ಮೊಹುವಾ ಮೊಯಿತ್ರಾ | ದಿಟ್ಟ ಧ್ವನಿ ಸದ್ದಡಗಿಸಲು ‘ಸ್ಕ್ರಿಪ್ಟ್’ ಮೊರೆ ಹೋದ ಬಿಜೆಪಿ

Date:

Advertisements

ಬಿಜೆಪಿಗಳ ನೆರೇಟಿವ್ ಬಹಳ ಸ್ಪಷ್ಟ. ಅದಾನಿ ಬಳಗ ಮತ್ತು ಪ್ರಧಾನಿಯವರ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಮೊಹುವಾ ದುಡ್ಡು ಪಡೆದಿದ್ದಾರೆ ಎಂಬುದು. ಈ ಆಪಾದನೆ ಹೇಗೆ ಒಂದು ಕಥನವಾಗಿ ಚುನಾವಣೆಯ ವೇಳೆ ಹೊರಹೊಮ್ಮಬೇಕು ಎಂಬ ಬಗ್ಗೆ ಈಗಾಗಲೇ ಒಂದು ‘ಸ್ಕ್ರಿಪ್ಟ್’ ಸಿದ್ಧವಾದಂತಿದೆ. ದಿಟ್ಟ ಧ್ವನಿಯೊಂದನ್ನು ಅಡಗಿಸಲು ತೆರೆಮರೆಯ ಸರ್ಕಸ್ ನಡೆಯುತ್ತಿದೆ…

ಸಣ್ಣ ಉಬ್ಬಾಳ್ತನದ ಹೊರತಾಗಿಯೂ ಈ 17ನೇ ಲೋಕಸಭೆಯಲ್ಲಿ ದೇಶದ ಗಮನ ಸೆಳೆದ ಒಂದು ಧ್ವನಿ ಇದ್ದರೆ ಅದು ಮೊಹುವಾ ಮೊಯಿತ್ರಾ ಅವರದು. ಡಿಜಿಟಲ್ ಯುಗದ ಮೊದಲ ‘ನೈಜ’ ಜನಪ್ರತಿನಿಧಿ ಅವರು. ಅವರನ್ನೀಗ ಹಠತೊಟ್ಟು ಒಂದು ವಿವಾದದಲ್ಲಿ ಸಿಲುಕಿಸಿ, ಚುನಾವಣೆಗೆ ಮುನ್ನ ಸಾಧ್ಯವಾದಷ್ಟೂ ಅವರ ಹೊಳಪನ್ನು ತಗ್ಗಿಸುವುದಕ್ಕೆ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಲು ‘ವ್ಯವಸ್ಥೆ’ ಹೊರಟಂತಿದೆ.

ನಾನು ‘ವ್ಯವಸ್ಥೆ’ ಎಂದು ಯಾಕೆ ಹೇಳಿದೆ ಎಂದರೆ, ಮೊಹುವಾ ಪ್ರತಿನಿಧಿಸುವ ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತವರ ಉತ್ತರಾಧಿಕಾರಿ ಎಂದೇ ಗುರುತಾಗಿರುವ ಸಂಬಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗಾಗಲೀ ಈ ಪ್ರಕರಣದಲ್ಲಿ ಕೃಷ್ಣಾನಗರ ಕ್ಷೇತ್ರವನ್ನು ಪ್ರತಿನಿಧಿಸುವ ತಮ್ಮ ಸಂಸದೆ ಮೊಹುವಾ ಅವರ ಪರವಾಗಿ ನಿಲ್ಲುವ ಆಸಕ್ತಿ ಇದ್ದಂತಿಲ್ಲ. ಅವರು ಈ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ‘ನೊ ಕಮೆಂಟ್ಸ್’ ಎಂದಿದ್ದಾರೆ. ಮೊಹುವಾ ಸಂಸತ್ತಿನ ಒಳಗೆ ಮತ್ತು ಹೊರಗೆ ತನ್ನ ಸ್ವಂತ ಚರಿಷ್ಮಾ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವುದು ಅವರಿಗೆ ಜೀರ್ಣ ಆದಂತಿಲ್ಲ.

