ಯುದ್ಧಕೋರರ ಪರ ನಿಲುವುಳ್ಳ ಮೋದಿ ಸರ್ಕಾರಕ್ಕೆ ಬೊಮ್ಮಾಯಿ ಮಾತಿನ ಎಚ್ಚರಿಕೆ ಘಂಟೆ!

Date:

ಇರಾನ್‌ ಮೇಲೆ ಯುದ್ಧದಾಹಿ ಅಮೆರಿಕ ಮತ್ತು ಅದರ ಬಾಲಂಗೋಚಿ ಇಸ್ರೇಲ್ ಯುದ್ಧ ಸಾರಿವೆ. ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅವರನ್ನು ಹತ್ಯೆಗೈದಿವೆ. ತೈಲ ಸಂಪತ್ತನ್ನು ಹೊಂದಿರುವ ಇರಾನ್‌ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿವೆ. ಅಮೆರಿಕ ಸರ್ವಾಧಿಕಾರದ ದಾಹಕ್ಕೆ ಮಧ್ಯಪ್ರಾಚ್ಯ ಯುದ್ಧಭೂಮಿಯಾಗಿ ಬದಲಾಗಿದೆ. ಆದರೂ, ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಯುದ್ಧಕೋರ ಅಮೆರಿಕ-ಇಸ್ರೇಲ್‌ ಪರವಾದ ಧೋರಣೆಯನ್ನು ತಳೆದಿದೆ. ಇದೇ ಸಮಯದಲ್ಲಿ, ಬಿಜೆಪಿ ಸಂಸದರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ಧೋರಣೆಗಿಂತ ಭಿನ್ನವಾಗಿ ಮಾತನಾಡಿದ್ದಾರೆ. ಅಮೆರಿಕವನ್ನು ಖಂಡಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, “ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ಯುದ್ಧ ಮತ್ತು ಇರಾನ್‌ ಪ್ರತಿದಾಳಿಯು ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು. ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಮೊದಲು ಜರಸಲೇಮ್‍ಗಾಗಿ ಯುದ್ಧ ನಡೆದಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ನಡೆಯುತ್ತಿದೆ. ಅಮೆರಿಕ ತೈಲ ಉತ್ಪನ್ನಗಳ ಮೇಲೆ ಹಿಡಿತ ಸಾಧಿಸಲು ನೋಡುತ್ತಿದೆ. ಅಮೆರಿಕ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

“ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಶ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ ತಂತ್ರ ಮಾಡುತ್ತಿವೆ. ಅವರೂ ಯುದ್ದಕ್ಕೆ ಇಳಿದರೆ ಬಹಳ ದೊಡ್ಡ ಅನಾಹುತ ಆಗಲಿದೆ. ಇದರಿಂದ, ಪರಿಣಾಮ ಬೀರಲಿದೆ. ಆಧುನಿಕ ಯುದ್ಧಗಳಲ್ಲಿ ಎಲ್ಲರೂ ಸೋಲುತ್ತಾರೆ; ವಿಶೇಷವಾಗಿ ಪರಮಾಣು ಸಾಮರ್ಥ್ಯದ ಹಿನ್ನೆಲೆಯಲ್ಲಿ ಮಾತುಕತೆ, ಚರ್ಚೆಗಳ ಮೂಲಕ ಪರಿಹರಿಸಬೇಕು” ಎಂದಿದ್ದಾರೆ.

