ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಶೂ ಎಸೆದ ಘಟನೆ ಅತ್ಯಂತ ಖಂಡನೀಯ, ಕಳವಳಕಾರಿ ಹಾಗೂ ಅಸಭ್ಯ ಕೃತ್ಯ. ಇಂತಹ ಕೃತ್ಯಗಳು ನ್ಯಾಯಾಂಗದ ಗೌರವ ಮತ್ತು ಘನತೆಗೆ ಧಕ್ಕೆಯುಂಟು ಮಾಡುತ್ತವೆ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸಭ್ಯತೆ, ಹಿಂಸೆ, ಅವಿನಯದ ನಡೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಹಾನಿ ಉಂಟು ಮಾಡುತ್ತವೆ. ಸ್ವತಂತ್ರ್ಯ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಇಂತಹ ಕೃತ್ಯಗಳನ್ನು ದೇಶದ ಜನತೆ ಮತ್ತು ವಕೀಲರು ಒಗ್ಗೂಡಿ ಖಂಡಿಸಬೇಕು. ಈ ನೆಲೆದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಎಲ್ಲರ ಜವಾಬ್ದಾರಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ: ಕಾನೂನಿನ ಶಿಷ್ಟತೆ ಕಾಪಾಡುವವರಿಂದಲೇ ಸಂವಿಧಾನದ ಕಗ್ಗೊಲೆ
“ಇಂತಹ ಕೃತ್ಯದಿಂದ ಮುಖ್ಯ ನ್ಯಾಯಮೂರ್ತಿಗಳು ವಿಚಲಿತರಾಗದೇ ಕಾರ್ಯ ಕಲಾಪಗಳನ್ನು ನಡೆಸಿ, ಭಾರತದ ನ್ಯಾಯಾಂಗದ ದೃಢತೆ, ಗೌರವ, ಘನತೆಯನ್ನು ಎತ್ತಿ ಹಿಡಿದಿರುವುದು ಅತ್ಯಂತ್ಯ ಶ್ಲಾಘನೀಯವಾಗಿದೆ. ದೇಶದ ಸವೋಚ್ಛ ನ್ಯಾಯಪೀಠಕ್ಕೆ ಆದ ಇಂತಹ ಅಪಮಾನಗಳು ಮತ್ತೊಮ್ಮೆ ನಡೆಯದಂತೆ ಎಚ್ಚರ ವಹಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.