ಮೊಹುವಾ ಮೇಲಿರುವ ಆಪಾದನೆ, ಆಕೆ ದುಡ್ಡಿಗಾಗಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದು. ಆಕೆ ದುಡ್ಡಿಗಾಗಿ ಯಾವ ಪ್ರಶ್ನೆಗಳನ್ನು ಕೇಳಿದರು, ಅದರ ಪರಿಣಾಮ ಏನಾಯಿತು ಎಂಬುದು ಆಪಾದನೆ ಮಾಡಿದವರಿಗೆ ಅಗತ್ಯ ಇಲ್ಲ. ಅವರ ನೆರೇಟಿವ್ ಬಹಳ ಸ್ಪಷ್ಟ. ಅದಾನಿ ಬಳಗ ಮತ್ತು ಪ್ರಧಾನಿಯವರ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಮೊಹುವಾ ದುಡ್ಡು ಪಡೆದಿದ್ದಾರೆ ಎಂಬುದು. ಈ ಆಪಾದನೆ ಹೇಗೆ ಒಂದು ಕಥನವಾಗಿ ಚುನಾವಣೆಯ ವೇಳೆ ಹೊರಹೊಮ್ಮಬೇಕು ಎಂಬ ಬಗ್ಗೆ ಈಗಾಗಲೇ ಒಂದು ‘ಸ್ಕ್ರಿಪ್ಟ್’ ಸಿದ್ಧವಾದಂತಿದೆ. ಅದರನ್ವಯ, ದೂರು ಬಂದ ತಕ್ಷಣ ಆ ದೂರನ್ನು ಸ್ಪೀಕರ್ ಸಾಹೇಬರು ಸದನದ ನೈತಿಕತೆ ಸಮಿತಿಗೆ ಅದನ್ನು ಒಪ್ಪಿಸಿದ್ದಾರೆ.

ನಿಷಿಕಾಂತ್ ದುಬೆ
ನಿಷಿಕಾಂತ್ ದುಬೆ

ಈ ಸ್ಕ್ರಿಪ್ಟಿನ ಪೊಳ್ಳುತನ ಹೊರಬೀಳತೊಡಗಿದ್ದು ಇಲ್ಲಿಂದ. ಸಂಸದ ನಿಷಿಕಾಂತ್ ದುಬೆ ಮತ್ತ ವಕೀಲ ಜೈ ಅನಂತ್ ದೇಹದ್ರಾಯ್ ಅವರ ದೂರಿನಲ್ಲಿ ಇದ್ದುದು, ಮೊಹುವಾ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಹೀರಾನಂದಾನಿ ಬಳಗದಿಂದ ದುಡ್ಡು ಪಡೆದಿದ್ದಾರೆ ಮತ್ತು ತಮ್ಮ ಲೋಕಸಭೆಯ ಸೈಟಿನ ಲಾಗಿನ್ ವಿವರಗಳನ್ನು ಅವರ ಜೊತೆ ಹಂಚಿಕೊಂಡಿದ್ದಾರೆ ಎಂಬ ಆಪಾದನೆ. ನೈತಿಕತೆ ಸಮಿತಿಗೆ ಏಕಾಏಕಿ ‘ಮಾಫಿಸಾಕ್ಷಿ’ ಆಗಿ ಸ್ವತಃ ಹೀರಾನಂದಾನಿ ಬಳಗದ ಮುಖ್ಯಸ್ಥ ದರ್ಶನ್ ಹೀರಾನಂದಾನಿ ಒಂದು ಅಫಿದಾವಿತ್ ಸಲ್ಲಿಸಿ, ಮೊಹುವಾ ವಿರುದ್ಧ ದೂರನ್ನು ಸಮರ್ಥಿಸುತ್ತಾರೆ. ಲಾಜಿಕಲಿ, ಇಲ್ಲಿಗೆ ಮೊಹುವಾ ಅವರ ತಪ್ಪು ಸಾಬೀತಾಗಿ, ಎಲ್ಲ ದಾರಿಗಳೂ ಮುಚ್ಚಿಕೊಳ್ಳಬೇಕಿತ್ತು. ತಮಾಷೆ ಎಂದರೆ, ಇಲ್ಲಿಂದ ಅವರ ಎಲ್ಲ ಹಾದಿಗಳು ತೆರೆದುಕೊಳ್ಳತೊಡಗಿವೆ.

ಮೊದಲನೆಯದಾಗಿ, ಸಂಸತ್ತಿನ ನೈತಿಕತೆ ಸಮಿತಿಯ ನಿಯಮಗಳ ಪ್ರಕಾರ (ನಿಯಮ 275) ಅಲ್ಲಿನ ಯಾವುದೇ ಕಲಾಪ ಹೊರಗೆ ಸೋರಿಕೆ ಆಗುವಂತಿಲ್ಲ. ಆದರೆ, ಹೀರಾನಂದಾನಿ ಅವರ ಅಫಿದಾವಿತ್ ಸಮಿತಿಗೆ ತಲುಪುವ ಮೊದಲೇ ನೇರವಾಗಿ ಮಾಧ್ಯಮಗಳಿಗೆ ಸೋರಿಕೆ ಆಗುತ್ತದೆ! ಸಮಿತಿಯ ಅಧ್ಯಕ್ಷ ಸಂಸದ ವಿನೋದ್ ಕುಮಾರ್ ಸೋನ್‌ಕರ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾರೆ!!

