ಮಹಿಳೆಯನ್ನು ಅತ್ಯಾಚಾರದಿಂದ ಪಾರು ಮಾಡಿದ ಬೀದಿ ನಾಯಿ!

Date:

ಬೀದಿ ನಾಯಿಯೊಂದು ಮಹಿಳೆಯನ್ನು ಪಾರು ಮಾಡಿದ ಘಟನೆ ಮುಂಬೈನಲ್ಲಿ ಇತ್ತೀಚೆಗೆ ನಡೆದಿದೆ ಎಂದು ಮಿಡ್ ಡೇ ಮುಂಬೈ ವರದಿ ಮಾಡಿದೆ. ಜೂನ್ 30ರಂದು ವಸಾಯಿಯ ತುಂಗರೇಶ್ವರ ಗಲ್ಲಿಯಲ್ಲಿ 32 ವರ್ಷದ ಅಕೌಂಟೆಂಟ್ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಯತ್ನ ಮಾಡಿದಾಗ ಬೀದಿ ನಾಯಿಯು ಬೊಗಳಿ ಆತನು ಸ್ಥಳದಿಂದ ಕಾಲ್ಕೀಳುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

35 ವರ್ಷ ಪ್ರಾಯದ ಆರೋಪಿ ಸಂದೀಪ್ ಖೋತ್ ಮಹಿಳೆಯನ್ನು ಹಿಂಬಾಲಿಸಿ ಬಂದು ಆಕೆಯನ್ನು ನೆಲಕ್ಕೆ ತಳ್ಳಿ ಆಕೆಯ ಬಾಯಿ ಮುಚ್ಚಿ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಆದರೆ ಅಷ್ಟರಲ್ಲೆ ಸುತ್ತಮುತ್ತಲಿನ ಬೀದಿ ನಾಯಿ ಬೊಗಳಿಕೊಂಡು ಆರೋಪಿಯತ್ತ ಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಿಡ್ ಡೇ ಮುಂಬೈ ವರದಿ ಉಲ್ಲೇಖಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಬೀದಿ ನಾಯಿಗಳು ತನ್ನ ಮೇಲೆ ದಾಳಿ ಮಾಡುವ ಆತಂಕದಲ್ಲಿ ಆರೋಪಿ ಮಹಿಳೆಯ ಮೇಲಿನ ಹಿಡಿತ ಸಡಿಲಗೊಳಿಸುತ್ತಿದ್ದಂತೆ ಮಹಿಳೆ ದುಷ್ಕರ್ಮಿಯನ್ನು ದೂರ ತಳ್ಳಿ ಮುಖ್ಯ ರಸ್ತೆಯತ್ತ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾಳೆ. ಆದರೂ ಆರೋಪಿ ಆಕೆಯ ಐಫೋನ್‌ ಕದ್ದು ಪರಾರಿಯಾಗಿದ್ದಾನೆ.

ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ನಾನು ತುಂಗರೇಶ್ವರ ಲೇನ್ ಮೂಲಕ ನಡೆದು ಝೈಗೋಟ್ ಐವಿಎಫ್ ಕೇಂದ್ರವನ್ನು ತಲುಪಿದಾಗ, 25ರಿಂದ 30ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಏಕಾಏಕಿ ನನ್ನ ಮುಂದೆ ಬಂದು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ಉಲ್ಲೇಖಿಸಲಾಗಿದೆ.

ಬೀದಿ ನಾಯಿ

ಇದನ್ನು ಓದಿದ್ದೀರಾ?  ರಾಯಚೂರು | ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕಿ ಸಾವು

