ಅಚ್ಛೇ ದಿನಗಳು ಮುಗಿದವು! ಗುಜರಾತ್ ವಜ್ರಗಳ ಉದ್ಯಮ ಭಾರೀ ಹಿಂಜರಿತದಲ್ಲಿ ತತ್ತರ!

Date:

ಗುಜರಾತಿನ ವಜ್ರಗಳ ಉದ್ಯಮವು ತೀವ್ರ ಹಿಂಜರಿತದಲ್ಲಿ ತತ್ತರಿಸಿದೆ. ಸುಮಾರು ಎರಡು ಸಾವಿರ ಫ್ಯಾಕ್ಟರಿಗಳು ಮುಚ್ಚಿ ಹೋಗಿವೆ. ಈ ವರ್ಷ ಇಲ್ಲಿಯವರೆಗೆ 60ಕ್ಕೂ ಹೆಚ್ಚು ವಜ್ರ ಕಾರ್ಮಿಕರು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಸುಮಾರು 2 ಲಕ್ಷ ಮಂದಿ ಕೆಲಸಗಾರರು ನಿರುದ್ಯೋಗ ಎದುರಿಸಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೊರಗಿದ್ದ ಉದ್ಯಮ ಸದ್ಯಕ್ಕೆ ಚೇತರಿಸಿಕೊಳ್ಳುವ ಸೂಚನೆ ಇಲ್ಲ.

ತಮ್ಮ ಕಂಪನಿಯ ಉದ್ಯೋಗಿಗಳಿಗೆ 600 ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ಕೊಟ್ಟಿದ್ದ ದಿನಗಳನ್ನು ಕಂಡಿದ್ದ ಉದ್ಯಮವಿದು. ಆರು ವರ್ಷಗಳ ಹಿಂದೆ ಸೂರತ್ ನ ವಜ್ರದ ವರ್ತಕ ಸಾವಜಿಭಾಯಿ ಧೋಲಾಕಿಯ 600 ಕಾರುಗಳ ಜೊತೆಗೆ 50 ಲಕ್ಷ ರುಪಾಯಿಯಿಂದ ಒಂದು ಕೋಟಿವರೆಗಿನ ಜೀವವಿಮೆಯ ಉಡುಗೊರೆ ನೀಡಿದ್ದುಂಟು.

ಈ ಉದ್ಯಮ ಇಂತಹ ತೀವ್ರ ಬಿಕ್ಕಟ್ಟನ್ನು ಎದುರಿಸಿರುವುದು ಕಳೆದ 50 ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ.
ಸೂರತ್ ನಗರ ವಜ್ರಗಳ ಉದ್ಯಮ ಕೇಂದ್ರ. ದೀಪಾವಳಿಯ ನಂತರ ಇಲ್ಲಿನ ಶೇ.40ರಷ್ಟು ಫ್ಯಾಕ್ಟರಿಗಳು ಕದ ತೆಗೆದೇ ಇಲ್ಲ. ಅಹ್ಮದಾಬಾದ್ ನಲ್ಲಿ ಶೇ30ರಷ್ಟು ಫ್ಯಾಕ್ಟರಿಗಳು ಮುಚ್ಚಿವೆ. ರಾಜಕೋಟೆ, ಅಮ್ರೇಲಿ, ಭಾವನಗರ ಹಾಗೂ ಬೋಟದ್ ನಗರಗಳಲ್ಲಿನ ಶೇ.50-60ರಷ್ಟು ವಜ್ರದ ಉದ್ಯಮಗಳು ಬಂದ್ ಆಗಿವೆ.

ದಿನಕ್ಕೆ 12 ತಾಸುಗಳ ಕಾಲ ನಡೆಯುತ್ತಿದ್ದ ಫ್ಯಾಕ್ಟರಿಗಳು ಇದೀಗ ಆರು ತಾಸು ನಡೆದರೆ ಹೆಚ್ಚು. ಉದ್ಯೋಗಿಗಳ ಮಾಸಿಕ ಸಂಪಾದನೆ 25-30 ಸಾವಿರ ರುಪಾಯಿಗಳಿಂದ 8ರಿಂದ 12 ಸಾವಿರಕ್ಕೆ ಕುಸಿದಿದೆ. ಆಭರಣ ತಯಾರಿಸುವ ಕುಶಲಕರ್ಮಿಗಳ ವೇತನಗಳು ಶೇ.50ರಷ್ಟು ಕುಸಿದಿವೆ ಎಂದಿದ್ದಾರೆ ಗುಜರಾತ್ ಡೈಮಂಡ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಜಿಲಾರಿಯ.

ಕಳೆದ ಮೂರು ವರ್ಷಗಳಿಂದ ವಜ್ರಗಳ ವಲಯ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕಾ, ರಫ್ತು ಮಾರುಕಟ್ಟೆಯ ಕುಸಿತ ಮತ್ತು ರಷ್ಯನ್ ಮೂಲದ ವಜ್ರಗಳ ಮೇಲೆ ಜಿ-7 ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ಈ ಬಿಕ್ಕಟ್ಟಿನ ಮೂಲ ಕಾರಣಗಳು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಇತ್ತೀಚೆಗೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದೆ.

ಇತ್ತೀಚೆಗೆ ಪ್ರಯೋಗಾಲಯಗಳಲ್ಲಿ ಬೆಳೆಯಲಾಗುವ ಕೃತಕ ವಜ್ರಗಳು ಜನಪ್ರಿಯವಾಗತೊಡಗಿವೆ. ಈ ಉದ್ಯಮ 8,19,926 ಮಂದಿ ಉದ್ಯೋಗಿಗಳನ್ನು ಹೊಂದಿದೆ ಎಂದು ಎನ್.ಸಿ.ಎ.ಇ.ಆರ್. ಅಂಕಿಅಂಶಗಳು ಹೇಳುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...