ಸಾಲುಮರದ ತಿಮ್ಮಕ್ಕನಿಗೆ 113 ವರ್ಷ, ಜನ್ಮದಿನ ಆಚರಿಸಿ ಗೌರವ ಸಲ್ಲಿಸಿದ ಸಚಿವರು, ಅಭಿಮಾನಿಗಳು

Date:

‘ವೃಕ್ಷೋ ರಕ್ಷತಿ ರಕ್ಷಿತಃ’ ಯಾರು ಮರ ಗಿಡಗಳನ್ನು ರಕ್ಷಿಸುತ್ತಾರೋ ಅವರನ್ನು ಮರ ಗಿಡಗಳೇ ರಕ್ಷಿಸುತ್ತವೆ. ಇದಕ್ಕೆ ರಾಜ್ಯದ ಹೆಮ್ಮೆಯ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರೇ ನಿದರ್ಶನ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

- Advertisement -

ಸಾಲುಮರದ ತಿಮ್ಮಕ್ಕನವರ 113ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ, “ಮಾಗಡಿ ತಾಲೂಕಿನ ಹುಲಿಕಲ್ ನಿಂದ ಕುದೂರು ನಡುವೆ ರಾಜ್ಯ ಹೆದ್ದಾರಿ 94ರಲ್ಲಿ ಸಾಲು ಸಾಲು 8000 ಸಸಿಗಳನ್ನು ನೆಟ್ಟು, ಬಹುದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಬೆಳೆಸಿದ್ದು, ಇಡೀ ಜಗತ್ತಿಗೇ ಮಾದರಿಯಾಗಿದ್ದಾರೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೀಸಲಾತಿ ಹೆಚ್ಚಳ ಮತ್ತು ನ್ಯಾಯಾಂಗದ ಮಿತಿ: ಸಾಮಾಜಿಕ ನ್ಯಾಯಕ್ಕೆ...

ಮೀಸಲಾತಿ ಬಯಸುವ ಜಾತಿಗಳೆಲ್ಲವೂ ಕೂಡ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಮತ್ತು ಕಾನೂನು ನಿಯಮಗಳನ್ನು ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಅಂತಃಕರಣ ಪೂರ್ವಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದಾಗ ಮಾತ್ರ ಸಾಮಾಜಿಕ ನ್ಯಾಯವೆಂಬ...

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

“ತಿಮ್ಮಕ್ಕನವರ ಜೀವನ ಆಧರಿಸಿ ಪ್ರೌಢ ಪ್ರಬಂಧ ಬರೆದು ಡಾಕ್ಟರೇಟ್ ಪಡೆದವರಿದ್ದಾರೆ. ಈ ಮಹಾತಾಯಿಯ ಆದರ್ಶ ಪಾಲಿಸಿ ತಮ್ಮೂರಿನಲ್ಲೂ ಸಾಲು ಮರ ನೆಟ್ಟು ಬೆಳೆಸಿದವರಿದ್ದಾರೆ. 2016 ರಲ್ಲಿ, ಬಿಬಿಸಿ ನಡೆಸಿದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ವೃಕ್ಷಮಾತೆ ತಿಮ್ಮಕ್ಕ ಅವರೂ ಸ್ಥಾನ ಪಡೆದಿದ್ದರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ” ಎಂದು ಹೇಳಿದರು.

“ಭಾರತ ಸರ್ಕಾರ ತಿಮ್ಮಕ್ಕನವರ ಪರಿಸರ ಕಾಳಜಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌವರಿಸಿದೆ. ಕರ್ನಾಟಕ ಸರ್ಕಾರವು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಿ, ಅವರನ್ನು ಪರಿಸರ ರಾಯಭಾರಿಯಾಗಿ ನೇಮಕ ಮಾಡಿದೆ” ಎಂದು ಈಶ್ವರ ಖಂಡ್ರೆ ತಿಳಿಸಿದರು.

