ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಆಕೆಯ ಮೇಲೆ ಬಿಜೆಪಿ ಶಾಸಕನ ಸಹಚರರು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದು, ಆಕೆಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆಯ ಪತಿ ಆರೋಪಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋಮತಿ ಜಿಲ್ಲೆಯ ಕಾಕರಾಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿರ್ಜಾದಲ್ಲಿ ಘಟನೆ ನಡೆದಿದೆ. ಘಟನೆಯ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಕ್ರಬನ್-ಸಲ್ಗಢ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿತೇಂದ್ರ ಮಜುಂದರ್ ಅವರ ಸೋದರಳಿಯ ಮನ್ನಾ ಮಜುಂದರ್ ಸೇರಿದಂತೆ ಮೂವರುಶುಕ್ರವಾರ ರಾತ್ರಿ ಮಹಿಳೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಕೆಯ ಪತ್ನಿ ಆರೋಪಿಸಿದ್ದಾರೆ.
ಆದಾಗ್ಯೂ, ಮೃತ ಮಹಿಳೆಯ ಪತಿ ನೀಡಿದ ದೂರನ್ನು ಸ್ವೀಕರಿಸಲು ಪೊಲೀಸರು ಆರಂಭದಲ್ಲಿ ನಿರಾಕರಿಸಿದ್ದರು ಎಂದು ಆರೋಪಿಸಲಾಗಿದೆ. ಪರಿಣಾಮ, ಪೊಲೀಸ್ ಅಧಿಕಾರಿ ಒಬ್ಬರನ್ನು ಅಮಾನತು ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಣಕಾಸು ಸಚಿವ ಪ್ರಣಜಿತ್ ಸಿಂಘಾ ರಾಯ್ ಭರವಸೆ ನೀಡಿದ್ದಾರೆ.
ಘಟನೆ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಮಾಣಿಕ್ ಸಹಾ, “ಮಿರ್ಜಾನಲ್ಲಿ ನಡೆದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?; ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
“ಆರಂಭದಲ್ಲಿ ನಾವು ಅಸಹಜ ಸಾವು ಎಂದು ಪ್ರಕರಣವನ್ನು ದಾಖಲಿಸಿದ್ದೆವು. ನಂತರ, ಆಕೆಯ ಸಾವಿಗೆ ಕಾರಣರಾದವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಡಿಉಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ. ತನಿಖೆಯ ವೇಳೆ ಅಧಿಕ ಮಾಹಿತಿ ದೊರೆತರೆ, ಅದರ ಆಧಾರದ ಮೇಲೆ ಬಿಎನ್ಎಸ್ ಅಡಿಯಲ್ಲಿ ಹೆಚ್ಚಿನ ಸೆಕ್ಷನ್ಗಳನ್ನು ಸೇರಿಸಲಾಗುವುದು” ಎಂದು ಉದೈಪುರದ ಎಸ್ಡಿಪಿಒ ದೇಬಾಂಜಲಿ ರೇ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕ್ರಿಯಿಸಿರುವ ಸಂತ್ರಸ್ತೆಯ ಪತಿ, “ನನ್ನ ಪತ್ನಿಯನ್ನು ಶಾಸಕರ ಸಹಚರರು ಶುಕ್ರವಾರ ರಾತ್ರಿ ಅಮಾನುಷವಾಗಿ ಥಳಿಸಿದ್ದಾರೆ. ಪ್ರಕರಣ ಸಂಬಂಧ ನಾವು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದೆವು. ಆದರೆ, ಪೊಲೀಸರು ದೂರು ಸ್ವೀಕರಿಸಲಿಲ್ಲ. ಹೀಗಾಗಿ, ಮನೆಗೆ ಹಿಂದಿರುಗಿದೆವು. ರಾತ್ರಿ ಮಲಗಿದ್ದೆವು. ಬೆಳಗ್ಗೆ ಎದ್ದು ನೋಡಿದಾಗ, ನನ್ನ ಪತ್ನಿಯ ಅರ್ಧ ಸುಟ್ಟ ದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ನನ್ನ ಪತ್ನಿ ಸಾವಿಗೆ ಬಿಜೆಪಿ ಶಾಸಕನ ಸೋದರ ಅಳಿಯ ಮನ್ನಾ ಮಜುಂದರ್ ಮತ್ತು ಆತನ ಇಬ್ಬರು ಸಹಚರರು ಕಾರಣ” ಎಂದು ಆರೋಪಿಸಿದ್ದಾರೆ.
ಘಟನೆ ಬಳಿಕ ಬಿಜೆಪಿ ಶಾಸಕ ಜಿತೇಂದ್ರ ಮಜುಂದರ್ ಪತ್ರಕರ್ತರ ಸಂಪರ್ಕಕ್ಕೆ ದೊರೆತಿಲ್ಲ. ಘಟನೆ ಬಗ್ಗೆ ಅವರು ಪ್ರತಿಕ್ರಿಯಿಸಿಲ್ಲ.