ಬೊಮ್ಮಾಯಿ ಅವರ ಮಾತುಗಳು ಬಿಜೆಪಿಯ ಧೋರಣೆ-ನಿಲುವಿಗಿಂತ ಭಿನ್ನವಾಗಿವೆ. ಮಾತ್ರವಲ್ಲ, ಮಹತ್ವದ್ದೂ ಆಗಿವೆ. ಪ್ರಧಾನಿ ಮೋದಿ ಅವರು ಇಸ್ರೇಲ್‌ಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ಅನ್ನು ತಮ್ಮ ಪಿತೃ ರಾಷ್ಟ್ರವೆಂದು ಹೇಳಿಕೊಂಡಿದ್ದಾರೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್‌ ನಡುವೆ ರಾಜತಾಂತ್ರಿಕ ಮಾತುಕತೆ ಅಗತ್ಯವೆಂದು ಹೇಳುತ್ತಿದ್ದರೂ, ಟ್ರಂಪ್‌ ಎದುರು ಶರಣಾಗಿರುವ ಮೋದಿ, ಇಸ್ರೇಲ್‌ಗೆ ಬೆಂಬಲ ಮುಂದುವರೆದಿದ್ದಾರೆ.

ಈ ಲೇಖನ ಓದಿದ್ದೀರಾ?: ಇರಾನ್‌ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?

ಮಧ್ಯಪ್ರಾಚ್ಯದಲ್ಲಿ ಸಾವಿರಾರು ಕನ್ನಡಿಗರು ಸೇರಿದಂತೆ ಸುಮಾರು 1 ಕೋಟಿಗೂ ಹೆಚ್ಚು ಮಂದಿ ಭಾರತೀಯರು ನೆಲೆಸಿದ್ದಾರೆ. ಒಂದು ವೇಳೆ, ಯುದ್ಧವು ಭೀಕರತೆ ಪಡೆದುಕೊಂಡರೆ, ಅಲ್ಲಿರುವ ಭಾರತೀಯರು ಸೇರಿದಂತೆ ಮಧ್ಯಪ್ರಾಚ್ಯ ವಾಸಿಗಳ ಮಾರಣಹೋಮವೇ ನಡೆದುಹೋಗಲಿದೆ. ಇದರ ಅರಿವಿದ್ದರೂ, ಮೋದಿ ಸರ್ಕಾರವು ಯುದ್ಧಕೋರರ ಪರವಾಗಿ ನಿಂತಿದೆ.

ಇದೇ ಸಮಯದಲ್ಲಿ ಬಂದಿರುವ ಬೊಮ್ಮಾಯಿ ಅವರ ನಿಲುವು ಯುದ್ಧ ವಿರೋಧಿ ಮತ್ತು ಶಾಂತಿ-ಮಾತುಕತೆಯನ್ನು ಒತ್ತಾಯಿಸಿದೆ. ವೊಮ್ಮಾಯಿ ಮಾತುಗಳು ಭಾರತವು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ‘ವಸುಧೈವ ಕುಟುಂಬಕಂ’ – ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಆದರ್ಶವನ್ನು ಮತ್ತೆ ಒತ್ತಿ ಹೇಳುತ್ತವೆ. ಅಂತರರಾಷ್ಟ್ರೀಯ ನಿಯಮಗಳು ಒತ್ತಡದಲ್ಲಿರುವ ಇಂತಹ ಸಮಯದಲ್ಲಿ, ಮೌನವಾಗಿರುವ ಮೋದಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡುತ್ತವೆ. ಬೊಮ್ಮಾಯಿ ಮಾತುಗಳು ಮೋದಿ ಸೇರಿದಂತೆ ಬಿಜೆಪಿಗರ ಕಿವಿಹೊಕ್ಕಬೇಕು. ಭಾರತವು ತನ್ನ ಯುದ್ಧವಿರೋಧಿ ನಿಲುವನ್ನು ಬಲವಾಗಿ ಪ್ರತಿವಾದಿಸುವಂತಾಗಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವದ ಗಟ್ಟಿತನವಿರುವುದು ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇರುವಲ್ಲಿ: ಸಿಎಂ ಡಿ.ಕೆ ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆಯೇ ಬುನಾದಿಯಾಗಿದೆ. ಎಲ್ಲರೂ ಸರ್ಕಾರಕ್ಕೆ ಕುರುಡಾಗಿ ತಲೆಬಾಗುವುದೇ...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...