“ತಾಯಿ ತಿಮ್ಮಕ್ಕ ಅವರಿಗಿರುವ ಪರಿಸರ ಕಾಳಜಿ, ಪರಿಸರದ ಬಗ್ಗೆ ಅವರಿಗಿರುವ ಪ್ರೀತಿ, ಮರಗಳ ಬಗ್ಗೆ ಅವರಿಗಿರುವ ಮಮಕಾರ ಇಂದು ಅವರನ್ನು ರಕ್ಷಿಸುತ್ತಿದೆ. ಮರಗಳೊಂದಿಗೆ ಸತತ ಸಂಪರ್ಕ ಇರುವುದರಿಂದಲೇ ಅವರು ಶುದ್ಧ ಆಮ್ಲಜನಕ ಸೇವಿಸಿ ಇಷ್ಟು ಆರೋಗ್ಯಪೂರ್ಣವಾಗಿ ದೀರ್ಘಾಯುಷ್ಯ ಪಡೆದಿದ್ದಾರೆ ಇನ್ನೂ ದೀರ್ಘ ಕಾಲ ಅವರು ಬಾಳಲಿ, ಬದುಕಲಿ ನಮಗೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿರಲಿ ಎಂದು ಪ್ರಾರ್ಥಿಸುವೆ” ಎಂದರು.

ಜಗತ್ತಿಗೆ ತಾಪಮಾನದ ಸವಾಲು

“ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ಇಂದು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಒಂದು ವರ್ಷದಲ್ಲಿ ಬೀಳುವ ಮಳೆ ಒಂದು ತಿಂಗಳಲ್ಲಿ ಬೀಳುತ್ತದೆ. ಒಂದು ತಿಂಗಳಲ್ಲಿ ಬೀಳುವ ಮಳೆ 1 ವಾರದಲ್ಲಿ ಬೀಳುತ್ತಿದೆ. 1 ವಾರವಿಡೀ ಸುರಿಯುವ ಮಳೆ ಒಂದು ಗಂಟೆಯಲ್ಲಿ ಬೀಳುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದರೆ, ಕೆಲವು ಕಡೆ ಮಳೆಯೇ ಆಗುತ್ತಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ವಿಪರೀತ ಬಿಸಿಲು ಏರುತ್ತಿದೆ. ಇಂತಹ ಅನಾಹುತ ತಪ್ಪಬೇಕಾದರೆ ವೃಕ್ಷಗಳ ಸಂಖ್ಯೆ ಹೆಚ್ಚಳವಾಗಬೇಕು. ನಾವು ನೀವೆಲ್ಲರೂ ಸಾಲು ಮರದ ತಿಮ್ಮಕ್ಕ ಅವರ ಆದರ್ಶ ಪಾಲಿಸಿ ಅವರಂತೆ ನಾವೂ ಸಸಿ ನೆಟ್ಟು ಪ್ರೀತಿಯಿಂದ ಬೆಳೆಸಬೇಕು” ಎಂದು ಈಶ್ವರ ಖಂಡ್ರೆ ತಿಳಿಸಿದರು.

“ಸಾಧನೆ ಮಾಡಲು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಯಾವುದೇ ಪದವಿ, ಸ್ಥಾನಮಾನದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಬರುತ್ತದೆ ಎಂಬುದನ್ನು ತಿಮ್ಮಕ್ಕ ಸಾಬೀತು ಪಡಿಸಿದ್ದಾರೆ” ಎಂದು ಖಂಡ್ರೆ ಹೇಳಿದರು.

ಇದೇ ವೇಳೆ ನೂರಾರು ಅಭಿಮಾನಿಗಳು ಶತಾಯುಷಿ ತಿಮ್ಮಕ್ಕನವನ್ನು ಗೌರವಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ...

ರಸ್ತೆ ತಡೆದು ಪೂಜಾ ಪೆಂಡಾಲ್ ಹಾಕುವಂತಿಲ್ಲ: ಒಡಿಶಾ ಹೈಕೋರ್ಟ್ ಆದೇಶ

ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬದ ಪೂಜಾ ಪೆಂಡಾಲ್‌ಗಳ ನಿರ್ಮಾಣ ಮತ್ತು ರಸ್ತೆ ಬಂದ್...

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.  ಇನ್ನೂ...

ಯುಪಿ ಚುನಾವಣೆಗೆ ಕಾಂಗ್ರೆಸ್ ಪ್ಲ್ಯಾನ್: ಎಸ್‌ಪಿ ಮುಂದೆ 125+ ಸೀಟುಗಳ ಬೇಡಿಕೆ ಇಡಲು ಪ್ರಿಯಾಂಕಾ ಸಜ್ಜು!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ...