ದೆಹಲಿಯಲ್ಲಿ ಎಎಪಿ ವಿಭಜನೆ?: ಪಕ್ಷ ತೊರೆದು ಹೊಸ ಪಕ್ಷ ಕಟ್ಟಲು ಮುಂದಾದ 15 ಕೌನ್ಸಿಲರ್‌ಗಳು

Date:

ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಅದ್ಮಿ ಪಕ್ಷ (ಎಎಪಿ) ಹೀನಾಯ ಸೋಲುಂಡಿದ್ದು, ಭಾರೀ ಮುಖಭಂಗ ಅನುಭವಿಸಿತ್ತು. ಎಎಪಿಯ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಹಲವರು ಸೋಲುಂಡಿದ್ದಾರೆ. ಎಎಪಿ ತನ್ನ ವರ್ಚಸ್ಸು, ನೆಲೆ ಕಳೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಇದೇ ಹೊತ್ತಿನಲ್ಲಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) 15 ಎಎಪಿ ಕೌನ್ಸಿಲರ್‌ಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹೊಸ ಪಕ್ಷ ಕಟ್ಟುವುದಾಗಿ ಘೊಷಿಸಿದ್ದಾರೆ.

- Advertisement -

ಎಂಸಿಡಿ ಕೌನ್ಸಿಲರ್‌ಗಳಾದ ಮುಕೇಶ್ ಗೋಯೆಲ್ ಮತ್ತು ಹಿಮಾನಿ ಜೈನ್ ನೇತೃತ್ವದಲ್ಲಿ 15 ಕೌನ್ಸಿಲರ್‌ಗಳು ಎಎಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಆಂತರಿಕ ಸಂಘರ್ಷಗಳೇ ತಾವು ಪಕ್ಷ ತೊರೆಯಲು ಕಾರಣ. ಆಂತರಿಕ ಸಂಘರ್ಷದಿಂದಾಗಿ ಪಾಲಿಕೆಯಲ್ಲಿ ಯಾವುದೇ ಮಹತ್ವದ ಕೆಲಸಗಳು ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಎಎಪಿ ತೊರೆದಿರುವ ಕೌನ್ಸಿಲರ್‌ಗಳು ‘ಇಂದ್ರಪ್ರಸ್ಥ ವಿಕಾಸ್ ಪಕ್ಷ’ ಎಂಬ ಹೊಸ ಪಕ್ಷ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ.

“ಎಂಸಿಡಿಯಲ್ಲಿ ನಾವು ಅಧಿಕಾರದಲ್ಲಿದ್ದೆವು. ಆದರೂ, ಕಳೆದ 2.5 ವರ್ಷಗಳಲ್ಲಿ ಯಾವುದೇ ಉತ್ತಮ ಕೆಲಸ ಮಾಡಲಾಗಿಲ್ಲ. ದೆಹಲಿ ಅಭಿವೃದ್ಧಿಯೇ ನಮ್ಮ ಸಿದ್ಧಾಂತವಾಗಿದೆ. ಹೀಗಾಗಿ, ನಾವು ಎಎಪಿ ತೊರೆದು, ‘ಇಂದ್ರಪ್ರಸ್ಥ ವಿಕಾಸ್ ಪಕ್ಷ’ವನ್ನು ಕಟ್ಟುತ್ತಿದ್ದೇವೆ. ದೆಹಲಿಯ ಅಭಿವೃದ್ಧಿಗಾಗಿ ದುಡಿಯುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ” ಎಂದು ಹಿಮಾನಿ ಜೈನ್ ಹೇಳಿದ್ದಾರೆ.

“ಈಗ 15 ಕೌನ್ಸಿಲರ್‌ಗಳು ಎಎಪಿ ತೊರೆದಿದ್ದೇವೆ. ಎಎಪಿಗೆ ರಾಜೀನಾಮೆ ನೀಡುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು” ಎಂದು ಮುಕೇಶ್ ಗೋಯಲ್ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ಕಾಂಗ್ರೆಸ್‌ – ತರೂರ್ ನಡುವೆ ವಾಗ್ಯುದ್ಧ; ಬೇಳೆ ಬೇಯಿಸಿಕೊಳ್ಳುತ್ತಿದೆ ಬಿಜೆಪಿ

ಕೌನ್ಸಿಲರ್‌ಗಳ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕಿ ಪ್ರಿಯಾಂಕಾ ಕಕ್ಕರ್, “ರಾಜೀನಾಮೆ ನೀಡಿದ ಕೌನ್ಸಿಲರ್‌ಗಳಿಗೆ ಬಿಜೆಪಿಗರು ಆಮಿಷವೊಡ್ಡುತ್ತಿದ್ದಾರೆ.ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ರೀತಿಯ ತಂತ್ರಗಳ ಮೂಲಕ ನಗರಸಭೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...