ಬಿಹಾರ ಚುನಾವಣೆ | 38 ನಾಯಕರ ರಾಜೀನಾಮೆ: ಬಂಡಾಯ ಎಲ್‌ಜೆಪಿ ರಚನೆಗೆ ಸಿದ್ಧತೆ

Date:

ಬಿಹಾರ ಚುನಾವಣೆಗೂ ಮುನ್ನ ಕೆಲವು ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು ಇದೀಗ ಬಂಡಾಯ ಎಲ್‌ಜೆಪಿ ರಚನೆ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಖಗಾರಿಯಾ ಜಿಲ್ಲೆಯಲ್ಲಿ ಎಲ್‌ಜೆಪಿಯ 38 ನಾಯಕರು ರಾಜೀನಾಮೆ ನೀಡಿದ್ದಾರೆ. ಬಂಡಾಯ ಬಣ ಬಿಹಾರದಲ್ಲಿ ಶೀಘ್ರವೇ ತನ್ನದೇ ಆದ ಪಕ್ಷವನ್ನು ರಚಿಸಲಿದೆ ಎಂದು ಮಾಜಿ ಲೋಕ ಜನಶಕ್ತಿ ಪಕ್ಷದ (ರಾಮ್-ವಿಲಾಸ್) ನಾಯಕ ಶಿವರಾಜ್ ಯಾದವ್ ಶನಿವಾರ ಘೋಷಿಸಿದ್ದಾರೆ.

- Advertisement -

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಯಾದವ್, “ಖಗಾರಿಯಾ ಜಿಲ್ಲೆಯ ಎಲ್ಲಾ ಕಾರ್ಯಕರ್ತರು, 38 ನಾಯಕರು, ಬ್ಲಾಕ್ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಎಲ್ಲರೂ ರಾಜೀನಾಮೆ ನೀಡಿದ್ದಾರೆ. ಇಡೀ ಜಿಲ್ಲಾ ಸಮಿತಿಯೇ ರಾಜೀನಾಮೆ ನೀಡಿದೆ. ಆದ್ದರಿಂದ, ಖಗಾರಿಯಾ ಈಗ ಶೂನ್ಯ. ಈಗ ನಾವು ತಳಮಟ್ಟದಿಂದ ಪುನರ್ನಿರ್ಮಿಸುತ್ತಿದ್ದೇವೆ. ನಾವು ಬಂಡಾಯ ಲೋಕ ಜನಶಕ್ತಿ ಪಕ್ಷವನ್ನು ರಚಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಬಿಹಾರದಲ್ಲಿ ಅದೇ ರೀತಿ ಆಗಲು ಬಿಡಲ್ಲ: ರಾಹುಲ್ ಗಾಂಧಿ

ಖಗಾರಿಯಾ ಜಿಲ್ಲಾ ಅಧ್ಯಕ್ಷರಾಗಿದ್ದ ಎಲ್‌ಜೆಪಿಯ ಯಾದವ್, ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗಗಳನ್ನೂ ಈ ವೇಳೆ ನೆನಪಿಸಿಕೊಂಡಿದ್ದಾರೆ. “ಎಲ್ಲವೂ ಕುಸಿದು ಬಿದ್ದಾಗ ನಾನು ಪಕ್ಷದ ಪರವಾಗಿ ನಿಂತಿದ್ದೆ. ಜನರು ಲೋಕ ಜನಶಕ್ತಿ ಪಕ್ಷದ ಬಗ್ಗೆ ಮರೆತಿದ್ದರು. ಹೆಸರೇ ಮಾಯವಾಗಿತ್ತು. ಖಗಾರಿಯಾದಲ್ಲಿ, ಅವರ ಹೆಸರನ್ನು ಹೇಳಲು ಯಾರೂ ಇರಲಿಲ್ಲ. ಆ ಕ್ಷಣದಲ್ಲಿ, ನಾನು ಮಾತ್ರ ಅವರೊಂದಿಗಿದ್ದೆ” ಎಂದಿದ್ದಾರೆ.

ಹಾಗೆಯೇ ಖಗಾರಿಯಾ ಲೋಕಸಭಾ ಸಂಸದ ರಾಜೇಶ್ ವರ್ಮಾ ಅವರನ್ನು ದುರಂಹಕಾರಿ ಮತ್ತು ಅಧಿಕಾರದ ದುರುಪಯೋಗ ಮಾಡುವ ವ್ಯಕ್ತಿ ಎಂದು ಹೇಳಿಕೊಂಡಿರುವ ಶಿವರಾಜ್ ಯಾದವ್, “ಪಕ್ಷ ಮತ್ತು ಪಕ್ಷದ ನಾಯಕರು ನನಗೆ ದ್ರೋಹ ಬಗೆದಿದ್ದಾರೆ. ಸ್ಥಳೀಯ ಸಂಸದರು ನನಗೆ ದ್ರೋಹ ಬಗೆದರು. ಸಂಸದರು ಸಹ ಪಾಸ್ವಾನ್‌ಗಳನ್ನು ಅವಮಾನಿಸುತ್ತಾರೆ. ನಮ್ಮ ಸಮಿತಿಯ ಶೇಕಡ 80ರಷ್ಟು ಕಾರ್ಯಕರ್ತರು ಪಾಸ್ವಾನ್‌ಗಳು. ಸ್ಥಳೀಯ ಸಂಸದ ರಾಜೇಶ್ ವರ್ಮಾ ಅವರೆಲ್ಲರನ್ನೂ ನಿಂದಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಬಿಹಾರದಲ್ಲಿ ಚುನಾವಣೆ ನಡೆಯಲಿರುವ ನಡುವೆ ಈ ಬೆಳವಣಿಗೆ ಕಂಡುಬಂದಿದೆ. ಅಕ್ಟೋಬರ್‌ನಿಂದ ನವೆಂಬರ್‌ ನಡುವೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಸ್ತುತ 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ, ಎನ್‌ಡಿಎ ಒಕ್ಕೂಟ 131 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ (80), ಜೆಡಿ(ಯು) (45), ಎಚ್‌ಎಎಂ(ಎಸ್) (4), ಮತ್ತು 2 ಸ್ವತಂತ್ರರ ಅಭ್ಯರ್ಥಿಗಳು. ವಿಪಕ್ಷ ಇಂಡಿಯಾ ಒಕ್ಕೂಟವು 111 ಸ್ಥಾನಗಳನ್ನು ಹೊಂದಿದ್ದು, ಇದರಲ್ಲಿ ಆರ್‌ಜೆಡಿ (77), ಕಾಂಗ್ರೆಸ್ (19), ಸಿಪಿಐ (ಎಂಎಲ್) (11), ಸಿಪಿಐ (ಎಂ) (2), ಮತ್ತು ಸಿಪಿಐ (2) ಸೇರಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

CEC ರಾಜೀನಾಮೆಗೆ ಆಗ್ರಹ; ಅ.23ರಂದು ಸಂಯುಕ್ತ ಕಿಸಾನ್‌ ಮೋರ್ಚಾದಿಂದ ದೆಹಲಿ ಚಲೋ

SIR ಪ್ರಕ್ರಿಯೆಯನ್ನು ವಿರೋಧಿಸಿ, CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್...

20 ತಿಂಗಳಲ್ಲಿ 20 ಮುಖ್ಯ ಚುನಾವಣಾಧಿಕಾರಿಗಳ ವರ್ಗಾವಣೆ: ಗ್ಯಾನೇಶ್ ಕುಮಾರ್ ದಾಖಲೆ!

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಆಡಳಿತದಲ್ಲಿ‌ ಚುನಾವಣಾ ಆಯೋಗವು ಭಾರೀ...

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಿಎಂ ಡಿ ಕೆ ಶಿವಕುಮಾರ್

"ಮುಂದಿನ ಬಜೆಟ್‌ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ...