ಅಧಿವೇಶನ | ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ ತಡೆ ಕ್ರಮಕ್ಕೆ ಸುರೇಶ್‌ ಕುಮಾರ್‌ ಆಗ್ರಹ

Date:

Advertisements

  • ಹೆದ್ದಾರಿಯಲ್ಲಿ ಲೋಪದೋಷಗಳು ಸಾಕಷ್ಟಿವೆ: ಪರಮೇಶ್ವರ್
  • ಸರಿಪಡಿಸದಿದ್ದರೆ ತೊಂದರೆ ತಪ್ಪಿದ್ದಲ್ಲ: ಜಿ ಟಿ ದೇವೇಗೌಡ‌

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಯಾದ ಮೇಲೆ ಈವರೆಗೂ 132 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮವಹಿಸಿ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್‌ ಸುರೇಶ್‌ ಕುಮಾರ್‌ ಆಗ್ರಹಿಸಿದರು.

ಏಳನೇ ದಿನದ ಪ್ರಶ್ನೋತ್ತರ ಕಲಾಪದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರಿಗೆ ಪ್ರಶ್ನಿಸಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಏನು ಕ್ರಮಕೈಗೊಂಡಿದ್ದೀರಿ. ಸಾವು ನೋವುಗಳ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದರು.

ಡಾ. ಜಿ ಪರಮೇಶ್ವರ್‌ ಉತ್ತರಿಸಿ, “ಒಳ್ಳೆಯ ಉದ್ದೇಶದಿಂದ ಈ ಹೆದ್ದಾರಿಯನ್ನು ರೂಪಿಸಲಾಗಿದೆ. ಆದರೆ, ಲೋಪದೋಷಗಳು ಸಾಕಷ್ಟಿವೆ. ಸರಿಯಾದ ಸೂಚನಾ ಫಲಕಗಳು ಇಲ್ಲ. ತಿರುವು ರಸ್ತೆಗಳಲ್ಲಿ ಈ ಅಪಘಾತಗಳ ಸಂಖ್ಯೆ ಹೆಚ್ಚಿದೆ. ರಸ್ತೆ ಉದ್ಘಾಟನೆಗೂ ಮೊದಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕಿತ್ತು. ಬಹುತೇಕ ಅಪಘಾತಗಳಿಗೆ ವೇಗವೇ ಕಾರಣ” ಎಂದು ತಿಳಿಸಿದರು.

“ಹೆದ್ದಾರಿ ಪ್ರಾರಂಭವಾದ ಮಾರ್ಚ್‌ 20 ತಿಂಗಳಲ್ಲೇ ಜನ ಸಾವನ್ನಪ್ಪಿದ್ದು, 63 ಜನ ಗಾಯಗೊಂಡಿದ್ದಾರೆ, ಏಪ್ರಿಲ್‌ನಲ್ಲಿ 23 ಸಾವನ್ನಪ್ಪಿದ್ದು, 83 ಜನರು ಗಾಯಗೊಂಡಿದ್ದಾರೆ. ಮೇ ತಿಂಗಳಲ್ಲಿ 29 ಜನರು ಸಾವನ್ನಪ್ಪಿದ್ದರೆ, 93 ಜನರು ಗಾಯಗೊಂಡಿದ್ದಾರೆ. ಜೂನ್‌ನಲ್ಲಿ 28 ಜನರು ಸಾವನ್ನಪ್ಪಿದ್ದು, 96 ಜನರು ಗಾಯಗೊಂಡಿದ್ದಾರೆ. ಒಟ್ಟು 100 ಜನ ಈವರೆಗೂ ಮರಣ ಹೊಂದಿದ್ದು, 335 ಜನ ಗಾಯಗೊಂಡಿದ್ದಾರೆ” ಎಂದು ಉತ್ತರಿಸಿದರು.

ಸುರೇಶ್‌ ಕುಮಾರ್‌ ಮಧ್ಯ ಪ್ರವೇಶಿಸಿ, “ನನ್ನ ಅಂಕಿ ಅಂಶಗಳ ಪ್ರಕಾರ ರಾಮನಗರ ಜಿಲ್ಲೆಯಲ್ಲಿ 65, ಮಂಡ್ಯ ಜಿಲ್ಲೆಯಲ್ಲಿ 63 ಹಾಗೂ ಮೈಸೂರು ಜಿಲ್ಲೆಯಲ್ಲಿ 4 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಣಿಪುರದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ವೇದಿಕೆಯಲ್ಲ: ಸಿಜೆಐ

ಪರಮೇಶ್ವರ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಲೋಕೋಪಯೋಗಿ ಮತ್ತು ಗೃಹ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ಅಪಘಾತ ತಡೆಗೆ ನಾವು ಕ್ರಮವಹಿಸುತ್ತೇವೆ. ಪತ್ರದಲ್ಲಿ ನಾವು, ವೇಗ ನಿಯಂತ್ರಕ, ಹೈವೇ ಪೆಟ್ರೋಲಿಂಗ್‌, ಅಗತ್ಯ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಕೆ, ಲೈನ್‌ ಡಿಸಿಪ್ಲೇನ್‌, ಅಂಡರ್‌ ಪಾಸ್‌ ವಿದ್ಯುತ್‌ ದೀಪ ಅಳವಡಿಕೆ ಬಗ್ಗೆ ವಿವರಿಸಿದ್ದೇವೆ” ಎಂದರು.

ಜಿ ಟಿ ದೇವೇಗೌಡ ಮಧ್ಯ ಪ್ರವೇಶಿಸಿ, “ಮಹತ್ತರ ಉದ್ದೇಶದಿಂದ ಈ ಹೆದ್ದಾರಿ ಮಾಡಿದ್ದಾರೆ. ಆದರೆ ಏನಾಗಿದೆ ಎಂದರೆ, ಗುತ್ತಿಗೆದಾರ ರಸ್ತೆ ನಿರ್ಮಿಸುವಲ್ಲಿ ವಿಫಲನಾಗಿದ್ದಾನೆ. ಮಳೆಯಾದರೆ ನೀರು ಹೊರಗೆ ಹೋಗುತ್ತಿಲ್ಲ. ಇದರಿಂದ ವಾಹನಗಳು ಸ್ಕಿಡ್ ಆಗುತ್ತಿವೆ. ನಿತಿನ್‌ ಗಡ್ಕರಿ ಬಂದು ಪರಿಶೀಲಿಸಿ ಹೋದರೂ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸರಿಯಾದ ಮೆಂಟೆನೆನ್ಸ್ ಇಲ್ಲ. ಬಹಳಷ್ಟು ಕಡೆ ನ್ಯೂನತೆಗಳು ಇವೆ. ಎಲ್ಲವನ್ನು ಸರಿಪಡಿಸದೇ ಇದ್ದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X