ಮೋದಿಯ ಭ್ರಷ್ಟಾಚಾರ ಗ್ಯಾರಂಟಿ; ಬಿಜೆಪಿಯ ‘ವಾಷಿಂಗ್ ಮೆಷಿನ್’ ಹೇಗೆ ಕೆಲಸ ಮಾಡುತ್ತದೆ?

Date:

Advertisements

ಬಿಜೆಪಿಯ ‘ವಾಷಿಂಗ್ ಮೆಷಿನ್’ ಸುದ್ದಿ ಈಗ ಹೆಚ್ಚಾಗಿ ಕಾಣಿಸುತ್ತಿದೆ. ಈ ಹಿಂದೆ ಭ್ರಷ್ಟಾಚಾರ ಆರೋಪವನ್ನು ಹೊತ್ತಿದ್ದವರೆಲ್ಲ ಈಗ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಅಥವಾ ಬಿಜೆಪಿ ಮಡಿಲು ಸೇರಿದ್ದಾರೆ. ಅಂತಹ ನಾಯಕರುಗಳಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡಾ ಒಬ್ಬರು.

2017ರಲ್ಲಿ ಸಿಬಿಐ ವಿಮಾನ ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣವನ್ನು ದಾಖಲಿಸಿತ್ತು. ಈ ಹಗರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಭಾಗಿಯಾಗಿದ್ದರು ಎಂದು ಆರೋಪ ಮಾಡಲಾಗಿತ್ತು. ಆದರೆ ಈಗ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕ ಪ್ರಫುಲ್ ಪಟೇಲ್ ಅವರ ಈ ಹಗರಣದ ಪ್ರಕರಣವನ್ನು ಸಿಬಿಐ ವಾಪಾಸ್ ಪಡೆದುಕೊಂಡಿದೆ.

ಇದನ್ನು ಓದಿದ್ದೀರಾ? ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್‌ ಇದ್ದಂತೆ; ಭ್ರಷ್ಟರು ಇಲ್ಲಿ ಪವಿತ್ರರಾಗಬಹುದು: ಕಾಂಗ್ರೆಸ್‌ ಲೇವಡಿ

ಪ್ರಫುಲ್ ಪಟೇಲ್ ಅವರಿಗೆ ಭೂಗತ ಪಾತಕಿ, ಗ್ಯಾಂಗ್‌ಸ್ಟಾರ್, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎಂದೇ ಕರೆಯಲಾಗುವ, 1993 ರ ಮುಂಬೈ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಇಕ್ಬಾಲ್ ಮಿರ್ಚಿಯ ಪತ್ನಿ ಜೊತೆ ನಂಟಿದೆ ಎಂದು ಬಿಜೆಪಿ ಹೇಳಿತ್ತು. ಆದರೆ ಬಿಜೆಪಿಯ ಈಗ ಬಿಜೆಪಿಯ ‘ವಾಷಿಂಗ್ ಮೆಷಿನ್’ ಪ್ರಫುಲ್ ಪಟೇಲ್‌ ಮೇಲಿದ್ದ ಭ್ರಷ್ಟಾಚಾರದ ಆರೋಪ, ಮುಂಬೈ ಬಾಂಬ್ ದಾಳಿಯ ಆರೋಪಿಗಳೊಂದಿಗಿರುವ ನಂಟನ್ನು ಕೂಡಾ ತೊಳೆದುಹಾಕಿರುವಂತಿದೆ!

ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿ ಬಗ್ಗೆ ವಾಗ್ದಾಳಿ ನಡೆಸಿದ್ದರು. “ಎನ್‌ಸಿಪಿ ಮೇಲೆಯೂ ಸರಿಸುಮಾರು 74 ಕೋಟಿ ರೂಪಾಯಿಯ ಹಗರಣದ ಆರೋಪವಿದೆ. ಮಹಾರಾಷ್ಟ್ರ ಸ್ಟೇಟ್ ಕಾಪೋರೇಟಿವ್ ಬ್ಯಾಂಕ್ ಹಗರಣ, ಮಹಾರಾಷ್ಟ್ರ ಸಿಂಚಾಯಿ ಹಗರಣ, ಅಕ್ರಮ ಗಣಿಗಾರಿಕೆ ಹಗರಣ ಸೇರಿದಂತೆ ಇವರ ಹಗರಣಗಳ ಪಟ್ಟಿ ದೊಡ್ಡದಾಗಿದೆ. ಈ ಪಕ್ಷದ ಹಗರಣಗಳ ಮೀಟರ್‌ ಎಂದಿಗೂ ಕೆಳಗಿಳಿಯುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇದನ್ನು ಓದಿದ್ದೀರಾ?  ನೋಟಿನ ರಾಶಿಯಲ್ಲಿ ಮಲಗಿದ ಅಸ್ಸಾಂ ಬಿಜೆಪಿ ಮಿತ್ರ ಪಕ್ಷದ ಮುಖಂಡ; ಫೋಟೋ ವೈರಲ್

ಹಾಗೆಯೇ “ಪ್ರಫುಲ್ ಪಟೇಲ್ ಹಾಗೂ ಇಕ್ಬಾಲ್ ಮಿರ್ಚಿಯ ಸಹಿ ಇರುವ ದಾಖಲೆಗಳನ್ನು ಇಡಿ ಹೊಂದಿದೆ” ಎಂದು ಪಿಯೂಷ್ ಗೋಯಲ್ ಹೇಳಿದ್ದರು. ಬಿಜೆಪಿಯು ಗ್ಯಾಂಗ್‌ಸ್ಟಾರ್‌ ಇಕ್ಬಾಲ್ ಮಿರ್ಚಿ ಜೊತೆ ಪ್ರಫುಲ್ ಪಟೇಲ್ ನಂಟನ್ನು ಒತ್ತಿ ಹೇಳಿತ್ತು. ಆದರೆ ಬಿಜೆಪಿಯ ವಾಷಿಂಗ್ ಮೆಷಿನ್ ಭ್ರಷ್ಟಾಚಾರವನ್ನು ತೊಳೆಯುವ ಜೊತೆ ಅಂಡರ್‌ವರ್ಲ್ಡ್‌ ಜೊತೆ ಇರುವ ಲಿಂಕ್ ಅನ್ನು ಕೂಡಾ ತೊಳೆದು ಹಾಕಿದೆಯೇ ಎಂಬ ಪ್ರಶ್ನೆ ಬರುತ್ತದೆ.

ಇನ್ನು ಪ್ರಫುಲ್ ಪಟೇಲ್‌ರ ಸಂಸ್ಥೆ ಮತ್ತು ಇಕ್ಬಾಲ್ ಮಿರ್ಚಿಯ ಪುತ್ರನ ನಡುವೆ ಸೀಜಯ್ ಹೌಸ್ ಪ್ರಾಪರ್ಟಿಗಾಗಿ ನಡೆದ ಕೋಟ್ಯಾಂತರ ರೂಪಾಯಿ ವಹಿವಾಟುಗಳ ದಾಖಲೆ ಇಡಿಗೆ ಲಭಿಸಿದೆ ಎಂದು ಈ ಹಿಂದೆ ವರದಿಯಾಗಿದೆ. ಆದರೆ ಈಗ ಸಿಬಿಐ ವಿಮಾನ ಹಗರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಿರುದ್ಧದ ಪ್ರಕರಣವನ್ನು ವಾಪಾಸ್ ಪಡೆದಿದೆ. ಪ್ರಧಾನಿ ಮೋದಿ ಭಾಷಣ ಮಾಡುವಾಗ “ನಾನು ಭ್ರಷ್ಟಾಚಾರದ ವಿರುದ್ಧ ಗ್ಯಾರಂಟಿ” ಎಂದು ಹೇಳುತ್ತಾರೆ. ಈ ಎಲ್ಲ ವಿಚಾರವನ್ನು ತಿಳಿದಾಗ ಮೋದಿ ಭ್ರಷ್ಟಾಚಾರದ ವಿರುದ್ಧದ ಗ್ಯಾರಂಟಿ ಅನಿಸುತ್ತದೆಯೇ?

ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂದ ನಿರ್ಮಲಾ ಸೀತಾರಾಮನ್ ಪತಿ!

ಪ್ರಫುಲ್ ಪಟೇಲ್ ಮಾತ್ರವಲ್ಲ ಇನ್ನೂ ಇದೆ ಪಟ್ಟಿ….

ಇನ್ನು ಅಶೋಕ್ ಚೌಹಾಣ್ ಮೇಲೆ ಆದರ್ಶ್ ಹೌಸಿಂಗ್ ಹಗರಣದ ಆರೋಪವನ್ನು ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯೇ ಈ ಆರೋಪವನ್ನು ಮಾಡಿದ್ದರು. ಆದರೆ ಈಗ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅವರು ರಾಜ್ಯ ಸಭೆ ಸದಸ್ಯರು ಕೂಡಾ ಆಗಿದ್ದಾರೆ. ಇನ್ನು ಅಜಿತ್‌ ಪವಾರ್ ಅವರನ್ನು ಬಿಜೆಪಿ ಜೈಲಿಗೆ ಕಳಿಸಲು ಬಯಸಿತ್ತು. ಆದರೆ ಈಗ ಅವರ ಜೊತೆಯೇ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಹೀಗೆ ನಾರಾಯಣ ರಾಣೆ ಸೇರಿದ್ದಂತೆ ಹಲವರ ಹೆಸರುಗಳು ಈ ಪಟ್ಟಿಯಲ್ಲಿ ಬರುತ್ತದೆ.

ವಾಷಿಂಗ್ ಮೆಷಿನ್

ಇತ್ತೀಚೆಗೆ ಚಿತ್ರವೊಂದು ವೈರಲ್ ಆಗಿದೆ. ಆ ಚಿತ್ರದಲ್ಲಿ ಅಸ್ಸಾಂನ ಬಿಜೆಪಿಯ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡ ಬೆಂಜಮಿನ್ ಬಸುಮತರಿ ಅರೆ ನಗ್ನವಾಗಿ 500 ರೂಪಾಯಿ ನೋಟುಗಳ ರಾಶಿ ನಡುವೆ ಮಲಗಿರುವುದನ್ನು ಕಾಣಬಹುದು. ಬೆಂಜಮಿನ್ ಉದಲಗುರಿ ಜಿಲ್ಲೆಯ ಭೈರಿಗುರಿ ಗ್ರಾಮದ ಕೌನ್ಸಿಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಮಿತ್ರ ಪಕ್ಷದ ಮುಖಂಡ ಬೆಂಜಮಿನ್ ಬಸುಮತರಿ ಅವರ ಮೇಲೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಬಡವರಿಂದ ಹಣ ಪಡೆದುಕೊಂಡು ಭ್ರಷ್ಟಾಚಾರ ಮಾಡಿದ ಆರೋಪವಿದೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದಿಲ್ಲ. ಇಡಿ, ಸಿಬಿಐ, ಐಟಿ ದಾಳಿಗಳು ಕೂಡಾ ನಡೆಯಲ್ಲ.

ಬೆಂಜಮಿನ್ ಬಸುಮತರಿ ಅವರು ಸ್ಥಳೀಯ ನಾಯಕ ಎಂದುಕೊಂಡರೂ ಪ್ರಫುಲ್ ಪಟೇಲ್ ಕತೆಯೇನು? 2017ರ ಪ್ರಕರಣವನ್ನು ಅವರು ಬಿಜೆಪಿಯೊಂದಿಗೆ ಸೇರಿದ ಬಳಿಕ ವಾಪಾಸ್ ಪಡೆದಿದ್ದು ಯಾಕೆ? ಅಂಡರ್‌ವರ್ಲ್ಡ್‌ ಡಾನ್ ಜೊತೆ ಇದ್ದ ನಂಟಿನ ವಿಚಾರವೇನು? ಎಂಬ ಪ್ರಶ್ನೆ ನಮ್ಮ ಮುಂದೆ  ಬರುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

Download Eedina App Android / iOS

X