16 ವರ್ಷ ಉಪವಾಸವಿದ್ದ ಇರೋಮ್ ಶರ್ಮಿಳಾ, ಸೋನಮ್ ವಾಂಗ್‌ಚುಕ್ ಸತ್ಯಾಗ್ರಹದ ಬಗ್ಗೆ ಹೇಳುವುದೇನು?

Date:

ನವೆಂಬರ್ 2000 ರಿಂದ ಸತತ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಸ್ಸಾಂ ರೈಫಲ್ಸ್ ಸಿಬ್ಬಂದಿಯಿಂದ ಮಲೊಮ್ ಪಟ್ಟಣದಲ್ಲಿ 10 ನಾಗರಿಕರ ಹತ್ಯೆಯನ್ನು ಖಂಡಿಸಿ 28 ನೇ ವಯಸ್ಸಿನಲ್ಲಿ ಉಪವಾಸ ಆರಂಭಿಸಿದ್ದ ಶರ್ಮಿಳಾ ಅವರ ಮೇಲೆ ಆತ್ಮಹತ್ಯೆಗೆ ಯತ್ನಿಸಿದ (ಐಪಿಸಿ ಸೆಕ್ಷನ್ 309) ಆರೋಪ ಹೊರಿಸಿ, ಬಂಧಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಅವರ ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡಲಾಗುತ್ತಿತ್ತು. ಪ್ರತಿ ವರ್ಷವೂ ಅವರನ್ನು ಬಿಡುಗಡೆ ಮಾಡಿ, ಕೇವಲ ಎರಡೇ ದಿನಗಳಲ್ಲಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು.

- Advertisement -

ಜೂನ್ 28 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಬೆಂಬಲಿಸಬೇಕು ಎಂದು ಮಣಿಪುರದ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಆಗ್ರಹಿಸಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸುವ ಹೊಣೆ ಕೇವಲ ವಾಂಗ್‌ಚುಕ್ ಅವರೊಬ್ಬರ ಮೇಲಿಲ್ಲ, ಬದಲಾಗಿ ಪ್ರಜ್ಞಾವಂತ ಹಾಗೂ ಬದಲಾವಣೆ ಬಯಸುವ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವಲ್ಲಿ ಆಗಿರುವ ಅವ್ಯವಸ್ಥೆಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ರಾಜಕೀಯ ಅಭಿಯಾನದ ಭಾಗವಾಗಿ ವಾಂಗ್‌ಚುಕ್ ಈ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಪತಿ ಹಾಗೂ ಅವಳಿ ಹೆಣ್ಣುಮಕ್ಕಳೊಂದಿಗೆ ನೆಲೆಸಿರುವ ಶರ್ಮಿಳಾ ಅವರು ‘ಸ್ಕ್ರಾಲ್’ (Scroll.in) ಜೊತೆ ದೂರವಾಣಿಯಲ್ಲಿ ಮಾತನಾಡಿ, “ಇದು ಕೇವಲ ಸೋನಮ್ ಅವರೊಬ್ಬರ ಹೊರೆಯಲ್ಲ, ಅವರು ಹುತಾತ್ಮರಾಗಬೇಕೆಂದು ಜನರು ನಿರೀಕ್ಷಿಸಬಾರದು” ಎಂದು ತಿಳಿಸಿದ್ದಾರೆ. “ಇದು ಸಾಮೂಹಿಕ ಕಾಳಜಿ ಮತ್ತು ಬೇಡಿಕೆಯಾಗಿದೆ, ಪ್ರತಿಯೊಬ್ಬರೂ ಅವರೊಂದಿಗೆ ಕೈಜೋಡಿಸಬೇಕು. ಎಲ್ಲರೂ ಬೀದಿಗಿಳಿದರೆ ಭದ್ರತಾ ಪಡೆಗಳು ಸಾಲದಾಗುತ್ತವೆ ಮತ್ತು ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲೇಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ. “ಸಾಮಾಜಿಕ ಬದಲಾವಣೆಗಾಗಿ ಸಾಮೂಹಿಕ ಪ್ರಯತ್ನ, ನಿರಂತರತೆ ಮತ್ತು ಒಗ್ಗಟ್ಟಿನ ಧ್ವನಿಗಳು ಅಗತ್ಯವಾಗಿವೆ. ಪ್ರತಿಭಟನಾಕಾರರೊಬ್ಬರನ್ನು ಹಾಗೆಯೇ ಹುತಾತ್ಮರಾಗಲು ಬಿಡಬಾರದು” ಎಂದು ಅವರು ಎಚ್ಚರಿಸಿದ್ದಾರೆ.

