ಭವಿಷ್ಯನಿಧಿ ಬಡ್ಡಿದರ | ಶ್ವೇತಪತ್ರದಲ್ಲಿ ಘೋಷಿಸಲಾದ ಆರ್ಥಿಕ ಪ್ರಗತಿಯ ಫಲ ಶ್ರಮಿಕ ವರ್ಗಕ್ಕೆ ಸಿಗಲಿಲ್ಲ

Date:

ಉದ್ಯೋಗಿಗಳ ಭವಿಷ್ಯನಿಧಿ ಬಡ್ಡಿದರ ಅಲ್ಪಪ್ರಮಾಣದಲ್ಲಿ ಏರಿಸಲು ಶಿಫಾರಸು ಮಾಡಲಾಗಿದೆ. ಶ್ವೇತಪತ್ರದಲ್ಲಿ ಹೇಳಿರುವಂತೆ ದೇಶ ಆರ್ಥಿಕವಾಗಿ ಉತ್ತಮ ಪ್ರಗತಿ ಸಾಧಿಸಿದಲ್ಲಿ ಅದರ ಫಲ ಶ್ರಮಿಕವರ್ಗಕ್ಕೆ ಏಕೆ ಸಿಗುತ್ತಿಲ್ಲ?

ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಇರುವ ಸಂದರ್ಭದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಟ್ರಸ್ಟಿಗಳ ಕೇಂದ್ರ ಮಂಡಳಿ (ಸಿಬಿಟಿ), 2023-24ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಶೇ. 8.25ಕ್ಕೆ ಏರಿಸಲು ಶಿಫಾರಸು ಮಾಡಿದೆ.

- Advertisement -

ಇದೇ ಏಪ್ರಿಲ್‌-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೊದಲು ಶನಿವಾರ ಸಭೆ ನಡೆಸಿದ ಸಿಬಿಟಿ ಉದ್ಯೋಗಿಗಳ ಭವಿಷ್ಯನಿಧಿಯ ಮೇಲಿನ ಬಡ್ಡಿದರವನ್ನು ಏರಿಸಲು ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ಮೂರು ವರ್ಷಗಳಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಭವಿಷ್ಯ ನಿಧಿಯ ಮೇಲಿನ ಬಡ್ಡಿದರವನ್ನು ಏರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಹಿಂದಿನ ಅವಧಿಯ ಎನ್‌ಡಿಎ ಆಡಳಿತದ ಸಂದರ್ಭದ ಭವಿಷ್ಯನಿಧಿ ಮೇಲಿನ ಬಡ್ಡಿದರಕ್ಕೆ ಹೋಲಿಸಿದಲ್ಲಿ ಈಗ ಅಲ್ಪಮಾತ್ರ ಬಡ್ಡಿದರ ಏರಿಸಲಾಗಿದೆ.

ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 2019-20ರಲ್ಲಿ ಭವಿಷ್ಯನಿಧಿಯ ಮೇಲಿನ ಬಡ್ಡಿದರವನ್ನು ಶೇ 8.5ರಷ್ಟು ಏರಿಸಲಾಗಿತ್ತು. ನಂತರ 2020-21ರವರೆಗೆ ಅದೇ ದರವನ್ನು ಕಾಯ್ದುಕೊಳ್ಳಲಾಗಿದೆ. ನಂತರ 2021-22ರಲ್ಲಿ ಬಡ್ಡಿದರವನ್ನು ಶೇ 8.1ಕ್ಕೆ ಇಳಿಸಲು ಸಿಬಿಟಿ ನಿರ್ಧರಿಸಿತ್ತು. ಇದು ನಾಲ್ಕು ದಶಕಗಳ ಅತಿ ಕಡಿಮೆ ಬಡ್ಡಿದರವಾಗಿ ದಾಖಲಾಗಿತ್ತು. ನಂತರ 2022-23ರಲ್ಲಿ ಅದನ್ನು ಶೇ 8.15ಕ್ಕೆ ಏರಿಸಲಾಗಿದೆ.

ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಈ ಬಡ್ಡಿದರವನ್ನು ಅನುಷ್ಠಾನಗೊಳಿಸಲು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಲಿದೆ. ಹಣಕಾಸು ಸಚಿವಾಲಯದ ಒಪ್ಪಿಗೆಯ ನಂತರ ಇಪಿಎಫ್‌ಒ ಭವಿಷ್ಯನಿಧಿ ಚಂದಾದಾರರ ಕೊಡುಗೆಗೆ ಈ ದರವನ್ನು ನಿಗದಿ ಮಾಡಲಿದೆ. ಭವಿಷ್ಯನಿಧಿ ಸಂಸ್ಥೆಯ ಒಟ್ಟು 29 ಕೋಟಿ ಚಂದಾದಾರರಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವ 6.8 ಕೋಟಿ ಚಂದಾದಾರರು ಇದ್ದಾರೆ.

