ರಸಗೊಬ್ಬರಕ್ಕಾಗಿ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆ ಸಾವು

Date:

ಮಧ್ಯಪ್ರದೇಶದಲ್ಲಿ ರಸಗೊಬ್ಬರ ಬಿಕ್ಕಟ್ಟು ದುರಂತ ತಿರುವು ಪಡೆದುಕೊಂಡಿದೆ. ಗುನಾ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ರಸಗೊಬ್ಬರ ವಿತರಣಾ ಕೇಂದ್ರದ ಎದುರು ಸತತ ಎರಡು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

- Advertisement -

ಮೃತ ಮಹಿಳೆಯನ್ನು ಭ್ರೂಯಾ ಬಾಯಿ ಎಂದು ಹೆಸರಿಸಲಾಗಿದೆ. ಅವರು ಮಂಗಳವಾರದಿಂದ ರಸಗೊಬ್ಬರಕ್ಕಾಗಿ ಕಾಯುತ್ತಿದ್ದರು. ಬಿಸಿಲು-ಗಾಳಿಯಲ್ಲಿ ಕಾಯುತ್ತದ್ದ ಮಹಿಳೆ ದಾರುಣ ಅಂತ್ಯಕಂಡಿದ್ದಾರೆ. ಘಟನೆಯು ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತಾತ್ಮಕ ವ್ಯವಸ್ಥೆಗಳಲ್ಲಿನ ಗಂಭೀರ ಲೋಪಗಳನ್ನು ಮುನ್ನಲೆಗೆ ತಂದಿದ್ದು, ಯೂರಿಯಾ ವಿತರಣೆಯಲ್ಲಿನ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಏನಿದು ʼಮಶೀನ್‌ ರೀಡಬಲ್‌ʼ ಮತದಾರರ ಪಟ್ಟಿ? ಅದನ್ನು ಹಂಚಿಕೊಳ್ಳದೆ...

17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಸೂಚಿಸಿದೆ. ವಿಪಕ್ಷಗಳ ವಿರೋಧಕ್ಕೆ ಮಣಿದು ಕೊನೆಗೂ ಓದಲು ಸಾಧ್ಯವಾಗುವ PDF ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ಒದಗಿಸುವಂತೆ ನಿರ್ದೇಶಿಸಿದೆ. ಹಾಗಾದರೆ,...

ಮೋದಿ ಸರ್ಕಾರದ ದುರಾಡಳಿತದ ಬಗ್ಗೆ ಹೇಳಿದ್ದಕ್ಕೆ ಚಾರಿತ್ರ್ಯ ಹರಣ;...

​ಪ್ರಭುತ್ವದ ಲೋಪಗಳನ್ನು ಜನಪದದ ಸರಳ ಧಾಟಿಯಲ್ಲಿ ಪ್ರಶ್ನಿಸುವ ಹೆಣ್ಣುಮಗಳೊಬ್ಬಳ ದನಿಯನ್ನು ಅಡಗಿಸಲು ತರ್ಕ ಸಾಲದಾದಾಗ, ವ್ಯವಸ್ಥೆ ಮತ್ತು ಅದರ ಸಮರ್ಥಕರು ಕೈಗೆತ್ತಿಕೊಳ್ಳುವ ಅತ್ಯಂತ ಹೇಯ ಅಸ್ತ್ರವೇ ‘ಚಾರಿತ್ರ್ಯ ಹರಣ’. ಭೋಜಪುರಿ ಜನಪದ ಗಾಯಕಿ...

ಸಿದ್ದರಾಮಯ್ಯ ನಿರ್ಗಮನ ‘ಅಹಿಂದ’ ಮರಕ್ಕೆ ಕೊಡಲಿ ಏಟು: ಸಮುದಾಯದ...

ಒಂದು ಕಾಲದಲ್ಲಿ ರಾಜ್ಯದ ರಾಜಕಾರಣದ ಗತಿಯನ್ನೇ ಬದಲಿಸಿದ್ದ 'ಅಹಿಂದ' ಚಳವಳಿ ಇಂದು ನಾವಿಕನಿಲ್ಲದ ದೋಣಿಯಾಗಿದೆ. ಸಿದ್ದರಾಮಯ್ಯ ನಿರ್ಗಮನ, ಸ್ಟಿಂಗ್ ಆಪರೇಷನ್ ಆರೋಪ, ಸತೀಶ್ ಜಾರಕಿಹೊಳಿ ಹಿಂದಕ್ಕೆ ಮತ್ತು ಕೆ.ಎನ್. ರಾಜಣ್ಣನವರ ಅನಿಶ್ಚಿತತೆ… ಈ...

ಭ್ರೂಯಾ ಬಾಯಿ ಅವರ ಕುಟುಂಬದ ಪ್ರಕಾರ, ಭ್ರೂಯಾ ಬಾಯಿ ಅವರು ಯೂರಿಯಾ ಖರೀದಿಸಲು ಬಾಗೇರಿಯಲ್ಲಿರುವ ಗೋದಾಮಿಗೆ ಮಂಗಳವಾರ ತೆರಳಿದ್ದರು. ಆದರೆ, ಹೆಚ್ಚು ಜನರಿದ್ದರಿಂದ ರಾತ್ರಿವರೆಗೆ ಸರತಿಯಲ್ಲಿ ನಿಂತರೂ, ಗೊಬ್ಬರ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಬುಧವಾರ ಮುಂಜಾನೆಯೇ ಮತ್ತೆ ಸರತಿ ಸಾಲಿನಲ್ಲಿ ನಿಂತರು. ಆದರೆ, ಅವರು ಕಾಯಲಬೇಕಾಯಿತು. ನಿರಂತರ ಕೊರೆಯುವ ಚಳಿಯಲ್ಲಿಯೂ ಅವರು ರಾತ್ರಿಯಿಡೀ ಗೋದಾಮಿನ ಹೊರಗೆ ಕಾಯುತ್ತಿದ್ದರು. ಚಳಿಯಿಂದಾಗಿ, ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವರು ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ, ಯಾವುದೇ ಸೇವೆ ಲಭ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.

