ಮಣಿಪುರಕ್ಕೆ ಭೇಟಿ ನೀಡಿದ ‘ಇಂಡಿಯಾ’ ಒಕ್ಕೂಟದ 21 ಸಂಸದರ ನಿಯೋಗ

Date:

ಪ್ರತಿಪಕ್ಷ ನೇತೃತ್ವದ ‘ಇಂಡಿಯಾ’ ಒಕ್ಕೂಟದ 21 ಸಂಸದರ ನಿಯೋಗವು ಎರಡು ದಿನಗಳ ಭೇಟಿಗಾಗಿ ಶನಿವಾರ (ಜುಲೈ 29) ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ತೆರಳಿದೆ.

- Advertisement -

ಇಂಡಿಯಾ ಒಕ್ಕೂಟ ರಚನೆಯಾದ ನಂತರ ಪ್ರತಿಪಕ್ಷ ಸದಸ್ಯರ ಮೊದಲ ಭೇಟಿ ಇದಾಗಿದೆ. ಎರಡು ದಿನಗಳ ಭೇಟಿಯಲ್ಲಿ ವಿಪಕ್ಷ ನಾಯಕರು ಇಂಫಾಲ್‌ಗೆ ಬಂದಿಳಿದು ನಂತರ ಚುರಾಚಂದಪುರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿ ಅಲ್ಲಿ ಕುಕಿ, ಮೀತೀ ಸಮುದಾಯದ ಬುಡಕಟ್ಟು ಮುಖಂಡರು, ನಾಗರಿಕ ಸಮಾಜ ಮತ್ತು ಮಹಿಳಾ ಗುಂಪುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ನಿಯೋಗವು ಭಾನುವಾರ ಮಣಿಪುರದ ರಾಜ್ಯಪಾಲ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಲಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರು “ಮಣಿಪುರಕ್ಕೆ ಹೋಗಿ ಸತ್ಯವನ್ನು ಕಂಡುಕೊಳ್ಳುತ್ತೇವೆ ಮತ್ತು ಆ ಸತ್ಯವನ್ನು ಸಂಸತ್ತಿನ ಮುಂದೆ ಮಂಡಿಸುತ್ತೇವೆ. ಮಣಿಪುರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿಫಲವಾಗಿದೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಅವಲೋಕಿಸುತ್ತೇವೆ” ಎಂದು ಹೇಳಿದರು.

ಆರ್‌ಜೆಡಿಯ ಮನೋಜ್ ಝಾ, “ಮಣಿಪುರದ ಜನರ ಮಾತುಗಳನ್ನು ಕೇಳಲು ಮತ್ತು ಅವರ ನೋವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಾಗಿ” ಹೇಳಿದರು.

ನಿಯೋಗದಲ್ಲಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ಫುಲೋ ದೇವಿ ನೇತಮ್, ಕೆ ಸುರೇಶ್, ಟಿಎಂಸಿಯ ಸುಶ್ಮಿತಾ ದೇವ್, ಡಿಎಂಕೆಯ ಕನಿಮೋಳಿ, ಡಿ. ರವಿಕುಮಾರ್, ಆರ್‌ಜೆಡಿಯ ಮನೋಜ್ ಕುಮಾರ್ ಝಾ, ಜೆಡಿಯುನಿಂದ ರಾಜೀವ್ ರಂಜನ್ ಸಿಂಗ್, ಅನಿಲ್ ಪ್ರಸಾದ್ ಹೆಗ್ಡೆ, ಮೊಹಮ್ಮದ್ ಫೈಜಲ್ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಜಯಂತ್ ಚೌಧರಿ (ರಾಷ್ಟ್ರೀಯ ಲೋಕದಳ), ಎನ್.ಕೆ. ಪ್ರೇಮಚಂದ್ರನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ) ಮತ್ತು ಟಿ. ತಿರುಮಾವಲವನ್ (ವಿಸಿಕೆ), ಸಿಪಿಐನ ಸಂತೋಷ್ ಕುಮಾರ್, ಸಿಪಿಐಎಂನ ಎ ಎ ರಹೀಮ್, ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಐಯುಎಂಎಲ್‌ನ ಇ ಟಿ ಮೊಹಮ್ಮದ್ ಬಶೀರ್, ಎಎಪಿಯ ಸುಶೀಲ್ ಗುಪ್ತಾ, ಅರವಿಂದ್ ಸಾವಂತ್(ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)  ನಾಯಕರು ಇದ್ದಾರೆ.

ಈ ಸುದ್ದಿ ಓದಿದ್ದೀರಾ? ಭಾರತದ ಅಕ್ಕಿ ರಫ್ತು ನಿಷೇಧ ಮತ್ತು ಜಾಗತಿಕ ಪರಿಣಾಮಗಳು

ಈ ತಿಂಗಳು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರ ಹಿಂಸಾಚಾರದ ವಿಷಯ ಸದನದಲ್ಲಿ ಗದ್ದಲಗಳಿಗೆ ಕಾರಣವಾಗಿದೆ. ವಿರೋಧ ಪಕ್ಷದ ಸಂಸದರು ಮಣಿಪುರದ ಬಗ್ಗೆ ಸುದೀರ್ಘ ಚರ್ಚೆಗೆ ಹಾಗೂ ಸದನದಲ್ಲಿ ಪ್ರಧಾನಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನೋಟಿಸ್ ಕೂಡ ನೀಡಲಾಗಿದೆ.

ಲೋಕಸಭೆಯ ಸ್ಪೀಕರ್ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಅಂಗೀಕರಿಸಿದ್ದಾರೆ. ಆದರೆ ಅವಿಶ್ವಾಸ ಮತದ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ಮೈತೇಯಿ ಯುವಕರ ಹತ್ಯೆ ಖಂಡಿಸಿ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಐದು ಜಿಲ್ಲೆಗಳಲ್ಲಿ ಜನಜೀವನ ಸ್ತಬ್ಧ

ಕಾಂಗ್‌ಪೋಕ್ಪಿ ಜಿಲ್ಲೆಯ ಸುನುರೋಕ್ ಬೆಟ್ಟದ ಪ್ರದೇಶದಲ್ಲಿ ಅಕ್ಟೋಬರ್ 19 ರಂದು ಸೌದೆ...

​ಜೆಫ್ರಿ ಎಪ್‌ಸ್ಟೀನ್-ಹರ್ದೀಪ್ ಪುರಿ ಭೇಟಿ: ಸಚಿವರ ಮೇಲಿನ ಆರೋಪಕ್ಕೆ ಪ್ರಧಾನಿ ಮೌನವೇಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್‌ಸ್ಟೀನ್...

ಕಲಬುರಗಿ | ಕ್ಷೇತ್ರಗಳ ಮರುವಿಂಗಡಣೆ ಇಲ್ಲದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ...

​7 ದಿನಗಳ ಜೈಲುವಾಸ ಅಂತ್ಯ: ಕೊನೆಗೂ ಬಿಡುಗಡೆಯಾದ ಕಾಕ್ರೋಚ್ ಜನತಾ ಪಾರ್ಟಿ ನಾಯಕರು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕಾಕ್ರೋಚ್...