ಜಿಬಿಎ ಚುನಾವಣೆ | 6 ವರ್ಷಗಳ ನಂತರ ಚುನಾಯಿತ ಪ್ರತಿನಿಧಿಗಳನ್ನು ಕಾಣಲಿದೆ ಬೆಂಗಳೂರು

Date:

ಸುಮಾರು 6 ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಬೆಂಗಳೂರು ಸ್ಥಳೀಯ ಸಂಸ್ಥೆಯಾದ ಹಿಂದಿನ ಬಿಬಿಎಂಪಿ/ ಈಗಿನ ಜಿಬಿಎ ಆಡಳಿತ ನಡೆಸುತ್ತಿದೆ. ಆಡಳಿತಾಧಿಕಾರಿಗಳು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಆಡಳಿತ ನಡೆಸುತ್ತಿದ್ದಾರೆ. ಬಿಬಿಎಂಪಿಯಿಂದ ಜಿಬಿಎಗೆ ಆಡಳಿತಾತ್ಮಕ ಬದಲಾವಣೆ ಘಟಿಸಿದ ನಂತರವೂ, ಚುನಾಯಿತ ಪ್ರತಿನಿಧಿಗಳಿಲ್ಲದೆ, ನಗರ ಆಡಳಿತದಲ್ಲಿ ಉಂಟಾಗಿರುವ ಹೊಣೆಗಾರಿಕೆಯ ಕೊರತೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಜೂನ್‌ ಅಂತ್ಯದ ಒಳಗೆ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಈ ಬೆನ್ನಲ್ಲೇ, ಬೆಂಗಳೂರಿನ ಬೃಹತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣ ಗರಿಗೆದರಿದೆ.

- Advertisement -

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾಯಿತ ಕೌನ್ಸಿಲ್‌ನ ಅಧಿಕಾರ 2020ರ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿತ್ತು. ಅದೇ ತಿಂಗಳಲ್ಲೇ ಚುನಾವಣೆಯೂ ನಡೆಯಬೇಕಿತ್ತು. ಆದರೆ, ಅದೇ ವರ್ಷ ಕರೋನಾ ಆಕ್ರಮಣ ಹೆಚ್ಚಿದ್ದರಿಂದ ಚುನಾವಣೆ ನಡೆಯಲಿಲ್ಲ. ಇದೊಂದೇ ಕಾರಣವೂ ಅಲ್ಲ. ಅದೇ ಸಮಯದಲ್ಲಿ, ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ವಿಸ್ತರಿಸಲು ಅಂದಿನ ಬಿಜೆಪಿ ಸರ್ಕಾರ ಮುಂದಾಗಿತ್ತು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲು ನಿರ್ಧರಿಸಿತು. ಇದಕ್ಕಾಗಿ ಹೊಸದಾಗಿ ಗಡಿ ಗುರುತಿಸುವಿಕೆ ಪ್ರಕ್ರಿಯೆಗಳು ನಡೆಯಲಾರಂಭಿಸಿದವು. ಈ ಪ್ರಕ್ರಿಯೆ ವಿರುದ್ಧ ಆಕ್ಷೇಪಣೆಗಳು ಮತ್ತು ನ್ಯಾಯಾಲಯದ ವಿಚಾರಣೆಗಳು ನಡೆದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆದಾಗ್ಯೂ, ವಾರ್ಡ್‌ಗಳ ಸಂಖ್ಯೆ 243ಕ್ಕೆ ವಿಸ್ತರಣೆಯಾದರೂ, ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ನಿಗದಿಪಡಿಸುವ ವಿಚಾರ ವಿವಾದಕ್ಕೆ ಸಿಲುಕಿತು. ಮೀಸಲಾತಿ ಪಟ್ಟಿಯ ತಯಾರಿಕೆ, ಅದಕ್ಕೆ ವ್ಯಕ್ತವಾದ ವಿರೋಧಗಳು ಮತ್ತು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಸುದೀರ್ಘ ವಿಚಾರಣೆಗಳು ಚುನಾವಣೆಯ ಘೋಷಣೆಗೆ ಮತ್ತಷ್ಟು ಅಡ್ಡಿಯುಂಟು ಮಾಡಿದವು.

ಎಲ್ಲವೂ ಸಿದ್ದವಾಗಿವೆ, ಚುನಾವಣೆ ನಡೆಯುತ್ತದೆ ಎನ್ನುವ ವೇಳೆ, ಕಾಂಗ್ರೆಸ್‌ ಸರ್ಕಾರವು ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024’ರ ಅಡಿಯಲ್ಲಿ ಬಿಬಿಎಂಪಿಯನ್ನು ಜಿಬಿಎ ಆಗಿ ಪರಿವರ್ತಿಸಿತು. ಬಿಬಿಎಂಪಿಯನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳನ್ನಾಗಿ ವಿಂಗಡಿಸಿ, ಹೊಸ ವಲಯವನ್ನು ಗುರುತಿಸಿ, ಅವೆಲ್ಲವನ್ನೂ ಒಳಗೊಂಡ ಕೇಂದ್ರೀಕೃತ ಜಿಬಿಎಯನ್ನು ರಚಿಸಿತು. ಇಡೀ ಆಡಳಿತ ವ್ಯವಸ್ಥೆಯನ್ನೇ ಬದಲಾಯಿಸುವ ಈ ಪ್ರಕ್ರಿಯೆಗೆ ರಾಜ್ಯಪಾಲರ ಅನುಮೋದನೆ ಮತ್ತು ಹೊಸ ನಿಯಮಗಳ ರಚನೆಗೆ ಸಾಕಷ್ಟು ಸಮಯ ಹಿಡಿಯಿತು.

