ಲೋಕಸಭಾ ಚುನಾವಣೆ | ಸುದೀರ್ಘ ಚುನಾವಣೆ ವಿಪಕ್ಷಗಳಿಗೆ ಅನನುಕೂಲ: ಯೆಚೂರಿ

Date:

2024ರ ಲೋಕಸಭಾ ಚುನಾವಣೆಯು ಭಾರತದಲ್ಲಿ ಇದುವರೆಗೆ ನಡೆದ ಎರಡನೇ ಅತಿ ದೀರ್ಘಾವಧಿಯ ಚುನಾವಣೆಯಾಗಿದೆ. ಇದು ವಿರೋಧ ಪಕ್ಷಗಳಿಗೆ ಅನನುಕೂಲಕರವಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

- Advertisement -

ಚುನಾವಣಾ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ ಎಂದಿರುವ ಅವರು, ಅದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಸಾರ್ವತ್ರಿಕ ಚುನಾವಣೆಯ 82 ದಿನಗಳ ಅವಧಿಯಲ್ಲಿ (ಮಾರ್ಚ್‌ 16ರಿಂದ ಜೂನ್‌ 4) ನಡೆಯುತ್ತಿರುವುದು ಕಳವಳಕಾರಿ ವಿಷಯ” ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

“ಸುರ್ಧೀಘ ಕಾಲದ ಚುನಾವಣೆಯು ಕಳವಳಕಾರಿ ವಿಷಯವಾಗಿದೆ. ಸಂವಿಧಾನವು ಚುನಾವಣಾ ವಿಷಯಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಹಕ್ಕನ್ನು ನೀಡುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ, ಅದರ ಹಿಂದಿನ ಉದ್ದೇಶ ಮತ್ತು ಬುದ್ದವಂತಿಕೆಯನ್ನು ನಾವು ಪ್ರಶ್ನಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

“ತಂತ್ರಜ್ಞಾನ ಮುಂದುವರೆದಂತೆ, ಚುನಾವಣೆ ನಡೆಸಲು ತೆಗೆದುಕೊಳ್ಳುವ ಸಮಯವು ಕಡಿಮೆಯಾಗಬೇಕು. ಆದರೆ, ಇಲ್ಲಿ ಹೆಚ್ಚಾಗುತ್ತಿದೆ” ಎಂದು ಅವರು ಹೇಳಿದ್ದಾರೆ

“ನನ್ನ ಪ್ರಕಾರ ನೀವು ಈಗ ಇಷ್ಟು ಸುದೀರ್ಘ ಚುನಾವಣೆಯನ್ನು ನೋಡುತ್ತೀರಿ. ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದ 1952ರ ಚುನಾವಣೆಯನ್ನು ಹೊರತುಪಡಿಸಿ, ಈ ಬಾರಿಯೇ ಚುನಾವಣೆಯೇ ಅತೀ ಸುದೀರ್ಘ ಚುನಾವಣೆಯಾಗಿದೆ. ಅವರು ಮಾತನಾಡುತ್ತಿರುವ ಎಲ್ಲ ತಂತ್ರಜ್ಞಾನದೊಂದಿಗೆ ವಾಸ್ತವವಾಗಿ ಚುನಾವಣಾ ಸಮಯವನ್ನು ಕಡಿತ ಮಾಡಬೇಕು. ಬದಲಿಗೆ, ಹೆಚ್ಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ಬಾರಿಯ ಚುನಾವಣೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಹಣ ಅಥವಾ ತಲುಪುವಿಕೆಯಲ್ಲಿ ಸಮಬಲವಿಲ್ಲ. ದೀರ್ಘಾವಧಿಯ ಚುನಾವಣೆಯು ದೈಹಿಕ ಪ್ರಚಾರಕ್ಕೆ ಬಂದಾಗ ಪ್ರತಿಪಕ್ಷಗಳನ್ನು ಅನನುಕೂಲಕ್ಕೆ ಒಳಪಡಿಸುತ್ತದೆ” ಎಂದು ತಿಳಿಸಿದ್ದಾರೆ.

“ಈ ಚುನಾವಣೆಯು ಆಡಳಿತ ಪಕ್ಷಕ್ಕೆ ಪ್ರಯೋಜನವನ್ನು ನೀಡುತ್ತದೆ. ಅವರು ಎಲ್ಲಡೆ ಸಂಚರಿಸಬಹುದು. ಒಂದರಿಂದ ಮತ್ತೊಂದು ಹಂತಕ್ಕೆ ತೆರಳಿ ಪ್ರಚಾರ ಮುಂದುವರಿಸಬಹುದು. ಇಲ್ಲಿ ಏನಾಗುತ್ತದೆ ಎಂದರೆ, ಒಂದು ಹಂತದಲ್ಲಿ ಮತದಾನ ಮತ್ತು ಇನ್ನೊಂದು ಹಂತದಲ್ಲಿ ಪ್ರಚಾರ ನಡೆಯುತ್ತಿದೆ. ಪ್ರಧಾನಿ ಮತ್ತು ಆಡಳಿತ ಪಕ್ಷದ ನಾಯಕರು, ಇತರ ಕೆಲವು ಸ್ಥಳಗಳಲ್ಲಿ ಏನು ಹೇಳುತ್ತಿದ್ದಾರೆ ಎಂಬುದು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಮತದಾನ ನಡೆಯುತ್ತಿರುವ ಸ್ಥಳಗಳಿಗೆ ಪ್ರಸಾರವಾಗುತ್ತದೆ” ಎಂದರು.

“ಅದು ಉಲ್ಲಂಘನೆ ಅಲ್ಲವೇ? 48 ಗಂಟೆಗಳ ಕಾಲ, ನೀವು ಎಲ್ಲ ಪ್ರಚಾರವನ್ನು ನಿಲ್ಲಿಸುವುದಾಗಿ ಹೇಳುತ್ತೀರಿ. ಆದರೆ, ನಂತರ ಅದನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತದೆ. ಆದ್ದರಿಂದ, ಈ ರೀತಿಯ ವೇಳಾಪಟ್ಟಿಗಳು ಉಲ್ಲಂಘನೆಗಳಿಗೆ ಎಡೆಮಾಡಿಕೊಡುತ್ತವೆ” ಎಂದು ಯೆಚೂರಿ ಹೇಳಿದ್ದಾರೆ.

“ಎರಡನೆಯದಾಗಿ, ಬಿಜೆಪಿ ದುರ್ಬಲವಾಗಿರುವ ಮತ್ತು ಸಾಕಷ್ಟು ಕಾರ್ಯಕರ್ತರನ್ನು ಹೊಂದಿರದ ರಾಜ್ಯಗಳಲ್ಲಿ, ಏಳು ಹಂತದ ಚುನಾವಣೆಗಳು ಆ ಪಕ್ಷದ ಕಾರ್ಯಕರ್ತರು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಹೋಗಲು, ಪ್ರಚಾರ ಮಾಡಲು ಅವಕಾಶವನ್ನು ನೀಡುತ್ತವೆ. ಇದೆಲ್ಲವೂ ಆಡಳಿತ ಪಕ್ಷಕ್ಕೆ ಲಾಭವನ್ನು ನೀಡುತ್ತದೆ” ಎಂದು ಅವರು ವಿವರಿಸಿದ್ದಾರೆ.

“ಇಂತಹ ಧೋರಣೆಗಳು ದುರದೃಷ್ಟಕರ. ಚುನಾವಣಾ ಕಣವು ಸಮತಟ್ಟಾದ ಮೈದಾನದಂತಿರಬೇಕು. ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು. ಇದು ಹಣ ಬಲದ ವಿಷಯ ಮಾತ್ರವಲ್ಲ. ಜಾಹೀರಾತುಗಳು ಮತ್ತು ಜನರಿಗೆ ತಲುಪುವ ವಿಷಯದಲ್ಲಿ ಹಾಗೂ ಭೌತಿಕ ಪ್ರಚಾರದ ವಿಷಯದಲ್ಲಿ ಬಹುಮುಖ್ಯ” ಎಂದಿದ್ದಾರೆ.

1921-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯು ನಾಲ್ಕು ತಿಂಗಳ ಕಾಲ ನಡೆದಿತ್ತು. ಆದಾದ, ಬಳಿಕ ಈ ಚುನಾವಣೆಯು ಅತೀ ಸುಧೀರ್ಘಾವಧಿಯ ಚುನಾವಣೆಯಾಗಿದೆ. ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆತ್ಮಹತ್ಯೆ ಪ್ರಕರಣ: ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗಿದೆ. 2010ರ...

ರಷ್ಯಾದ ಇಂಧನದಿಂದ ಭಾರತ ದೂರ ಸರಿಯುವುದು ಅಸಾಧ್ಯ: ಅಮೆರಿಕ

ರಷ್ಯಾದ ತೈಲ ಖರೀದಿಸುವ ರಾಷ್ಟ್ರಗಳ ಮೇಲಿನ ದಿಗ್ಬಂಧನ ಮತ್ತು ಆಮದು ಸುಂಕದ...

ಫುಟ್‌ಪಾತ್ ನಿರ್ಮಿಸದಿದ್ರೆ, ನಾವೇ ಧರಣಿ‌ ಕೂರ್ತೀವಿ; BJP ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್!

ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಮೀಪದ ಮಥುರಾ ರಸ್ತೆಯಲ್ಲಿ ಪಾದಚಾರಿಗಳು...