53 ವರ್ಷದ ಇರೋಮ್ ಶರ್ಮಿಳಾ ಅವರು ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಜಾರಿಯಲ್ಲಿದ್ದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ರದ್ದತಿಗೆ ಆಗ್ರಹಿಸಿ ನವೆಂಬರ್ 2000 ರಿಂದ ಸತತ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಕಾಯ್ದೆಯು ಭದ್ರತಾ ಪಡೆಗಳಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿಯಿಂದ ಮಲೊಮ್ ಪಟ್ಟಣದಲ್ಲಿ 10 ನಾಗರಿಕರ ಹತ್ಯೆಯನ್ನು ಖಂಡಿಸಿ 28 ನೇ ವಯಸ್ಸಿನಲ್ಲಿ ಉಪವಾಸ ಆರಂಭಿಸಿದ್ದ ಶರ್ಮಿಳಾ ಅವರ ಮೇಲೆ ಆತ್ಮಹತ್ಯೆಗೆ ಯತ್ನಿಸಿದ (ಐಪಿಸಿ ಸೆಕ್ಷನ್ 309) ಆರೋಪ ಹೊರಿಸಿ, ಬಂಧಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಅವರ ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡಲಾಗುತ್ತಿತ್ತು. ಪ್ರತಿ ವರ್ಷವೂ ಅವರನ್ನು ಬಿಡುಗಡೆ ಮಾಡಿ, ಕೇವಲ ಎರಡೇ ದಿನಗಳಲ್ಲಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು.

