ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ ಅವರು ಪ್ರಧಿಕಾರದ ಮುಖ್ಯ ಕಚೇರಿಯಲ್ಲಿ ಗುರುವಾರ (ಜೂ.13) ಅಧಿಕಾರ ಸ್ವೀಕರಿಸಿದರು.
ರಾಜ್ಯ ಸರ್ಕಾರವು ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾರ್ಚ್ 16ರಂದು ಆದೇಶ ಹೊರಡಿಸಿತ್ತು. ಸರ್ಕಾರಿ ಆದೇಶ ಪ್ರಕಟಗೊಂಡ ದಿನದಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಅವರು ಇಷ್ಟು ದಿನ ಅಧಿಕಾರ ಸ್ವೀಕಾರ ಮಾಡಿರಲಿಲ್ಲ.
“ಎಲ್ಲ ವಲಯಗಳಲ್ಲೂ ಕನ್ನಡ ಬಳಕೆ ಮತ್ತು ಅನುಷ್ಟಾನಕ್ಕಾಗಿ ಹಾಗೂ ಕನ್ನಡದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಪ್ರಾಧಿಕಾರ ನಿರಂತರವಾಗಿ ಶ್ರಮಿಸಲಿದೆ” ಎಂದು ಅಧಿಕಾರ ಸ್ವೀಕರಿಸದ ಬಳಿಕ ಪುರುಷೋತ್ತಮ ಬಿಳಿಮಲೆ ಅವರು ಪ್ರಾಧಿಕಾರದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ ಅವರು ದಿನಾಂಕ: ೧೩-೦೬-೨೦೨೪ ರ ಪೂರ್ವಾಹ್ನ ಅಧಿಕಾರ ಸ್ವೀಕರಿಸಿ, ಎಲ್ಲ ವಲಯಗಳಲ್ಲೂ ಕನ್ನಡ ಬಳಕೆ ಮತ್ತು ಅನುಷ್ಟಾನಕ್ಕಾಗಿ ಹಾಗೂ ಕನ್ನಡದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಪ್ರಾಧಿಕಾರ ನಿರಂತರವಾಗಿ ಶ್ರಮಿಸಲಿದೆ ಎಂದು ತಿಳಿಸಿದರು. pic.twitter.com/9fd9pz04gD
— ಕನ್ನಡ ಅಭಿವೃದ್ಧಿ ಪ್ರಾಧಿಕಾರ (@kdabengaluru) June 13, 2024

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ ಅಭಿನಂದನೆಗಳು. ತಮ್ಮ ಅಧಿಕಾರಾವಧಿಯಲ್ಲಿ ಕನ್ನಡ ಶಾಲೆಗಳು ಎಲ್ಲೂ ಮುಚ್ಚದಿರಲಿ. ಕನ್ನಡ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರಥಮ ಪ್ರಾಶಸ್ತ್ಯವಿರಲಿ.
ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಕರ್ನಾಟಕದವರೆಂದು ಪರಿಗಣಿಸಿ , ಕಾಸರಗೋಡಿನ ಕನ್ನಡಿಗರಿಗೂ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸೇವೆ ಸಲ್ಲಿಸಲು ಅನುಕೂಲವಾಗುವಂತಹ ನಿಯಮಗಳನ್ನು ಜಾರಿಗೆ ತರುವಂತೆ ತಾವು ಪ್ರಯತ್ನ ಪಡುವಿರೇ ತಮ್ಮಲ್ಲಿ ನನ್ನ ವಿನಯಪೂರ್ವಕ ಆಗ್ರಹ.