ಭಾರತೀಯರ ವಿರುದ್ಧದ ಜನಾಂಗೀಯ ಪೋಸ್ಟ್‌ಗಳಲ್ಲಿ ವೈರಲ್ ಆಗುತ್ತಿರುವ ರಾಜೇಂದ್ರ ಪಾಂಚಾಲ್ ಯಾರು?

Date:

ಭಾರತೀಯರ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಕೆಲವು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಜಾನಾಂಗೀಯ ದ್ವೇಷದ ಪೋಸ್ಟ್‌ಗಳು ಹೆಚ್ಚಾಗಿ ಪ್ರಕಟವಾಗುತ್ತಿವೆ. ಆ ಪೋಸ್ಟ್‌ಗಳು ಭಾರತೀಯರನ್ನು ಅವಹೇಳನಕಾರಿ, ದ್ವೇಷ ಹಾಗೂ ಅಪಹಾಸ್ಯ ಮಾಡುತ್ತಿವೆ. ಭಾರತೀಯರ ವಿರುದ್ಧ ವರ್ಣಭೇದ ನೀತಿಯನ್ನು ಅನುಸರಿಸುತ್ತಿವೆ. ಅಂತಹ ಪೋಸ್ಟ್‌ಗಳಲ್ಲಿ ಓರ್ವ ಭಾರತೀಯನ ಚಿತ್ರವನ್ನು ಅಗಾಧವಾಗಿ ಬಳಸಿಕೊಳ್ಳಲಾಗುತ್ತಿದೆ. ಆತನನ್ನೂ ಸೇರಿದಂತೆ ಭಾರತೀಯರನ್ನು ನಿಂದಿಸಲಾಗುತ್ತಿದೆ.

- Advertisement -

ವರ್ಣಬೇಧ ನೀತಿಅನ್ನು ಅನುಸರಿಸುವ ಖಾತೆಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಗಳಲ್ಲಿ ಕಾಣುವ ಚಿತ್ರವು ಪುಣೆಯ ರಾಜೇಂದ್ರ ಪಾಂಚಾಲ್ ಅವರದ್ದು. ಅವರು ಕೇವಲ ಒಂದು ವರ್ಷ ವಯಸ್ಸಿನವರಿದ್ದಾಗ, ನಡೆಯಲು ಆರಂಭಿಸಿದ್ದ ದಿನಗಳಲ್ಲಿ ಅವರು ಆಯತಪ್ಪಿ ಬಿದ್ದಿದ್ದರು. ಆಗ, ಅವರ ದವಡೆಗೆ ಗಂಭೀರವಾಗಿ ಪೆಟ್ಟುಬಿದ್ದಿತ್ತು. ಆ ಪೆಟ್ಟಿನಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳಲು, ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಪಾಂಚಾಲ್‌ ಅವರ ದವಡೆಯು ಒಳಭಾಗಗಕ್ಕೆ ಬೆಸೆದುಕೊಂಡಿತು, ಅವರು ತಮ್ಮ ಬಾಯಿಯನ್ನು ಸರಿಸುಮಾರು 1.5 ಸೆಂ.ಮೀ ಗಿಂತ ಹೆಚ್ಚು ತೆರೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಇದನ್ನು, ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ (ಟಿಎಂಜೆ) ಆಂಕೈಲೋಸಿಸ್ ಎನ್ನುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕಳೆದ 38 ವರ್ಷಗಳಿಂದ ಪಾಂಚಾಲ್ ಅವರು ಘನ ಆಹಾರವನ್ನು ತಿನ್ನಲು ಸಾಧ್ಯವಾಗದೆ ಬಳಲುತ್ತಿದ್ದಾರೆ. ಅವರು ದ್ರವ ಮತ್ತು ಮೃದು ಆಹಾರ ಸೇವಿಸುತ್ತಲೇ ಬದುಕಿದ್ದಾರೆ. ಆಹಾರವನ್ನು ಸರಿಯಾಗಿ ಸೇವಿಸಲು ಸಾಧ್ಯವಾಗದ ಪರಿಸ್ಥಿತಿಯು ಅವರನ್ನು ಅಪೌಷ್ಟಿಕತೆಗೆ ದುಡಿತು. 2017ರಲ್ಲಿ, ಅವರು ಅಂತಿಮವಾಗಿ ಎಂ.ಎ ರಂಗೂನ್‌ವಾಲಾ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅಲ್ಲಿ ಅವರ ದವಡೆಯನ್ನು ಮರುಹೊಂದಿಸಲಾಯಿತು. ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ ಸಮೀರ್ ಗಾರ್ಡೆ ಅವರು ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದರು.