ಜೊತೆಗೆ, ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರು ಚುನಾಯಿತ ಪ್ರತಿನಿಧಿಗಳಿಲ್ಲದೆ 6 ವರ್ಷಗಳನ್ನು ಕಳೆದಿದೆ. ಇದೀಗ, ಸುಪ್ರೀಂ ಕೋರ್ಟ್‌ ತಾಕೀತಿನಿಂದಾಗಿ, ಚುನಾವಣಾ ವಿಚಾರ ಮುನ್ನೆಲೆ ಬಂದಿದೆ.

ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ, ಚುನಾವಣೆಯ ಕುರಿತು ಮಾತನಾಡಿರುವ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, “ನ್ಯಾಯಾಲಯದ ಈ ಗಡುವನ್ನು ಗೌರವಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ದವಾಗಿದೆ. ಚುನಾವಣಾ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಮಾಡಲು ಮತ್ತು ಯಾವುದೇ ಕಾನೂನು ಅಡೆತಡೆಗಳು ಬರದಂತೆ ನೋಡಿಕೊಳ್ಳಲು ಮೇ ತಿಂಗಳಿನಲ್ಲಿಯೇ ಮತದಾನ ನಡೆಸಲು ಸರ್ಕಾರ ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ಆದಾಗ್ಯೂ, ಚುನಾವಣಾ ಆಯೋಗವು ದೇಶಾದ್ಯಂತ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಈಗ ಜಿಬಿಎ ಚುನಾವಣೆಗೆ ತೊಡಕಾಗಬಹುದು ಎಂಬ ಮಾತುಗಳಿವೆ. ಆದರೂ, 2023ರ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನೇ ಮೂಲವಾಗಿ ಬಳಸಿಕೊಂಡು ಜಿಬಿಎ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ವಾರ್ಡ್‌ವಾರು ಮತದಾರರರ ವಿಭಜನೆಯ ಕೆಲಸಗಳನ್ನು ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ, ರಾಜ್ಯ ಚುನಾವಣಾ ಆಯೋಗವು (SEC) ಮತದಾರರ ಪಟ್ಟಿಯ ಸಿದ್ಧತೆಯಲ್ಲಿ ತೊಡಗಿದ್ದು, ಮಾರ್ಚ್ 30ರಂದು ಜಿಬಿಎ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಈ ಲೇಖನ ಓದಿದ್ದೀರಾ?: ಪೌರಕಾರ್ಮಿಕ ಮಹಿಳೆಯರಿಗೆ ಸಿಗಬೇಕಿದೆ ಘನತೆಯ ಬದುಕು…

ಚುನಾವಣಾ ಆಯೋಗದ ಕಾರ್ಯದರ್ಶಿ ನಾರಪ್ಪ ರೇವಣಸಿದ್ದಪ್ಪ ನಾಗರಾಜು ಅವರ ಪ್ರಕಾರ, ಮತದಾರರ ಪಟ್ಟಿಯ ನಿಖರತೆಗಾಗಿ ‘ಫ್ರಮ್-ಟು-ಮ್ಯಾಟ್ರಿಕ್ಸ್ ಮ್ಯಾಪಿಂಗ್’ (ಹಳೆಯ ಮತದಾರರ ಪಟ್ಟಿಯಲ್ಲಿದ್ದ ದತ್ತಾಂಶಗಳನ್ನುಹೊಸ ವಾರ್ಡ್‌ಗಳ ವ್ಯಾಪ್ತಿಗೆ ಸರಿಯಾಗಿ ಹೊಂದಿಸುವುದು) ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಸದ್ಯದ ಕರಡು ಪಟ್ಟಿಯಂತೆ ಬೆಂಗಳೂರಿನಲ್ಲಿ ಸುಮಾರು 88.91 ಲಕ್ಷ ಮತದಾರರಿದ್ದು, ಇದರಲ್ಲಿ 45.69 ಲಕ್ಷ ಪುರುಷರು ಮತ್ತು 43.20 ಲಕ್ಷ ಮಹಿಳಾ ಮತದಾರರು ಸೇರಿದ್ದಾರೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮತ್ತು ವಿಶೇಷ ಆಯುಕ್ತ ರಾಮಚಂದ್ರನ್ ಅವರು ಚುನಾವಣಾ ಪೂರ್ವ ಸಿದ್ಧತೆಗಳ ಮೇಲೆ ನಿಗಾ ವಹಿಸಿದ್ದಾರೆ. ಪ್ರತಿಯೊಂದು ವಾರ್ಡ್‌ನ ಗಡಿ ಗುರುತಿಸುವಿಕೆಯಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ನೋಂದಣಿ ಅಧಿಕಾರಿಗಳು ತಮ್ಮ ದೈನಂದಿನ ಕೆಲಸದ ಅವಧಿಯಲ್ಲಿ ಕನಿಷ್ಠ 2 ರಿಂದ 3 ಗಂಟೆಗಳನ್ನು ಕೇವಲ ಚುನಾವಣಾ ಕೆಲಸಗಳಿಗಾಗಿಯೇ ಮೀಸಲಿಡಬೇಕು ಎಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದೆ.

ಮೇ ತಿಂಗಳಿನಲ್ಲಿ ಜಿಬಿಎ ಚುನಾವಣೆಗಳು ನಡೆಯುವ ಸಾಧ್ಯತೆಗಳಿದ್ದು, ಸುಮಾರು 6 ವರ್ಷಗಳ ನಂತರ ಬೆಂಗಳೂರು ಮತ್ತೆ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ ಸಾಗಿದ ರೈತ ಹೋರಾಟ!

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ...