ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರೇ ಮುಂದು: ಕಳೆದ 8 ವರ್ಷಗಳಲ್ಲಿ ಶೇ. 32 ಹೆಚ್ಚಳ

Date:

ಭಾರತದಲ್ಲಿ ಕಳೆದ 7 ವರ್ಷಗಳಲ್ಲಿ ಉನ್ನತ ಶಿಕ್ಷಣ ವಿದ್ಯಾಭ್ಯಾಸಕ್ಕೆ ನೋಂದಣಿ ಮಾಡಿಕೊಂಡವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು ಎಂದು ಕೇಂದ್ರ ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

- Advertisement -

2014 ರಿಂದ 2022ರವರೆಗೆ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿನಿಯರ ಸಂಖ್ಯೆ ಪುರುಷ ವಿದ್ಯಾರ್ಥಿಗಳಿಗಿಂತ ಶೇ.32 ರಷ್ಟು ಹೆಚ್ಚಾಗಿದೆ. 2014-15ರಲ್ಲಿ 1.57 ಕೋಟಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ನೋಂದಣಿ ಮಾಡಿಕೊಂಡಿದ್ದರೆ, 2021-22ರಲ್ಲಿ 2.07 ಕೋಟಿ ವಿದ್ಯಾರ್ಥಿನಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ 2021-22ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ 2020-21 ರಿಂದ 2021 -22 ರವರೆಗೆ 2.01 ಕೋಟಿಯಿಂದ 2.07 ಕೋಟಿಗೆ ಹೆಚ್ಚಾಗಿದೆ.

ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ)ದ ಪ್ರಕಾರ ಮಹಿಳಾ ದಾಖಲಾತಿ ಅನುಪಾತ ಸೂಚ್ಯಂಕ(ಜಿಇಆರ್) 2021-22ರಲ್ಲಿ ಶೇ.1.01 ಇದೆ. 2017-18ರಿಂದ ಸತತವಾಗಿ ಐದು ವರ್ಷಗಳಲ್ಲಿ ಪುರುಷರಿಗಿಂತ ಶೇ.1ಕ್ಕಿಂತ ಹೆಚ್ಚಾಗಿದೆ ಎಂದು ಸರ್ಕಾರವು ವರದಿಯಲ್ಲಿ ತಿಳಿಸಿದೆ, ಇದನ್ನು ಗುರುವಾರ ತಡರಾತ್ರಿ ಸಚಿವಾಲಯವು ಬಿಡುಗಡೆ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ

2020-21ರಲ್ಲಿ 4.14 ಕೋಟಿಯಿಂದ 2021-22ರಲ್ಲಿ 4.33 ಕೋಟಿಗೆ ಉನ್ನತ ಶಿಕ್ಷಣದ ಮಹಿಳಾ ನೋಂದಣಿ ಸಂಖ್ಯೆ ಹೆಚ್ಚಾಗಿದೆ. 2014-15ರಿಂದ 3.42 ಕೋಟಿಯಿಂದ 4.33 ಕೋಟಿ ವಿದ್ಯಾರ್ಥಿನಿಯರು ನೋಂದಣಿ ಮಾಡಿಕೊಂಡಿದ್ದಾರೆ. ಇದು 91 ಲಕ್ಷ ಮಂದಿ ಹೆಚ್ಚು ನೋಂದಣಿ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.

18-23 ವರ್ಷದ ವಯೋಮಿತಿ ಗುಂಪುಗಳ 2011ರ ಜನಸಂಖ್ಯಾ ಪ್ರಕ್ಷೇಪಣಾ ವರದಿಯ ಆಧಾರದ ಮೇಲೆ ಮಹಿಳಾ ಜಿಇಆರ್ 2014-15ರಿಂದ ಶೇ. 23.7 ರಿಂದ 2021-22 ವರೆಗೆ ಶೇ. 28.4 ರಷ್ಟು ಹೆಚ್ಚಾಗಿದೆ ಎಂದು  ಸರ್ಕಾರದ ವರದಿ ತಿಳಿಸಿದೆ. ಮಹಿಳಾ ಜಿಇಆರ್ 2014-15ರಲ್ಲಿ ಶೇ. 22.09 ರಿಂದ 2021-22 ವರೆಗೆ ಶೇ.28.05 ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ.

ಶೇ.78.9 ರಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣಗಳಿಗೆ ನೋಂದಣಿ ಮಾಡಿಕೊಂಡಿದ್ದರೆ, ಶೇ.12.1 ರಷ್ಟು ಸ್ನಾತಕೋತ್ತರ ಪದವಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ವರದಿ ತಿಳಿಸಿದೆ.

ಪದವಿ ಶಿಕ್ಷಣ ನೋಂದಣಿ ಮಾಡಿಕೊಂಡವರಲ್ಲಿ ಕಲೆ (ಶೇ.34.2), ವಿಜ್ಞಾನ (ಶೇ.14.8), ವಾಣಿಜ್ಯ (ಶೇ.13.3) ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ (ಶೇ.11.8) ಮಂದಿ ಇದ್ದಾರೆ. ಸ್ನಾತಕೋತ್ತರ ಪದವಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ(ಶೇ.21.2) ಹಾಗೂ ವಿಜ್ಞಾನ(ಶೇ.14.7) ಶಿಕ್ಷಣ ನೋಂದಣಿ ಮಾಡಿಕೊಂಡಿದ್ದಾರೆ.

ಪಿಹೆಚ್‌.ಡಿ ಪದವಿಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.81.2 ರಷ್ಟು ಏರಿಕೆಯಾಗಿದೆ. 2014-15 ರಲ್ಲಿ 1.17 ಲಕ್ಷದಿಂದ 2021-22 ವರೆಗೆ 2.12 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...