ಅಂತಿಮವಾಗಿ, ಮಹಿಳೆಯನ್ನು ಓರ್ವ ರೈತ ತನ್ನ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಪ್ರಥಮ ಚಿಕಿತ್ಸೆಯ ಬಳಿಕ, ಆಕೆಯನ್ನು ವೈದ್ಯರು ಗುಣಾ ಜಿಲ್ಲಾ ಆಸ್ಪತ್ರೆಗೆ ಕಳಿಸಿದರು. ಆದರೆ, ಅವರು ಜಿಲ್ಲಾಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದರು.

“ರಸಗೊಬ್ಬರ ವಿತರಣೆಗೆ ಸರಿಯಾದ ನಿರ್ವಹಣ ಕ್ರಮ ಮತ್ತು ವ್ಯವಸ್ಥೆಯನ್ನು ತಂದಿದ್ದರೆ, ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಬಾಯಿ ಅವರು ಕುಸಿದು ಬಿದ್ದಾಗ, ಆ್ಯಂಬುಲೆನ್ಸ್‌ ಸೇವೆಯೂ ನಮಗೆ ದೊರೆಯಲಿಲ್ಲ. ನಮ್ಮ ಸ್ವಂತ ಹಣದಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಸರ್ಕಾರದಿಂದ ನಮಗೆ ಯಾವುದೇ ನೆರವು ಸಿಗಲಿಲ್ಲ” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಯಿ ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ರೈತ ರಸಗೊಬ್ಬರ ವಿತರಣಾ ಕೇಂದ್ರದ ವ್ಯವಸ್ಥೆಗಳ ವಿರುದ್ಧ ಕಿಡಿಕಾರಿದ್ದಾರೆ. “ಗೋದಾಮಿನಲ್ಲಿ ಯಾವುದೇ ವ್ಯವಸ್ಥೆ (ಕುಡಿಯುವ ನೀರು ಸೇರಿ) ಇಲ್ಲ. ಜನರು ದಿನಗಟ್ಟಲೆ ಸರದಿಯಲ್ಲಿ ನಿಂತಿದ್ದಾರೆ. ಯಾವುದೇ ಮೂಲ ಸೌಕರ್ಯಗಳೂ ಅಲ್ಲಿ ದೊರೆಯುತ್ತಿಲ್ಲ. ಮೂರು ದಿನಗಳಿಂದ ಸರತಿಯಲ್ಲಿ ಕಾಯುತ್ತಿದ್ದೇವೆ. ಆದರೆ, ಈವರೆಗೆ ರಸಗೊಬ್ಬರ ಪಡೆಯಲು ಸಾಧ್ಯವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧಿಕೃತ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ ಭೇಟಿ ನೀಡಿದ ದಿನವೇ ಈ ಘಟನೆ ಸಂಭವಿಸಿದೆ. ಘಟನೆಗೆ ಸಿಂಧಿಯಾ ಸಂತಾಪ ಸೂಚಿಸಿದ್ದಾರೆ. ವಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ | ಸಾಹಿಲ್ ವಾಕೋಡೆ ಸಾವು: ಮಗನ ತಿಥಿಯಂದೇ ಪೋಷಕರು, ವಿದ್ಯಾರ್ಥಿಗಳ ಬಂಧನ

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ನಿಧನವಾಗಿ ಒಂದು ತಿಂಗಳ...

ರಾಜ್ಯ ಸಿಎಂ ಗಾದಿಗೆ ಕಣ್ಣಿಟ್ಟ ಎಚ್‌ಡಿಕೆ; ಬಿಹಾರದ ನಿತೀಶ್‌ ಹಾದಿಯಲ್ಲಿ ಕುಮಾರಸ್ವಾಮಿ?

ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. 2028ರಲ್ಲಿ ಕರ್ನಾಟಕದಲ್ಲಿ...

ಸಾರ್ವಜನಿಕ ಆಸ್ತಿ ಹರಾಜು ರದ್ದುಪಡಿಸುವ ಅಧಿಕಾರ ಸರ್ಕಾರಿ ಸಂಸ್ಥೆಗಳಿಗೆ ಇದೆ: ಸುಪ್ರೀಂ ಕೋರ್ಟ್

ಸಾರ್ವಜನಿಕ ಆಸ್ತಿಗಳ ಮಾರಾಟ ಅಥವಾ ಗುತ್ತಿಗೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದಾಯ ಗಳಿಸುವ...

ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ಲಡಾಖ್ ಹೋರಾಟಗಾರರು; ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲು ನಿರ್ಧಾರ

ಲಡಾಖ್‌ಗೆ ಪ್ರತ್ಯೇಕ ವಿಧಾನಸಭೆ, ಹೆಚ್ಚಿನ ಶಾಸನಾಧಿಕಾರ ಹಾಗೂ ಸಂವಿಧಾನಾತ್ಮಕ ರಕ್ಷಣೆ ನೀಡಬೇಕೆಂಬ...