎಂದು ನಂಬಿದ್ದೆ. ಆದರೆ, ಈಗ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ವಿರುದ್ಧವಾಗಿವೆ. ದೇಶದಲ್ಲಿ 93 ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ. ಇಂತಹ ಸ್ಥಿತಿಯಲ್ಲಿ ನಾವು ಹೇಗೆ ವಿಶ್ವಗುರುವಾಗಲು ಸಾಧ್ಯ? ಒಂದೋ ನಾವು ವಿಶ್ವಗುರು ಎಂಬ ಘೋಷಣೆಯನ್ನು ನಿಲ್ಲಿಸಬೇಕು ಅಥವಾ ನಡೆಯುತ್ತಿರುವ ಇಂತಹ ಮೂರ್ಖತನದ ಕೆಲಸಗಳನ್ನು ನಿಲ್ಲಿಸಬೇಕು” ಎಂದಿದ್ದಾರೆ.

“ನಾವು ಶಿಕ್ಷಿತರಾಗಲು ಬಯಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತಿಲ್ಲ. ಕನಸು ಕಾಣುವುದರಿಂದ ಮಾತ್ರ ದೇಶ ಮುನ್ನಡೆಯಲು ಸಾಧ್ಯವಿಲ್ಲ, ಅದಕ್ಕಾಗಿ ವಾಸ್ತವದಲ್ಲಿ ಕೆಲಸ ಮಾಡಬೇಕು. ಇನ್ನು ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ದೇವಾಲಯಗಳಲ್ಲೇ ದರೋಡೆ ನಡೆಯುತ್ತಿದೆ. ನಾನು ವಿಶ್ವಗುರು ಎನ್ನುವ ಪರಿಕಲ್ಪನೆಯ ವಿರೋಧಿಯಲ್ಲ, ಆದರೆ ಆ ಗುರಿ ತಲುಪಲು ಸರ್ಕಾರ ಪಾಲಿಸುತ್ತಿರುವ ಮಾನದಂಡಗಳ ಪಟ್ಟಿ ಕೊಡಿ, ಅದರಂತೆ ನಾವು ನಡೆಯೋಣ” ಎಂದು ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ವಾಂಗ್ಚುಕ್ ಉಪವಾಸ ಬೆಂಬಲಿಸಿ ಜುಲೈ 20ಕ್ಕೆ ಸಂಸತ್ ಚಲೋ: CJP ಕರೆ

ಇದೇ ರೀತಿ ಸರ್ಕಾರದ ಪರ-ವಿರೋಧ ಹೇಳಿಕೆಗಳಿಂದ ಕೆಲ ಸೆಲೆಬ್ರಿಟಿಗಳು ದನಿ ಎತ್ತುತ್ತಿದ್ದಾರೆ. ನಟ ಅನುಪಮ್ ಖೇರ್, ಇತ್ತೀಚೆಗೆ ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ರಾಮಮಂದಿರದ ದೇಣಿಗೆ ಕಳುವಾದ ವಿಷಯವನ್ನು ಪ್ರಸ್ತಾಪಿಸಿ, ಅದನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡಿದ್ದರು. “ಮುಘಲರು ನಮ್ಮ ದೇವಾಲಯಗಳನ್ನು ನಾಶಪಡಿಸಿದಾಗ ನಿಜವಾದ ಲೂಟಿ ನಡೆದಿತ್ತು. ಅಂದು ಮುಘಲರು ಬ್ರಾಹ್ಮಣರನ್ನು ಕೊಂದು ಅವರ ಜನಿವಾರಗಳನ್ನು ಸಂಗ್ರಹಿಸಿ ತೂಕ ಹಾಕುತ್ತಿದ್ದರು, ಅಂದು ನಡೆದಿದ್ದು ಅಸಲಿ ಲೂಟಿ” ಎಂದು ಅವರು ವಾದಿಸಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಪ್ರಸಿದ್ಧ ಯೂಟ್ಯೂಬರ್ ಸೌರವ್ ಜೋಶಿ ಅವರು ಇತ್ತೀಚೆಗೆ ಒಂದು ವಿಡಿಯೋ ಪೋಸ್ಟ್ ಮಾಡಿ, ತಮ್ಮ ಮರ್ಸಿಡಿಸ್ ಕಾರಿನಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಳಸಿದ ನಂತರ ಮೈಲೇಜ್ 15 ರಿಂದ 5ಕ್ಕೆ ಇಳಿದಿದೆ ಎಂದು ದೂರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...

2018ರ ಪ್ರಕರಣ: ಸಿಜೆಪಿ ಪ್ರತಿಭಟನೆ ಹೊತ್ತಿನಲೇ ಧೃವ್ ರಾಠಿಗೆ ಹೊಸ ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್

ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ 2018ರ...

ಸೌದಿ ಅರಾಮ್ಕೊ ಪ್ರಧಾನ ಕಚೇರಿ ಮೇಲೆ ದಾಳಿ: ಮತ್ತೆ ಪುಟಿದೆದ್ದರೇ ಹೂತಿ ಬಂಡುಕೋರರು?

ಯೆಮನ್‌ನ ಹೂತಿ ಬಂಡುಕೋರರು ಸೌದಿ ಅರೇಬಿಯಾದ ಧಹ್ರಾನ್‌ನಲ್ಲಿರುವ ತೈಲ ದೈತ್ಯ ಕಂಪನಿ...

ಈ ದಿನ ಸಂಪಾದಕೀಯ | ಕಹಿ ನುಂಗುತ್ತಿರುವ ಕೃಷಿಕರು, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ದುಷ್ಟರು

ರೈತರು ಆಕ್ರೋಶಗೊಳ್ಳಲು, ಬೀದಿಗೆ ಇಳಿದು ಪ್ರತಿಭಟಿಸಲು ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ...