ಪೇಮೆಂಟ್ ಸೀಟ್‌ನಲ್ಲಿ ರಾಜ್ಯಧ್ಯಕ್ಷ ಆಗಿದ್ದು ಯಾಕೆ?; ವಿಜಯೇಂದ್ರಗೆ ಕುಟುಕಿದ ಬಿ.ಕೆ ಹರಿಪ್ರಸಾದ್

Date:

ಬಿಜೆಪಿಯೊಳಗೆ ಕಾರ್ಯಕರ್ತ ಸ್ಥಾನವೇ ಅತೀ ಮುಖ್ಯ ಎನ್ನುವುದೇ ಆದರೆ, ನೀವು ಪೇಮೆಂಟ್‌ ಸೀಟ್‌ ಪಡೆದು ರಾಜ್ಯಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡಿದ್ದು ಯಾಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್ ಕುಟುಕಿದ್ದಾರೆ.

- Advertisement -

ಇತ್ತೀಚೆಗೆ, ‘ಬಿಜೆಪಿಯಲ್ಲಿ ಕಾರ್ಯಕರ್ತ ಸ್ಥಾನೇ ಮುಖ್ಯ’ ಎಂದಿದ್ದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯ ವಿಚಾರವಾಗಿ ಹರಿಪ್ರಸಾದ್ ಚೇಡಿಸಿದ್ದಾರೆ. “ವಿಜಯೇಂದ್ರ ಅವರೇ, ಗಲಿಬಿಲಿಯಾಗಬೇಡಿ. ಇದು ನಾನು ಮಾಡುತ್ತಿರುವ ಆರೋಪವಲ್ಲ, ನಿಮ್ಮದೇ ಪಕ್ಷದ ನಾಯಕರು ಕೊಡುತ್ತಿರುವ ಬಿರುದು-ಬಾವಲಿಗಳು” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

“ನಾನು ಹಿಂಬಾಗಿಲಿನಿಂದ ವಿಧಾನಸಭೆಗೆ ಪ್ರವೇಶ ಮಾಡಿದ್ದು ನಿಜವೇ ಆಗಿದ್ದರೆ ನಿಮ್ಮ ತಂದೆ ಬಿ.ಎಸ್ ಯಡಿಯೂರಪ್ಪನವರು ಶಿಕಾರಿಪುರದಲ್ಲಿ ಸೋತು ಸುಣ್ಣವಾಗಿ 2000ರಿಂದ 2004ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದದ್ದು ಹಿಂಬಾಗಿಲಿನಿಂದಲೊ ಅಥವಾ ‘ಶೋಭಾ’ಯಾತ್ರೆ ಮೂಲಕವೂ ರಾಜ್ಯದ ಜನರಿಗೆ ತಿಳಿಸಿ” ಎಂದು ಒತ್ತಾಯಿಸಿದ್ದಾರೆ.

“ಬಿಜೆಪಿ ಪಕ್ಷದ ಶಿಸ್ತು-ಸಂಸ್ಕಾರದ ಬಗ್ಗೆ ಮಾತಾಡಲು ಪದಗಳು ಸಾಲದು. ನಿಘಂಟು, ಗ್ರಂಥಾಲಯಗಳನ್ನೇ ಸಂಶೋಧಿಸಬೇಕು. ನಿಮ್ಮ ಪಕ್ಷದ ಶಿಸ್ತು-ನಿಮ್ಮ ಕುಟುಂಬದ ತ್ಯಾಗ ಬಲಿದಾನ, ಹೊಂದಾಣಿಕೆ ರಾಜಕೀಯದ ಬಗ್ಗೆ ಇತ್ತೀಚಿಗೆ ದಾವಣಗೆರೆಯಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಜನ್ಮದಿನದ ಕಾರ್ಯಕ್ರಮದಲ್ಲಿ ನಿಮ್ಮ ಪಕ್ಷದ ಅತಿರಥ ಮಹಾರಥರು ಹಾಡಿ ಹೊಗಳಿದ್ದಾರೆ ಸಾಧ್ಯವಾದ್ರೆ ಕೇಳಿ” ಎಂದಿದ್ದಾರೆ.

“ಮಹಾಭಾರತದ ಕತೆಗಳನ್ನು ಹೇಳಿ ಕೈಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳಬೇಡಿ. ಧರ್ಮರಾಯನಂತೆ ಆಸ್ತಿ-ಅಧಿಕಾರಕ್ಕಾಗಿ ದ್ರೌಪದಿಯನ್ನೇ ಜೂಜಿನಲ್ಲಿಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಂತೂ ಇಲ್ಲ, ನಿಮಿಗೂ ಅಂತಹ ದಾರಿದ್ರ್ಯ ಬರದೇ ಇರಲಿ. ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆಯನ್ನಾಗಿಯೂ, ದೇಶದ ಮೊದಲ ಪ್ರಜೆಯಾಗಿಯೂ ನೀಡಿದ ಪರಂಪರೆ ಇದೆ. ಇತಿಹಾಸವೇ ಗೊತ್ತಿಲ್ಲದೇ ಎಳಸು ರಾಜಕಾರಣಿ ಎಂದು ಸಾಬೀತು ಪಡಿಸಿಕೊಳ್ಳಬೇಡಿ” ಎಂದು ಹೇಳಿದ್ದಾರೆ.

“ಅಷ್ಟಕ್ಕೂ ಮಹಿಳೆಯರ ಬಗ್ಗೆ ಬೊಗಳೆ ಮಾತಾಡುತ್ತಾ ಅನಗತ್ಯ ಮಾನ ಹರಾಜು ಮಾಡಿಕೊಳ್ಳಬೇಡಿ.ನಿಮ್ಮ ಪಕ್ಷದ ನಾಯಕರು ಜನಪ್ರತಿನಿಧಿಗಳು ಮಹಿಳಾ ರಾಜಕಾರಣಿಗಳನ್ನು, ಉನ್ನತ ಅಧಿಕಾರಿಗಳಿಗೆ ನೀಡಿದ ಗೌರವ ರಾಜ್ಯದ ಜನರು ನೋಡಿದ್ದಾರೆ. ನಾನು ಕ್ಷಮೆ‌ ಕೇಳುವುದು ನಂತರದ್ದೂ, ಮೊದಲು ಪೋಕ್ಸೋ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ತಂದೆಯವರ ಕ್ಷಮೆ ಕೇಳಿಸಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ ಪರಿಷತ್ ಚುನಾವಣೆ: NDAಯಲ್ಲಿ ಬಂಡಾಯದ ಬಿಸಿ; ಸಿಎಂ ಚೌಧರಿ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

ಬಿಹಾರ ವಿಧಾನ ಪರಿಷತ್ತಿನ ನಾಲ್ಕು ಪದವೀಧರ ಮತ್ತು ನಾಲ್ಕು ಶಿಕ್ಷಕರ ಕ್ಷೇತ್ರಗಳು...

ಕಲಬುರಗಿ | ಕ್ಷೇತ್ರಗಳ ಮರುವಿಂಗಡಣೆ ಇಲ್ಲದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು. ಈ ವಿಚಾರದಲ್ಲಿ...

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...