ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಾಮಾಣಿಕರಾಗಿರಬಹುದು. ಆದರೆ ಅವರ ಸಂಪುಟದ ಸಚಿವರು ಮತ್ತು ಅಧಿಕಾರಿಗಳು ರಾಜ್ಯದ ಜನರಿಂದ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರ ಮೇಲೆ ಸರಣಿ ವಾಗ್ದಾಳಿ ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಈ ಬಗ್ಗೆ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ. “ಯಾವುದೇ ವ್ಯಕ್ತಿಯನ್ನು ಗುರಿಯಾಗಿಸುವ ಅಥವಾ ಕೇವಲ ಆರೋಪಗಳನ್ನು ಮಾಡುವ ರಾಜಕೀಯದಲ್ಲಿ ನಾನು ಯಾವುದೇ ನಂಬಿಕೆಯನ್ನು ಹೊಂದಿಲ್ಲ. ನಾನು ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸುತ್ತಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಿತೀಶ್ ಕುಮಾರ್ ಬಿಹಾರ ನಾಚಿಕೆ ಪಡುವಂತೆ ಮಾಡಿದ್ದಾರೆ: ಪ್ರಶಾಂತ್ ಕಿಶೋರ್
“ಹಿಂದೆಂದೂ ಇಷ್ಟೊಂದು ಭ್ರಷ್ಟಾಚಾರವನ್ನು ನೋಡಿಲ್ಲ ಎಂದು ಬಿಹಾರದ ಜನರು ಹೇಳುತ್ತಿದ್ದಾರೆ. ಸ್ಪಷ್ಟವಾಗಿ ಹೇಳುವುದಾದರೆ ಇವೆಲ್ಲವೂ(ಭ್ರಷ್ಟಾಚಾರ) ಮೇಲಿನಿಂದ ನಡೆಯುತ್ತಿದೆ. ನಿತೀಶ್ ಕುಮಾರ್ ಪ್ರಾಮಾಣಿಕರಾಗಿರಬಹುದು. ಆದರೆ ಸಚಿವರು ಮತ್ತು ಅಧಿಕಾರಿಗಳು ಜನರಿಂದ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇನ್ನು ಇತ್ತೀಚೆಗೆ ಪ್ರಶಾಂತ್ ಕಿಶೋರ್, “ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಡಿ-ಲಿಟ್ ಪದವಿ ಮತ್ತು ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಚಿವ ಅಶೋಕ್ ಚೌಧರಿ ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. 200 ಕೋಟಿ ರೂ. ಮೌಲ್ಯದ ಭೂಮಿಯನ್ನು ಸಂಶಯಾಸ್ಪದ ಮತ್ತು ಕಾನೂನುಬಾಹಿರ ವಿಧಾನಗಳ ಮೂಲಕ ಖರೀದಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
