ರಕ್ಷಾಬಂಧನ ಆಚರಿಸಿ ನಿರ್ಜನ ಪ್ರದೇಶದಲ್ಲಿ ಸಹೋದರಿಯನ್ನು ಕೊಂದ ಯುವಕನ ಬಂಧನ

Date:

ಹದಿನೆಂಟು ವರ್ಷದ ತನ್ನ ಸಹೋದರಿ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಬೇಸರಗೊಂಡ ಯುವಕನೋರ್ವ ರಕ್ಷಾಬಂಧನ ಆಚರಣೆಯ ಬಳಿಕ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗರೌತದಲ್ಲಿ ನಡೆದಿದೆ. 

- Advertisement -

ಚಂದ್ರಾಪುರದ ದಾದಾ ಮಹರಾಜ್‌ ನಿಲ್ದಾಣದ ಸಮೀಪ ನಿರ್ಜನ ಪ್ರದೇಶದಲ್ಲಿ ಬೋಳಿಸಿದ ತಲೆಯೊಂದಿಗೆ ಕುಮಾರಿ ಸಹದಾರ್‌ ಅಲಿಯಾಸ್‌ ಪುಟ್ಟಿಯ ಮೃತದೇಹವು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಕೊಲೆಗೆ ಸಂಬಂಧಿಸಿದಂತೆ ಕುಮಾರಿಯ ಸಹೋದರ ಅರವಿಂದ್(25)‌ ಮತ್ತು ಆತನ ಸ್ನೇಹಿತ ಪ್ರಕಾಶ್‌ ಪ್ರಜಾಪತಿ(25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ಹಿಂದೆ ನಡೆದಿತ್ತು ಮತ್ತೊಂದು ಕೊಲೆ

ಆಗಸ್ಟ್‌ 7ರಂದು ಲಾಹ್ಚೂರರ್‌ನ ಸಮೀಪದ ಗುಧಾ ಹಳ್ಳಿಯಲ್ಲಿ ಕುಮರಿಯ ಪ್ರಿಯಕರ ವಿಶಾಲ್(19)ನ ಮೃತ ದೇಹವೂ ಪತ್ತೆಯಾಗಿತ್ತು.

ಪರಸ್ಪರ ಪ್ರೀತಿಸುತ್ತಿದ್ದ ಕುಮಾರಿ ಮತ್ತು ವಿಶಾಲ್‌ ನಾಲ್ಕು ತಿಂಗಳ ಹಿಂದೆ ಮನೆಬಿಟ್ಟು ಹೊರ ಬಂದಿದ್ದರು. ಆದರೆ ಕುಟುಂಬಸ್ಥರು ಮನವೊಲಿಸಿ ಅವರನ್ನು ಮರಳಿ ಬರುವಂತೆ ಮಾಡಿದ್ದರು. ಎರಡೂ ಕುಟುಂಬಗಳ ಮಧ್ಯೆ ಪರಸ್ಪರ ರಾಜಿ ಏರ್ಪಟ್ಟು, ಕೆಲ ಕಾಲಗಳವರಗೆ ಪ್ರೀತಿ ತಣ್ಣಗಾಗಿತ್ತು. ಆದರೆ ಶ್ರೀಘ್ರದಲ್ಲೇ ಪ್ರೇಮಿಗಳು ಮತ್ತೆ ಭೇಟಿಯನ್ನು ಆರಂಭಿಸಿದ್ದರು.

ಕುಮಾರಿ ಮತ್ತು ವಿಶಾಲ್‌ನ ಸಂಬಂಧ ಮತ್ತೆ ಮುಂದುವರೆದಿರುವುದು ಸಹೋದರ ಅರವಿಂದದ್‌ಗೆ ಇಷ್ಟವಿರಲಿಲ್ಲ. ಪುಣೆಯಿಂದ ಮರಳಿ ಬಂದ ಆತ ಸ್ನೇಹಿತ ಪ್ರಕಾಶ್‌ ಪ್ರಜಾಪತಿಯ ಜೊತೆ ಸೇರಿಕೊಂಡು ಕೊಲೆಯ ಸಂಚು ರೂಪಿಸಿದ್ದ. ಆಗಸ್ಟ್‌ 7ರ ಮುಂಜಾನೆ ವಿಶಾಲ್‌ಗೆ ಕೆಲಸ ಕೊಡಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ತುಂಬಿದ ಹಳ್ಳದಲ್ಲಿ ಕೊಚ್ಚಿಹೋದ ಇಬ್ಬರು ಯುವಕರು ನಾಪತ್ತೆ: ಪ್ರಕರಣ ದಾಖಲು

ವಿಶಾಲ್‌ನ ಕೊಲೆ ಪ್ರಕರಣದ ತನಿಖೆ ನಡೆಯತ್ತಿರುವಾಗಲೇ ಶನಿವಾರದಂದು ಕುಮಾರಿಯನ್ನು ಔಷಧಿ ತರುವ ನೆಪದಲ್ಲಿ ಕರೆದುಕೊಂಡು ಹೋದ ಅರವಿಂದ್‌ ತನ್ನ ಸಹೋದರಿಯನ್ನೂ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶಾಲ್‌ನ ತಂದೆ ಹಲ್ಕೀರಾಮ್‌ ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು,...

ಪೈಲಟ್‌ನಿಂದ ವಿಮಾನ ಅಪಹರಣದ ತುರ್ತು ಸಂದೇಶ: ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್‌ನಿಂದ ಶಂಕಿತ...

ದೆಹಲಿ SIR | ತಾರ್ಕಿಕ ವ್ಯತ್ಯಾಸದ ಲಿಸ್ಟ್‌ನಲ್ಲಿ ಮುಸ್ಲಿಂ ಮತದಾರರೇ ಟಾರ್ಗೆಟ್!

ದೆಹಲಿಯಲ್ಲಿ EC ಕೈಗೊಂಡಿರುವ SIR ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ವಿಶ್ಲೇಷಣೆಯು...