ಸರ್ಕಾರಿ ಹಾಸ್ಟೆಲ್‌ನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ (ಐಟಿಐ) ವಿದ್ಯಾರ್ಥಿಯೊಬ್ಬನನ್ನು ಆತನ ಸಹಪಾಠಿಗಳು ವಿವಸ್ತ್ರಗೊಳಿಸಿ, ಚಪ್ಪಲಿಯಿಂದ ಹೊಡೆದು ದೌರ್ಜನ್ಯ ಎಸಗಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಪ್ರಕರಣದಲ್ಲಿ ಮೂವರು ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಬಾಲಾಪರಾಧಿ ಗೃಹಕ್ಕೆ ಕಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಂತ್ರಸ್ತ ವಿದ್ಯಾರ್ಥಿ ವಿವಸ್ತ್ರನಾಗಿರುವುದು ಮತ್ತು ಆತನಿಗೆ ಕೆಲವು ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ.
ಸಂತ್ರಸ್ತ ವಿದ್ಯಾರ್ಥಿಯು ತನ್ನ ಪ್ಯಾಂಟ್ ಧರಿಸಲು ಅವಕಾಶ ನೀಡುವಂತೆ ಸಹಪಾಠಿಗಳ ಬಳಿ ಬೇಡಿಕೊಂಡರೂ, ಆರೋಪಿ ಬಾಲಕರು ಆತನ ಮೇಲೆ ದೌರ್ಜನ್ಯ ಮುಂದುವರೆಸಿದ್ದಾರೆ. ಆರೋಪಿತ ಮೂವರು ಬಾಲಕರಲ್ಲಿ ಓರ್ವ ಘಟನೆಯನ್ನು ಚಿತ್ರೀಕಸಿದ್ದು, ಇಬ್ಬರ ಸಂತ್ರಸ್ತ ವಿದ್ಯಾರ್ಥಿಗೆ ಚಪ್ಪಲಿಯಲ್ಲಿ ಹೊಡೆತ್ತಿರುವುದು ಹಾಗೂ ಮೂರನೇ ಬಾಲಕ ಸಂತ್ರಸ್ತ ಖಾಸಗಿ ಅಂಗಗಳ ಕುರಿತು ಅಶ್ಲೀಲವಾಗಿ ಮಾತನಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ.
“ವಿದ್ಯಾರ್ಥಿಗಳು ಐಟಿಐನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚೆಕ್ಕನೂರಾನಿಯಲ್ಲಿರುವ ಕಲ್ಲಾರ್ ರಿಕ್ಲಮೇಷನ್ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ಆರೋಪಿ ಬಾಲಕರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.