ಕುಸಿಯುತ್ತ ಹೋದ ಭವಿಷ್ಯನಿಧಿ ಮೇಲಿನ ಬಡ್ಡಿದರ

ಉದ್ಯೋಗಿಗಳ ಭವಿಷ್ಯನಿಧಿಯ ಮೇಲಿನ ಬಡ್ಡಿದರ ಇತ್ತೀಚೆಗಿನ ಎರಡು ದಶಕಗಳಲ್ಲಿ ಕೆಳಮುಖವಾಗಿ ಇಳಿಯುತ್ತಲೇ ಬಂದಿದೆ. 2010-11ರ ಅವಧಿಯಲ್ಲಿ ಭವಿಷ್ಯನಿಧಿಯ ಮೇಲೆ ಅತ್ಯಧಿಕ ಶೇ 9.50ರಷ್ಟು ಬಡ್ಡಿದರ ನಿಗದಿಯಾಗಿತ್ತು. ನಂತರ 2011-12ರಲ್ಲಿ ಅದನ್ನು ಶೇ 8.25ರಷ್ಟಕ್ಕೆ ಇಳಿಸಲಾಯಿತು.

2012- 13ರಲ್ಲಿ ಶೇ 8.50ಕ್ಕೆ ಮತ್ತು ಲೋಕಸಭಾ ಚುನಾವಣೆಗೆ ಮೊದಲು 2013-14ರಲ್ಲಿ ಶೇ 8.75ಕ್ಕೆ ಏರಿಸಲಾದ ಬಡ್ಡಿದರವನ್ನು ನಂತರ 2015-16ರ ಅವಧಿಯಲ್ಲಿ ಶೇ 8.80ಕ್ಕೆ ಏರಿಸಲಾಗಿತ್ತು.

2016-17ರಲ್ಲಿ ಶೇ 8.65ರಷ್ಟಕ್ಕೆ ಇಳಿಸಿದ ನಂತರ ಬಡ್ಡಿದರ ಕುಸಿಯುತ್ತಲೇ ಹೋಗಿದೆ. 2017-18ರಲ್ಲಿ ಶೇ 8.55ಕ್ಕೆ ಇಳಿಸಲಾಯಿತು. ನಂತರ ಲೋಕಸಭಾ ಚುನಾವಣೆಗೆ ಮೊದಲು 2018-19ರಲ್ಲಿ ಶೇ 8.65ಗೆ ಏರಿಸಲಾಯಿತು. ಚುನಾವಣೆಯ ನಂತರದಲ್ಲಿ ಮತ್ತೆ ಬಡ್ಡಿದರವನ್ನು ವರ್ಷಂಪ್ರತಿ ಇಳಿಸುತ್ತಲೇ ಹೋಗಲಾಗಿದೆ.

ಚುನಾವಣೆ ನಂತರ ಪಾತಾಳಕ್ಕೆ ಇಳಿದ ಬಡ್ಡಿದರ

2019-20ರಲ್ಲಿ ಶೇ 8.5ಗೆ ಇಳಿದ ಬಡ್ಡಿದರ, 2021-22ರಲ್ಲಿ ಶೇ 8.1ಕ್ಕೆ ಕುಸಿಯಿತು. ಹೀಗೆ ಇನ್ನಷ್ಟು 0.4ರಷ್ಟು ಕುಸಿದ ಬಡ್ಡಿದರವನ್ನು ನಂತರ 2022-23ರಲ್ಲಿ ಶೇ 8.15ಕ್ಕೆ ಕೇವಲ 0.05ರಷ್ಟು ಏರಿಸಲಾಯಿತು. 

