ಇಸ್ಲಾಂ ನಂಬಿಕೆ ಹಾಗೂ ಮುಸ್ಲಿಂ ಮಹಿಳೆಯರ ವಿವಾಹದ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿರುವ ಆರೋಪಗಳ ಮೇಲೆ ಜೂನ್ 14 ರಂದು ಬಿಡುಗಡೆಯಾಗಬೇಕಿರುವ ಅನ್ನು ಕಪೂರ್ ಅವರ ‘ಹಮಾರೆ ಬಾರಹ್’ ಸಿನಿಮಾಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಹಾಗೂ ಸಂದೀಪ್ ಮರಹ್ತಾ ಅವರನ್ನೊಳಗೊಂಡ ರಜಾಕಾಲದ ಪೀಠ ವಕೀಲರಾದ ಫೌಜಿಯಾ ಶಕೀಲ್ ಅವರ ಸಲ್ಲಿಸಿದ್ದ ಅರ್ಜಿಯನ್ನು ಗಮನಿಸಿತು. ಹಾಗೆಯೇ ಈ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿತು.
“ನಾವು ಇಂದು ಮುಂಜಾನೆ ಸಿನಿಮಾದ ಟ್ರೈಲರ್‌ಅನ್ನು ನೋಡಿದ್ದೇವೆ. ಚಿತ್ರದಲ್ಲಿರುವ ಎಲ್ಲ ಪ್ರಚೋದನಾಕಾರಿ ಸಂಭಾಷಣೆಗಳು ಹಾಗೆಯೇ ಮುಂದುವರೆದಿವೆ” ಎಂದು ಗಮನಿಸಿದ ಪೀಠ ಸಿನಿಮಾ ಬಿಡುಗಡೆಗೆ ತಡೆ ನೀಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ಈ ವಿವಾದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಲೇವಾರಿ ಮಾಡುವ ತನಕ ಸುಪ್ರೀಂ ಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಸೂಕ್ತ ಕಾರಣ ನೀಡದೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ ಎಂದು ತಡೆಯಾಜ್ಞೆಗೆ ಕೋರಿ ಸಲ್ಲಿಸಿದ ಅರ್ಜಿದಾರರಾದ ಅಜರ್ ಭಾಷ ತಂಬೊಲೈ ಪರ ವಕೀಲ ಶಕೀಲ್ ಅವರು ಕೋರ್ಟ್‌ಗೆ ಮಾಹಿತಿ ನೀಡಿದರು.
“ಪ್ರಕರಣದಲ್ಲಿ ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ(ಸಿಬಿಎಫ್‌ಸಿ) ಕೂಡ ಕಕ್ಷಿದಾರರಾಗಿರುವ ಕಾರಣ ಬಾಂಬೆ ಹೈಕೋರ್ಟ್ ಸಿಬಿಎಫ್‌ಸಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ” ಎಂದು ವಕೀಲರಾದ ಶಕೀಲ್ ತಿಳಿಸಿದರು.
ವಿವಾದಿತ ಹಮಾರಾ ಬರಹ್ ಸಿನಿಮಾವನ್ನು ಈಗಾಗಲೇ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ.