“ಅದಾದ ಬಳಿಕ ನಾನು ಕಿರುಚದಂತೆ ನನ್ನ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚಲು ಪ್ರಯತ್ನ ಪಟ್ಟಿದ್ದಾನೆ. ನನ್ನನ್ನು ನೆಲಕ್ಕೆ ತಳ್ಳಿ ನನ್ನ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲೆ ಬೀದಿ ನಾಯಿಗಳು ಬೊಗಳಲು ಪ್ರಾರಂಭಿಸಿತು. ಆತನ ಹಿಡಿತ ತಪ್ಪಿತು. ನಾನು ಆಗ ಆತನಿಗೆ ಒದ್ದೆ. ಆತ ನನ್ನ ಐಫೋನ್ ಅನ್ನು ಕಸಿದುಕೊಂಡ, ನಾನು ತಪ್ಪಿಸಿಕೊಂಡು ಮುಖ್ಯ ರಸ್ತೆ ಕಡೆಗೆ ಓಡಿದೆ” ಎಂದು ಮಹಿಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮಾಣಿಕಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಜು ಮಾನೆ, “ತುಂಗರೇಶ್ವರ ಗಲ್ಲಿಯು ಮುಖ್ಯ ರಸ್ತೆಗೆ ಒಳ ದಾರಿಯಾಗಿದೆ. ತಡರಾತ್ರಿಯಾದ್ದರಿಂದ ಆ ಪ್ರದೇಶ ತೀರಾ ನಿರ್ಜನವಾಗಿತ್ತು. ಭಾರತ-ದಕ್ಷಿಣ ಆಫ್ರಿಕಾ ಫೈನಲ್‌ ದಿನ ಈ ಘಟನೆ ನಡೆದಿದೆ. ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392, 354, 354 (ಡಿ) ಮತ್ತು 506 ರ ಅಡಿಯಲ್ಲಿ (ಬಿಎನ್‌ಎಸ್‌ ಜಾರಿಗೆ ಬರುವ ಮುನ್ನ ಪ್ರಕರಣ ದಾಖಲು) ಪ್ರಕರಣವನ್ನು ದಾಖಲಿಸಿದ್ದೇವೆ, ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

ಐಫೋನ್ ಕದ್ದು ಸಿಕ್ಕಿಬಿದ್ದ ಕಾಮುಕ!

ಪಿಎಸ್‌ಐ ಹರೀಶ್ ಪಾಟೀಲ್ ಮತ್ತು ಇತರರ ನೇತೃತ್ವದ ತಂಡ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. “ನಾವು ಘಟನೆಯ 24 ಗಂಟೆಗಳ ಒಳಗೆ ಆರೋಪಿಯನ್ನು ಪತ್ತೆಹಚ್ಚಿದ್ದೇವೆ ಮತ್ತು ಅವನನ್ನು ಬಂಧಿಸಿದ್ದೇವೆ” ಎಂದು ಮಾನೆ ಹೇಳಿದ್ದಾರೆ. ಐಫೋನ್‌ ಕದ್ದ ಕಾರಣದಿಂದಾಗಿ ಐಫೋನ್ ಟ್ರೇಸ್ ಮಾಡಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿದ್ದೀರಾ?  ಉತ್ತರ ಪ್ರದೇಶ| ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕಿ ಬಲಿ

ಆರೋಪಿ ಸಂದೀಪ್ ಖೋತ್ ಈ ಹಿಂದೆ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಜನರನ್ನು ವಂಚಿಸಿದ ಆರೋಪವನ್ನು ಹೊಂದಿದ್ದಾನೆ. ವಂಚನೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತ ವಿವಾಹಿತನಾಗಿದ್ದು, ಈತನ ದುಷ್ಕೃತ್ಯಗಳನ್ನು ನೋಡಿ ಮನೆಯಿಂದ ಹೊರಹಾಕಲಾಗಿದೆ.

Illustrations/Uday Mohite

ಕೃಪೆ: ಮಿಡ್ ಡೇ ಮುಂಬೈ

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಸ್ವಾತಂತ್ರ್ಯ ಹೋರಾಟ ಹಿನ್ನೆಲೆಯುಳ್ಳ BSP ನಾಯಕ ಸುಧೀಂದ್ರ ಭದೋರಿಯಾ ಕುಟುಂಬದ ಹೆಸರುಗಳು ಡಿಲೀಟ್‌

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಬಿಎಸ್‌ಪಿ ಹಿರಿಯ ನಾಯಕ, ಮಾಜಿ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್ ಸಾಹೇಬ್’

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ...

ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ಸಾಕ್ಷ್ಯ ಸಂಗ್ರಹಕ್ಕೆ ಸುಪ್ರೀಂ ಕೋರ್ಟ್ ಸಮಿತಿಯಿಂದ ವಿಶೇಷ ಪೋರ್ಟಲ್

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆ ವೇಳೆ ಪೆಲೆಟ್...

ಜನಗಣತಿಯಲ್ಲೂ ಆರೆಸ್ಸೆಸ್‌ ಹಸ್ತಕ್ಷೇಪದ ಆತಂಕ: ಕೇಂದ್ರದ ಹೊಸ ನಿಯಮಕ್ಕೆ ಕಾಂಗ್ರೆಸ್ ಆಕ್ಷೇಪ!

2027ರ ಜನಗಣತಿಗೆ ಗಣತಿದಾರರಾಗಿ ಕಾರ್ಯನಿರ್ವಹಿಸುವವರ ಅರ್ಹತಾ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿರುವುದು...