ದೆಹಲಿ ಸೋತರೂ ಎಎಪಿ ನಾಯಕಿ ಆತಿಶಿ ಡಾನ್ಸ್‌ – ಸಂಭ್ರಮಾಚರಣೆ; ವ್ಯಾಪಕ ಟೀಕೆ

Date:

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹೀನಾಯ ಸೋಲು ಕಂಡಿದೆ. ಆದಾಗ್ಯೂ, ಕಲ್ಕಾಜಿ ಸ್ಥಾನದಲ್ಲಿ ಸ್ಪರ್ಧಿಸಿದ್ದ ದೆಹಲಿ ನಿರ್ಗಮಿತಿ ಮುಖ್ಯಮಂತ್ರಿ, ಎಎಪಿ ನಾಯಕಿ ಆತಿಶಿ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವನ್ನು ಕಾರ್ಯಕರ್ತರೊಂದಿಗೆ ಸಂಭ್ರಮಿಸಿದ್ದು, ಡಾನ್ಸ್‌ ಮಾಡಿದ್ದಾರೆ. ಅವರು ಡಾನ್ಸ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟ್ರೋಲ್-ಟೀಕೆಗೆ ಗುರಿಯಾಗಿದೆ.

- Advertisement -

ಶನಿವಾರ, ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕೇಜ್ರಿವಾಲ್ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಎಎಪಿ ಪ್ರಮುಖ ನಾಯಕರಲ್ಲಿ ಆತಿಶಿ ಮಾತ್ರವೇ ಗೆದ್ದಿದ್ದಾರೆ. ಆತಿಶಿ ಗೆದ್ದಿರುವ ಹಿನ್ನೆಲೆ, ಅವರ ನಿವಾಸದ ಬಳಿ ಶನಿವಾರ ರಾತ್ರಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಈ ವೇಳೆ, ಕಾರ್ಯಕರ್ತರೊಂದಿಗೆ ಆತಿಶಿ ಕೂಡ ಡಾನ್ಸ್‌ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಆ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, “ಇದು ಎಂತಹ ನಾಚಿಕೆಗೇಡಿನ ಪ್ರದರ್ಶನ? ಪಕ್ಷ ಸೋತಿದೆ, ಪಕ್ಷದ ಎಲ್ಲ ಪ್ರಭಾವಿ ನಾಯಕರು ಸೋತಿದ್ದಾರೆ. ಅದರೂ, ಆತಿಶಿ ಮರ್ಲೇನಾ ಈ ರೀತಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಆತಿಶಿ ಸಂಭ್ರಮದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, “ಅವರು ತಾನು ಮಾಡಿದ್ದಕ್ಕೆ ಹೆಮ್ಮೆ ಪಡುತ್ತಿದ್ದರೆ. ಎಲ್ಲ ಉನ್ನತ ನಾಯಕರು ಸೋತು, ತನ್ನ ಪಕ್ಷ ಅವಮಾನಕ್ಕೊಳಗಾಗಿದ್ದರೂ, ಅವರು ಡಾನ್ಸ್‌ ಮಾಡುತ್ತಿದ್ದಾರೆ. ಇದನ್ನೇ ತಂಡದ ಮನೋಭಾವ ಎಂದು ಕರೆಯಲಾಗುತ್ತದೆ!” ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬ ನೆಟ್ಟಿಗರು, “ಇದು ಶೂನ್ಯ ತಂಡ ಮನೋಭಾವ! ಆದರೆ, ನಾನು ಕೂಡ ಅರವಿಂದ್ ಕೇಜ್ರಿವಾಲ್ ಸೋತಿದ್ದನ್ನು ಸಂಭ್ರಮಮಿಸಿದೆ, ಆತಿಶಿ ಯಾಕೆ ಸಂಭ್ರಮಿಸಬಾರದು. ವಿಧಾನಸಭೆಯಿಂದ ಕೇಜ್ರಿವಾಲ್ ಹೊರಗುಳಿದರೆ, ಅವರು ದೆಹಲಿಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗುತ್ತಾರೆಯಲ್ಲವೇ” ಎಂದು ಟ್ರೋಲ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವದ ಗಟ್ಟಿತನವಿರುವುದು ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇರುವಲ್ಲಿ: ಸಿಎಂ ಡಿ.ಕೆ ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆಯೇ ಬುನಾದಿಯಾಗಿದೆ. ಎಲ್ಲರೂ ಸರ್ಕಾರಕ್ಕೆ ಕುರುಡಾಗಿ ತಲೆಬಾಗುವುದೇ...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...