ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮಂಗಳವಾರ(ಆಗಸ್ಟ್ 26) ಜಾರಿ ನಿರ್ದೆಶನಾಲಯ(ಇಡಿ) ಎಎಪಿ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವಿಚಾರದಲ್ಲಿ ಇಡಿ ವಿರುದ್ಧ ಸೌರಭ್ ವಾಗ್ದಾಳಿ ನಡೆಸಿದ್ದಾರೆ. “ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಸಂಚು ರೂಪಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಇಡಿ ಅಥವಾ ಎಲ್‌ಜಿ ಕಚೇರಿಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೆಹಲಿಯಲ್ಲಿ ಎಎಪಿ ಆಳ್ವಿಕೆಯಲ್ಲಿ ಆರೋಗ್ಯ ಮೂಲಸೌಕರ್ಯ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೇಂದ್ರ ತನಿಖಾ ಸಂಸ್ಥೆ ಮಂಗಳವಾರ ದೆಹಲಿಯ ಮಾಜಿ ಸಚಿವ ಭಾರದ್ವಾಜ್ ಮತ್ತು ಕೆಲವು ಖಾಸಗಿ ಗುತ್ತಿಗೆದಾರರ ಆವರಣದಲ್ಲಿ ಶೋಧ ನಡೆಸಿತ್ತು. ಎನ್‌ಸಿಆರ್‌ನ ಕನಿಷ್ಠ 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಇದನ್ನು ಓದಿದ್ದೀರಾ? ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಭಾರದ್ವಾಜ್, “ಮೊದಲು ಅವರು ನನ್ನ ಮನೆಯನ್ನು ಶೋಧಿಸಿ ನಂತರ ನನ್ನ ಹೇಳಿಕೆಯನ್ನು ದಾಖಲಿಸಲು ನನ್ನನ್ನು ಕೂರಿಸಿದರು. ನನಗೆ 43 ಪ್ರಶ್ನೆಗಳನ್ನು ಕೇಳಿದ್ದರು. ನಾನು ಅವೆಲ್ಲಕ್ಕೂ ಉತ್ತರಿಸಿದೆ. ನನ್ನ ಹೇಳಿಕೆಯನ್ನು ದಾಖಲಿಸಿದ ನಂತರ, ಅವರು ಅದನ್ನು ಎಲ್ಲೋ ಕಳುಹಿಸಿದರು. ಎಲ್ಲಿಗೆ ಎಂದು ತಿಳಿದಿಲ್ಲ. ಆದರೆ ನಂತರ ಅವರು ನನ್ನ ಬಳಿಗೆ ಬಂದು ನನ್ನ ಹೇಳಿಕೆಯ ಒಂದು ಭಾಗವನ್ನು ತೆಗೆದುಹಾಕುವಂತೆ ಕೇಳಿದರು” ಎಂದು ಆರೋಪಿಸಿದರು.
ಭಾರದ್ವಾಜ್ ತಮ್ಮ ಹೇಳಿಕೆಯನ್ನು ಬದಲಾಯಿಸಲು ನಿರಾಕರಿಸಿದ ನಂತರ ಅವರನ್ನು ಬಂಧಿಸಲಾಗುತ್ತದೆ ಎಂದು ಕುಟುಂಬಸ್ಥರನ್ನು ಬಂಧಿಸಲಾಗಿದೆ. “ಇಡಿ ಕಾರ್ಯನಿರ್ವಹಿಸುವ ರೀತಿ ಇದು. ಅವರು ನಿಮ್ಮನ್ನು ಮಾನಸಿಕವಾಗಿ ಗೊಂದಲಕ್ಕೆ ಸಿಲುಕಿಸುತ್ತಾರೆ. ಬಲವಂತ ಮಾಡುತ್ತಾರೆ ಮತ್ತು ಬೆದರಿಕೆ ಹಾಕುತ್ತಾರೆ. ನನ್ನ ಹೇಳಿಕೆಯಲ್ಲಿ ನಾನು ಏನು ಹೇಳುತ್ತೇನೆಂದು ಇಡಿ ಹೇಗೆ ನಿರ್ದೇಶಿಸಬಹುದು” ಎಂದು ಪ್ರಶ್ನಿಸಿದರು.
“ನಾನು 2003ರ ಮಾರ್ಚ್ 9ರಂದು ಸಚಿವನಾದೆ. ಮಾರ್ಚ್ 22ರಂದು ಆಸ್ಪತ್ರೆ ಯೋಜನೆಗಳ ವಿಳಂಬದ ಕುರಿತು ಸಭೆ ನಡೆಸಿದರು. ನಂತರ, ಅವರು ಸರಣಿ ಸಭೆಗಳನ್ನು ನಡೆಸಿದರು. ಬಹು ನಿರ್ದೇಶನಗಳನ್ನು ನೀಡಿದರು. ಲೆಫ್ಟಿನೆಂಟ್ ಗವರ್ನರ್ ಅಧಿಕಾರಿಗಳು ನಿರ್ದೇಶನಗಳನ್ನು ಜಾರಿಗೆ ತರದಂತೆ ನೋಡಿಕೊಂಡರು. ನನ್ನನ್ನು ಸಿಲುಕಿಸಲು ಅಧಿಕಾರಿಗಳೊಂದಿಗೆ ಸೇರಿ ಪಿತೂರಿ ನಡೆಸಿದರು” ಎಂದು ಹೇಳಿದರು.
“ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ನಾನು ಜೈಲಿನಲ್ಲಿರುವಾಗ, ನನ್ನ ವಕೀಲರು ಸತ್ಯವನ್ನು ಬಹಿರಂಗಪಡಿಸುತ್ತಾರೆ” ಎಂದರು.
