ಇಸ್ರೇಲ್ ವಾಯುದಾಳಿಗೆ 11 ಪ್ಯಾಲೆಸ್ತೀನ್ ಪತ್ರಕರ್ತರು ಮೃತ್ಯು

Date:

Advertisements

ಕಳೆದ ಅಕ್ಟೋಬರ್ 7ರಂದು ಹಮಸ್ ಇಸ್ರೇಲ್ ಮೇಲೆ ರಾಕೆಟ್‌ ಹಾರಿಸಿದ ಬಳಿಕ, ಇಸ್ರೇಲ್ ಸೇನೆಯು ಗಾಝಾದ ಮೇಲೆ ನಿರಂತರವಾಗಿ ಬಾಂಬ್ ಸುರಿದ ಪರಿಣಾಮ ಒಟ್ಟು ಹನ್ನೊಂದು ಮಂದಿ ಪ್ಯಾಲೆಸ್ತೀನ್ ಪತ್ರಕರ್ತರು ಮೃತಪಟ್ಟಿರುವುದಾಗಿ ಪ್ಯಾಲೆಸ್ತೀನ್ ಪತ್ರಕರ್ತರ ಒಕ್ಕೂಟ ತಿಳಿಸಿದೆ.

ಅಲ್ಲದೇ, ದಾಳಿಯಲ್ಲಿ ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

gaza journalist

ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮೊಹಮ್ಮದ್ ಫಯೆಜ್ ಅಬು ಮಾತಾರ್, ಅಲ್-ಖಮ್ಸಾ ನ್ಯೂಸ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕ ಸಯೀದ್ ಅಲ್-ತವೀಲ್, ಖಬರ್ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಛಾಯಾಗ್ರಾಹಕ ಮೊಹಮ್ಮದ್ ಸೋಬ್, ಖಬರ್ ನ್ಯೂಸ್ ಏಜೆನ್ಸಿಯ ಪತ್ರಕರ್ತ ಹಿಶಾಮ್ ಅಲ್ನವಾಜಾ, ಫೋಟೋ ಜರ್ನಲಿಸ್ಟ್ ಮೊಹಮ್ಮದ್ ಅಲ್-ಸಾಲ್ಹಿ, ಸ್ಮಾರ್ಟ್ ಮೀಡಿಯಾದ ಪತ್ರಕರ್ತ ಮೊಹಮ್ಮದ್ ಜರ್ಘೌನ್, ಸೌತ್ ಅಲ್-ಅಸ್ರಾ ರೇಡಿಯೊದಲ್ಲಿ ಕೆಲಸ ಮಾಡುವ ಪತ್ರಕರ್ತ ಅಹ್ಮದ್ ಶೆಹಾಬ್ (ಕೈದಿಗಳ ರೇಡಿಯೋ ಧ್ವನಿ), ಅಲ್ ಅಕ್ಸಾ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಹುಸಾಮ್ ಮುಬಾರಕ್ ಮೃತಪಟ್ಟವರು ಎಂದು ವರದಿಯಾಗಿದೆ.

ಈವರೆಗೆ ಒಟ್ಟು 15 ಪತ್ರಕರ್ತರು ಮೃತ್ಯು
11 ಪ್ಯಾಲೆಸ್ತೀನ್ ಪತ್ರಕರ್ತರ ಸಹಿತ ಈವರೆಗೆ ಒಟ್ಟು 15 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆಯು ನಿರ್ದಿಷ್ಟವಾಗಿ ವರದಿಗಾರರ ಗುಂಪನ್ನು ಗುರಿಯಾಗಿಸಿಕೊಂಡ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ರಾಯಿಟರ್ಸ್‌ನಲ್ಲಿ ಕೆಲಸ ಮಾಡುವ ವೀಡಿಯೋಗ್ರಾಫರ್ ಇಸ್ಸಾಮ್ ಅಬ್ದಲ್ಲಾಹ್ ಮೃತಪಟ್ಟಿದ್ದರು. ಈ ವೇಳೆ ಆರು ಪತ್ರಕರ್ತರು ಗಾಯಗೊಂಡಿದ್ದರು.

ಇಸ್ರೇಲ್‌ನ ವಾಯುದಾಳಿಯಿಂದ ಗಾಝಾ ಈವರೆಗೆ 2,800 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದು, ಇದರಲ್ಲಿ ಸುಮಾರು 800ರಷ್ಟು ಮಕ್ಕಳೇ ಇದ್ದಾರೆ ಎಂದು ವರದಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: 69 ಸಾವು, 140ಕ್ಕೂ ಹೆಚ್ಚು ಮಂದಿಗೆ ಗಾಯ

ಫಿಲಿಪೈನ್ಸ್‌ನ ಮಧ್ಯ ಭಾಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ 69...

Download Eedina App Android / iOS

X