“ಇದು ಅಪರೂಪದ ಪ್ರಕರಣ. ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಇದ್ದಾಗ, ಹೆಚ್ಚು ವಿಳಂಬವಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಪಾಂಚಾಲ್ ಅವರು 38 ವರ್ಷಗಳಿಂದ ಈ ಸ್ಥಿತಿಯಲ್ಲಿಯೇ ಬದುಕಿದ್ದಾರೆ. ಇದು ಅತ್ಯಂತ ಅಪರೂಪವಾಗಿದೆ” ಎಂದು ಗಾರ್ಡೆ ಹೇಳಿದ್ದಾರೆ.

“ಶಸ್ತ್ರಚಿಕಿತ್ಸೆಯು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಈ ಸಮಯದಲ್ಲಿ ಅವರ ಇಕ್ಕಟ್ಟಿನಿಂದ ಬೆಸೆದುಕೊಂಡಿದ್ದ ತಲೆಬುರುಡೆಯ ಮೂಳೆಯನ್ನು ಬಿಡುಗಡೆ ಮಾಡಲಾಯಿತು” ಎಂದು ಹೇಳಿದ್ದಾರೆ.

ಭಾರತೀಯರ ವಿರುದ್ಧ ವರ್ಣಭೇದ ನೀತಿ
ಭಾರತೀಯರ ವಿರುದ್ಧದ ವರ್ಣಭೇದ ನಿಂದನೆಯು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅಮೆರಿಕದಿಂದ ಪ್ರಕಟವಾಗುತ್ತಿರುವ ಅವಹೇಳನಕಾರಿ ಪೋಸ್ಟ್‌ಗಳಿಗೆ ಪಾಂಚಾಲ್ ಮತ್ತು ಇತರ ಮತ್ತೊಬ್ಬ ವ್ಯಕ್ತಿಯ ಚಿತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಲ್ಲದೆ, ಅಮೇರಿಕನ್ ಕ್ರಿಪ್ಟೋಕರೆನ್ಸಿ-ಆಧಾರಿತ ಪಾಲಿಮಾರ್ಕೆಟ್ ಕಂಪನಿಯು ‘ಭಾರತ, ನೈಜೀರಿಯಾ ಮತ್ತು ಟರ್ಕಿ ಮೂಲದ ಕೆಲವರು ಮಹಿಳೆಯರಂತೆ ವರ್ತಿಸುತ್ತಿದ್ದಾರೆ’ ಎಂದು ನಿಂದಿಸಿದೆ. ಬಳಿಕ ಆ ಪೋಸ್ಟ್‌ಅನ್ನು ಅಳಿಸಿಹಾಕಿದೆ.

ಬಳಿಕ, ಕಂಪನಿಯ ಮುಖ್ಯ ಕಾನೂನು ಅಧಿಕಾರಿ ನೀಲ್ ಕುಮಾರ್ ಅವರು, ತಮ್ಮ ಕಂಪನಿಯಿಂದ ಪ್ರಕಟವಾದ ಅವಹೇಳನಾಕಾರಿ ಪೋಸ್ಟ್‌ ಕಾರಣಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಪೋಸ್ಟ್‌ ವಿಚಾರವಾಗಿ ಕಂಪನಿಯು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ನಾನೊಬ್ಬ ಭಾರತೀಯ ಅಮೆರಿಕನ್ ಪ್ರಜೆಯಾಗಿ ತಮ್ಮ ಕಂಪನಿ ಬಳಸಿದ ಪದಗಳ ಇತಿಹಾಸವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...