“ಬೇಡಿಕೆ ದೊಡ್ಡದಾಗಿದೆ, ಆದರೆ ಜನರು ಒಗ್ಗಟ್ಟಾಗಿಲ್ಲದ ಕಾರಣ ಸರ್ಕಾರದ ಮೇಲೆ ಪ್ರತಿಭಟನೆಯ ಪ್ರಭಾವ ಬೀರುತ್ತಿಲ್ಲ. ಏಕಾಂಗಿ ಪ್ರತಿಭಟನೆಗೆ ಸರ್ಕಾರ ಹೆದರುವುದಿಲ್ಲ, ಬದಲಿಗೆ ಕಾಯ್ದು ನೋಡುವ ತಂತ್ರ ಅನುಸರಿಸುತ್ತದೆ” ಎಂದು ಶರ್ಮಿಳಾ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ 1920-21ರ ಸುದೀರ್ಘ ರೈತ ಹೋರಾಟವನ್ನು ಉಲ್ಲೇಖಿಸಿದ ಅವರು, ಲಕ್ಷಾಂತರ ರೈತರು ಭಾಗವಹಿಸಿದ್ದ ಆ ಬೃಹತ್ ಪ್ರತಿಭಟನೆಯಿಂದಾಗಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರ ಒಪ್ಪಿಕೊಳ್ಳಬೇಕಾಯಿತು ಎಂದರು. “ಸಾಮೂಹಿಕ ಹಾಗೂ ಒಗ್ಗಟ್ಟಿನ ಹೋರಾಟವಿದ್ದಾಗ ಮಾತ್ರ ಪ್ರತಿಭಟನೆ ಯಶಸ್ವಿಯಾಗುತ್ತದೆ. ಆದರೆ ನಾನು ಉಪವಾಸ ಸತ್ಯಾಗ್ರಹ ಮಾಡುವಾಗ ನನಗೆ ಹೆಚ್ಚಿನ ಸಾರ್ವಜನಿಕ ಬೆಂಬಲ ಸಿಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಮಣಿಪುರದಲ್ಲಿ ತಾವು ನಡೆಸಿದ ಹೋರಾಟದ ಅನುಭವವನ್ನು ಹಂಚಿಕೊಂಡ ಶರ್ಮಿಳಾ, “ಜನರು ನಾನು ಅವರ ಕಾರಣಗಳಿಗಾಗಿ ಹುತಾತ್ಮಳಾಗಬೇಕೆಂದು ಬಯಸಿದ್ದರು. ಆ ಹೋರಾಟ ಸಾಮೂಹಿಕವಾಗಿದ್ದರೂ, ನಾನೊಬ್ಬಳೇ ಪ್ರತಿಭಟಿಸುತ್ತಿದ್ದ ಕಾರಣ ಇಡೀ ಜವಾಬ್ದಾರಿ ಮತ್ತು ಹೊರೆ ನನ್ನ ಮೇಲಿತ್ತು. ವರ್ಷಾನುಗಟ್ಟಲೆ ನನ್ನ ಪ್ರತಿಭಟನೆಯನ್ನು ಹೊಗಳಿದರೇ ವಿನಃ, ನನಗೆ ಸಹಾಯ ಬೇಕಾದಾಗ ಯಾರೂ ಮುಂದೆ ಬರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಬಿಜೆಪಿಯ ಆಡಳಿತದಲ್ಲಿ ಸರ್ಕಾರದ ಮುಂದಿಡುವ ಬೇಡಿಕೆಗಳಿಗೆ ಉಪವಾಸ ಸತ್ಯಾಗ್ರಹದ ಮಾರ್ಗವನ್ನು ಹೇಗೆ ನೋಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತದಲ್ಲಿ ಕಾಂಗ್ರೆಸ್ ಅಥವಾ ಹಿಂದುತ್ವ ಪಕ್ಷ ಯಾವುದಾದರೂ ಸರಿ, ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗೌರವಿಸುವುದಿಲ್ಲ” ಎಂದಿದ್ದಾರೆ. “ಭಾರತದಲ್ಲಿ ನೈಜ ಪ್ರಜಾಪ್ರಭುತ್ವವಿಲ್ಲ. ಸರ್ಕಾರವನ್ನು ಟೀಕಿಸುವವರನ್ನು ಕೊಲ್ಲುತ್ತಾರೆ ಅಥವಾ ಜೈಲಿಗೆ ಹಾಕುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಜನರಿರುವ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿ ವಾಂಗ್‌ಚುಕ್ ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದರೂ ಕೇವಲ ನೂರಾರು ಯುವಕರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ ಎಂದ ಅವರು, “ಪ್ರಜಾಸತ್ತಾತ್ಮಕ ಸಮಾಜದಲ್ಲಿ ವ್ಯವಸ್ಥೆಯ ತಪ್ಪನ್ನು ತಿದ್ದುವ ಕರ್ತವ್ಯ ಯುವಜನತೆಯದ್ದಾಗಿದೆ. ಇದು ಕೇವಲ ಸೋನಮ್ ವಾಂಗ್‌ಚುಕ್ ಅವರ ಜವಾಬ್ದಾರಿಯಲ್ಲ. ಅವರಿಗೆ ಸಾಮೂಹಿಕ ನೈತಿಕ ಬೆಂಬಲ, ಬದ್ಧತೆ ಮತ್ತು ಜನರ ಭಾಗವಹಿಸುವಿಕೆಯ ಅಗತ್ಯವಿದೆ. ಜನರು ಒಗ್ಗಟ್ಟಾಗಿ ಜಂತರ್ ಮಂತರ್‌ಗೆ ತೆರಳಿದರೆ, ಸರ್ಕಾರವು ಹೆದರಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತದೆ” ಎಂದು ಕರೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...