ಮೋದಿಯ ನೆತ್ತಿಗೆ ಸುಪ್ರೀಂ ಕೋರ್ಟ್‌ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಸಿಕ್ತು ಪರಿಹಾರ: ದೇವನೂರು

Date:

“ಪ್ರಧಾನಿ ನರೇಂದ್ರ ಮೋದಿಯವರ ನೆತ್ತಿಗೆಗೆ ಸುಪ್ರೀಂಕೋರ್ಟ್ ಸುತ್ತಿಗೆಯಿಂದ ಬಾರಿಸಿದ್ದಕ್ಕೆ ಕೇಂದ್ರವು ಕರ್ನಾಟಕಕ್ಕೆ 3,454 ರೂಪಾಯಿ ಬರ ಪರಿಹಾರ ಕೊಟ್ಟಿದೆ. ಆದರೆ ಕರ್ನಾಟಕ ಕೇಳಿದ್ದು 18,174 ಕೋಟಿ ರೂಪಾಯಿ” ಎಂದು ಹಿರಿಯ ಸಾಹಿತಿ, ಕನ್ನಡದ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವ ಅವರು ಪ್ರತಿಕ್ರಿಯಿಸಿದ್ದಾರೆ.

- Advertisement -

ಪರಿಹಾರ ಘೋಷಣೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, “ಇಷ್ಟು ಅಲ್ಪ ಸ್ವಲ್ಪ ಹಣ ಕೊಡುವುದಕ್ಕೂ ಮೊದಲು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್‌ ಮತ್ತು ಕರ್ನಾಟಕ ರಾಜ್ಯ ಬಿಜೆಪಿಯವರು ನವರಂಗಿ ಬಣ್ಣಬಣ್ಣದ ಆಟ ಆಡಿದರು; ಕರ್ನಾಟಕದ ಜುಟ್ಟಿಗೆ ಸುಳ್ಳಿನ ಹೂ ಮುಡಿಸಿದರು. ಸುಪ್ರೀಂ ಕೋರ್ಟ್ ಹೇಳಿದ ಮೇಲೆ ಆ ಆದೇಶ ಪಾಲಿಸಲೇಬೇಕಾಯ್ತು. ಅಲ್ಲಿ ಅವರ ಆಟ ನಡೆಯಲಿಲ್ಲ. ಅವರು ಈಗಲೂ ಸುಳ್ಳಿನ ಸುರುಸುರು ಬತ್ತಿ ಹಚ್ಚಬಹುದು. ಆದರೆ ಕರ್ನಾಟಕ ಜನತೆಗೆ ಸತ್ಯ ತಿಳಿದಿದೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

“ಈಗಾಲಾದರೂ ರಾಜ್ಯ ಬಿಜೆಪಿ ನಾಯಕರು ಮೋದಿ ಮುಂದೆ ಕೈ- ಬಾಯಿ ಕಟ್ಟಿಕೊಂಡು ನಿಲ್ಲುವ ಬದಲು ಕನಿಷ್ಠ ಬಾಯಿ ಬಿಡಲಿ. ಇಲ್ಲದಿದ್ದರೆ ಅವರಿಗೆ ಕರ್ನಾಟಕದವರು ಅನ್ನಿಸಿಕೊಳ್ಳುವ ಕನಿಷ್ಠ ಅರ್ಹತೆ ಇರುವುದಿಲ್ಲ, ನೆನಪಿರಲಿ” ಎಂದು ಎಚ್ಚರಿಸಿದ್ದಾರೆ.

6 5

ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವ ಬಿಜೆಪಿ

ಬರ ಪರಿಹಾರ ಕೈಪಿಡಿ ನಿಗದಿ ಮಾಡಿರುವ ದಿನಾಂಕಕ್ಕಿಂತ ಮೊದಲೇ ಬರ ಘೋಷಣೆ ಮಾಡಿ, ಪರಿಹಾರಕ್ಕೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಚುನಾವಣೆ ಘೋಷಣೆಯಾದ ಬಳಿಕ, “ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ತಡವಾಗಿ ಮನವಿ ಮಾಡಿದೆ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ, ಅದು ನೀಡುವ ಸೂಚನೆಯನ್ನು ಪಾಲಿಸಲಾಗುವುದು” ಎಂದು ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ಸುಳ್ಳು ಹೇಳಿದರು.

ಇದರ ನಡುವೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೇಲೆ ಅಲ್ಪಮಟ್ಟಿಗಿನ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ನೀತಿ ಸಂಹಿತೆಯ ನಡುವೆಯೇ ರಾಜ್ಯಕ್ಕೆ ಮೋದಿಯವರು ಪರಿಹಾರ ನೀಡಿದ್ದಾರೆಂದು ರಾಜ್ಯ ಬಿಜೆಪಿ ನಾಯಕರು ಮಾಡಿಕೊಳ್ಳುತ್ತಿರುವ ಪ್ರಚಾರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್

"ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಇನ್ನಷ್ಟು...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...