ಇದೀಗ ಮೂರು ವರ್ಷಗಳ ನಂತರದ ಅತ್ಯಧಿಕ ಬೆಲೆಯಾಗಿ 2023-24ರ ಅವಧಿಯಲ್ಲಿ ಶೇ 8.25ರಷ್ಟು ಬಡ್ಡಿದರ ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ. ಆದರೆ 2019-20ರಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ ಶೇ 8.65ಕ್ಕೆ ಹೋಲಿಸಿದರೆ ಈಗಿನ ಶೇ. 0.10 ರಷ್ಟು ಏರಿಕೆಯ ಶಿಫಾರಸು ಅತಿ ಕನಿಷ್ಠ ಪ್ರಗತಿ. ಹೀಗಾಗಿ ಅಲ್ಪಮೊತ್ತದ ಬಡ್ಡಿದರ ಏರಿಕೆ ಚುನಾವಣೆಯ ಘಟ್ಟದಲ್ಲಿ ಉದ್ಯೋಗಿಗಳ ಕಣ್ಣಿಗೆ ಮಣ್ಣೆರಚುವ ಯತ್ನವೆನ್ನುವ ಅನುಮಾನ ಮೂಡಿದೆ. 

ಶ್ರಮಿಕ ವರ್ಗಕ್ಕೆ ನೀಡಿಲ್ಲವೆ ಆರ್ಥಿಕ ಪ್ರಗತಿಯ ಫಲ?

ಆರ್ಥಿಕವಾಗಿ ಸದೃಢವಾದ ದೇಶವನ್ನು ಕಟ್ಟಿರುವ ಹೆಮ್ಮೆಯನ್ನು ಶ್ವೇತಪತ್ರದಲ್ಲಿ ಪ್ರಕಟಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರದ ಅವಧಿಯಲ್ಲಿ ಕಾರ್ಮಿಕರಿಗೆ ಸಿಗುತ್ತಿದ್ದ ಭವಿಷ್ಯನಿಧಿಯ ಮೇಲಿನ ಬಡ್ಡಿದರ ಶೇ 8.75ರಿಂದ ಕುಸಿದು ಶೇ. 8.15ಗೆ ಇಳಿಸಿ, ಇದೀಗ ಶೇ. 8.25ಕ್ಕೆ ಏರಿಸಿರುವುದನ್ನು ಹೇಗೆ ವ್ಯಾಖ್ಯಾನಿಸಲಿದೆ ಎನ್ನುವ ಪ್ರಶ್ನೆ ಏಳುತ್ತದೆ.

ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೂ, ಯುಪಿಎ ಅವಧಿಗೆ ಹೋಲಿಸಿದರೆ ಉತ್ತಮ ಅರ್ಥವ್ಯವಸ್ಥೆಯನ್ನು ಕಟ್ಟಿದ್ದರೂ, ಅದರ ಲಾಭವನ್ನು ಶ್ರಮಿಕ ವರ್ಗಕ್ಕೆ ನೀಡುವುದಿಲ್ಲ ಎನ್ನುವ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆಯೆ? ಅಥವಾ ಎನ್‌ಡಿಎ ಸರ್ಕಾರ ತನ್ನ ಆರ್ಥಿಕ ಪ್ರಗತಿಯ ಕುರಿತ ಶ್ವೇತಪತ್ರದಲ್ಲಿ ಸುಳ್ಳಿನ ಸರಮಾಲೆ ಕಟ್ಟಿದೆಯೆ? ಶ್ರಮಿಕ ವರ್ಗ ಈ ಪ್ರಶ್ನೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ಲೋಕಸಭಾ ಚುನಾವಣೆಯ ಘಟ್ಟ ಅತ್ಯುತ್ತಮ ಸಮಯ.

ಕಳೆದ ಒಂದು ದಶಕದಲ್ಲಿ ದಾಖಲಾಗಿರುವ ಉದ್ಯೋಗಿ ಭವಿಷ್ಯನಿಧಿ ಬಡ್ಡಿದರದ ಏರಿಳಿತ ಹೀಗಿದೆ:

ಭವಿಷ್ಯನಿಧಿ ಬಡ್ಡಿದರದ ಏರಿಳಿತ
2010-11 9.50%
2011-12 8.25%
2012-13 8.50%
2013-14 8.75%
2014-15 8.75%
2015-16 8.80%
2016-17 8.65%
2017-18 8.55%
2018-19 8.65%
2019-20 8.50%
2020-21 8.50%
2021-22 8.10%
2022-23 8.15%
2023-24* 8.25%

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿವಾದ: ಕುಂದಾಪುರದ ಲೇಖಕನ ಕೃತಿಗೆ ದೊರೆತ ಪ್ರಶಸ್ತಿಯ ಹಿಂದೆ ವಂಚನೆ, ಲಾಬಿ ಶಂಕೆ

ಕುಂದಾಪುರ ಮೂಲದ ಲೇಖಕ ಪ್ರದೀಪ್ ಕೆಂಚನೂರು ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೆ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...