ಮೀಸಲಾತಿ ಪ್ರಮಾಣವನ್ನು ಪುನರ್ ಹಂಚಿಕೆ ಮಾಡುವಾಗ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು ತಾನು ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸನ್ನು ಪರಿಗಣಿಸಿರುವುದಾಗಿ ಎಲ್ಲಿಯೂ ಹೇಳಿಲ್ಲ. ಬದಲಾಗಿ ಈ...
ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ...
ಮೀಸಲಾತಿಯಿಂದ ತಲಾ 2% ಲಾಭ ಪಡೆದ ಲಿಂಗಾಯತರು ಮತ್ತು ಒಕ್ಕಲಿಗರು ಮುಸಲ್ಮಾನರ ವಿರುದ್ಧ ಬೀದಿಗಿಳಿಯುತ್ತಾರೆ. ಕೋಮು ಗಲಭೆ ನಡೆಯುತ್ತದೆ. ಬಿಜೆಪಿ ಅನಾಯಾಸವಾಗಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದುಕೊಂಡಿದ್ದರು. ಆದರೆ, ಪ್ರಸ್ತುತ ಕ್ಷುಲ್ಲಕವಾಗಿ ಕಾಣುತ್ತಿರುವುದು...
ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿ ರದ್ದುಪಡಿಸಲಾಗಿದೆ. ಮುಸ್ಲಿಂ ಮಹಿಳೆಯರ ಔದ್ಯೋಗಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದ ಮೀಸಲಾತಿಯನ್ನು ಕಿತ್ತುಕೊಂಡ ಸರ್ಕಾರದ ಧೂರ್ತ ನಡೆಯನ್ನು ಲಿಂಗಾಯತ, ಒಕ್ಕಲಿಗರು ಸೇರಿದಂತೆ ಎಲ್ಲ ಸಮುದಾಯದವರು ಸೇರಿ ಪ್ರತಿಭಟಿಸಲೇಬೇಕು....