ಎರಡನೆಯದಾಗಿ ಸಂಸತ್ತಿನ ವೆಬ್‌ಸೈಟಿಗೆ ಲಾಗಿನ್ ಆಗಿ ಪ್ರಶ್ನೆ ಕೇಳುವ ಹಕ್ಕು ಸಂಸದರಿಗೆ ಇರುವುದು ಹೌದಾದರೂ ಅಲ್ಲಿ ಲಾಗಿನ್ ಮಾಡಬೇಕಾದ್ದು ಅವರು ಮಾತ್ರ ಅಥವಾ ಆ ಲಾಗಿನ್-ಪಾಸ್‌ವರ್ಡ್ ಇನ್ನೊಬ್ಬರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಖಡಕ್ ನಿಯಮವೇನೂ ಇದ್ದಂತಿಲ್ಲ. ಯಾಕೆಂದರೆ ಸಂಸತ್ತಿನಲ್ಲಾಗಲೀ ವಿಧಾನಮಂಡಲದಲ್ಲಾಗಲೀ ಆ ಕೆಲಸ ಮಾಡುವುದು ಸಾಮಾನ್ಯವಾಗಿ ಸಂಸದರ/ಶಾಸಕರ ಸಿಬ್ಬಂದಿಗಳೇ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಮೂರನೆಯದಾಗಿ, ಸಂಸದರ ಪ್ರಶ್ನೆಗಳೇನೂ ಮ್ಯಾಜಿಕ್ ಆಗಿ ಮೂಡುವಂತಹವಲ್ಲ. ಅವರು ಜನಪ್ರತಿನಿಧಿಗಳು. ಜನರ (ಅದರಲ್ಲಿ ವ್ಯವಹಾರಸ್ಥರೂ ಸೇರಿರುತ್ತಾರೆ!) ಪ್ರಶ್ನೆಗಳನ್ನೇ, ಜನರಿಂದ ಮಾಹಿತಿ ಪಡೆದು, ಜನರಿಗಾಗಿ ಕೇಳಬೇಕಾದುದು ಸಂಸದರ ಧರ್ಮ. ಮೊಹುವಾ ಪಾಲಿಸಿದ್ದು ಅದನ್ನೇ. ಒಂದು ವೇಳೆ ಆಕೆ ಏನಾದರೂ ಲಾಭವನ್ನು ಆ ಪ್ರಶ್ನೆಗಾಗಿ ಪಡೆದಿದ್ದರೆ, ಅದನ್ನು ಇಂತಹ ಪ್ರಶ್ನೆಗೆಂದೇ ಇಂತಹ ಅನುಕೂಲ ಮಾಡಿಕೊಡಲಾಗಿದೆ ಎಂದು ಸಾಬೀತುಪಡಿಸುವುದು ಕೂಡ (ಸ್ವತಃ ಕೊಟ್ಟವರಿಗೂ) ಕಷ್ಟವಿದೆ. ಹಾಗಾಗಿ ಇಡೀ ಗೊಂದಲದ ಏಕೈಕ ಉದ್ದೇಶ ಮೊಹುವಾ ಅವರ ನೇರ ವ್ಯಕ್ತಿತ್ವದ ಮೇಲೆ ಕೆಸರೆರಚುವ ಮೂಲಕ ಮುಂದಿನ ಚುನಾವಣೆಗಳ ವೇಳೆ ಆಕೆಯ ಮೊನಚ ಮಾತುಗಳನ್ನು ಮೊಂಡುಗೊಳಿಸುವುದು.

ಸ್ವತಃ ಆಕೆಯ ಪಕ್ಷದವರಿಗೂ, ಮೊಹುವಾ ಸ್ವಲ್ಪ ಮಂದವಾದರೆ ತಮಗೆ ಅನುಕೂಲ ಅನ್ನಿಸಿರುವುದರಿಂದ ಅವರು ಕಾದು ನೋಡುವ ಆಟ ಆಡುತ್ತಿದ್ದಾರೆ.

ಒಂದಂತೂ ಸ್ಪಷ್ಟ. ಇಲ್ಲಿಯ ತನಕದ ಮೊಹುವಾ ಹೋರಾಟವನ್ನು ಗಮನಿಸಿದರೆ, ಆಕೆ ಏಕಾಂಗಿಯಾಗಿ ಈ ಸವಾಲನ್ನು ಎದುರಿಸಿ ಗೆಲ್ಲುವುದಕ್ಕೆ ಸಮರ್ಥೆ. ಹಾಗಾದರೆ ದೇಶಕ್ಕೆ ಅದರಿಂದ ಒಳಿತಿದೆ.

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ಕಾಂಗ್ರೆಸ್‌ನ ‘ಎಕ್ಸ್’ ಖಾತೆಯಲ್ಲಿ ಪ್ರಚೋದನಕಾರಿ ಪೋಸ್ಟ್ – ಆರೋಪ; ಎಫ್‌ಐಆರ್ ದಾಖಲು

ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ನ ಅಧಿಕೃತ 'ಎಕ್ಸ್‌' ಖಾತೆಯಲ್ಲಿ ಆಕ್ಷೇಪಾರ್ಯ ಪೋಸ್ಟ್‌ ಮಾಡಲಾಗಿತ್ತು...

ಕೇರಳ ವಿಧಾನಸಭೆಯಲ್ಲಿ SIR ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯವು...

Download Eedina App Android / iOS

X