‘ಬೇಟಿ ಬಚಾವೋ ಬೇಟಿ ಪಡಾವೋ’ವನ್ನು ತಪ್ಪಾಗಿ ಬರೆದ ಕೇಂದ್ರ ಸಚಿವೆ; ವಿಪಕ್ಷಗಳ ಗೇಲಿ

Date:

ಮೋದಿ ಸರ್ಕಾರದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ದೇವನಾಗರಿ ಲಿಪಿಯಲ್ಲಿ ತಪ್ಪಾಗಿ ಬರೆದಿರುವ ವಿಡಿಯೋ ವೈರಲ್ ಆಗಿದೆ. ಪ್ರತಿಪಕ್ಷ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

- Advertisement -

ಜಾರ್ಖಂಡ್‌ನಲ್ಲಿ ‘ಸ್ಕೂಲ್ ಚಲೇ ಹಮ್ ಅಭಿಯಾನ್’ ಅಡಿಯಲ್ಲಿ ಶಾಲೆಗಳ ಹೊಸ ಶೈಕ್ಷಣಿಕ ಸಮಾವೇಶವನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುತ್ತಿದೆ. ಅದರ ಅಂಗವಾಗಿ ಮಂಗಳವಾರ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಎನ್‌ಜಿಒ ಕಾರ್ಯಕ್ರಮ ಆಯೋಜಿಸಿದ್ದತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಮೋದಿ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ತಪ್ಪಾಗಿ ಬರೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

12ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಠಾಕೂರ್ ಜಾರ್ಖಂಡ್‌ನ ಧಾರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಎರಡನೇ ಬಾರಿಗೆ ಸಂಸದರಾಗಿ, ಈಗ ಸಚಿವರೂ ಆಗಿರುವ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದನ್ನು ‘ಬೇಟಿ ಪಢಾವೋ ಬಚ್ಚಾವ್’ ಎಂದು ಬರೆದಿದ್ದಾರೆ.

 

ಆ ವಿಡಿಯೋವನ್ನು ಹಂಚಿಕೊಂಡು ಅಪಹಾಸ್ಯ ಮಧ್ಯಪ್ರದೇಶ ಕಾಂಗ್ರೆಸ್‌ ಮಾಧ್ಯಮ ಸಲಹೆಗಾರ ಮತ್ತು ಪಕ್ಷದ ಹಿರಿಯ ನಾಯಕ ಕೆ.ಕೆ ಮಿಶ್ರಾ, “ಯಾರ ದುರದೃಷ್ಟವೆಂದು ನಾವು ಪರಿಗಣಿಸಬೇಕು… ದೇಶ, ಪ್ರಜಾಪ್ರಭುತ್ವ, ಸಂವಿಧಾನ ಅಥವಾ ಶಿಕ್ಷಣ ನೀತಿ” ಎಂದು ಪೋಸ್ಟ್‌ ಮಾಡಿದ್ದಾರೆ.

ಜಾರ್ಖಂಡ್‌ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘರ್, “ಇದು ಎಂತಹ ನಾಯಕತ್ವ….??? ಪ್ರಧಾನಿಗೆ ತಮ್ಮ ಸರ್ಕಾರದಲ್ಲಿ ರಬ್ಬರ್ ಸ್ಟಾಂಪ್ ಮಂತ್ರಿಗಳು ಮಾತ್ರ ಬೇಕೇ? ಒಬ್ಬ ಸಾರ್ವಜನಿಕ ಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ. ಆದರೆ, ಕನಿಷ್ಠ ಅವರು ಅಕ್ಷರಸ್ಥರಾಗಿರಬೇಕು! ಧಾರ್ ಸಂಸದೆ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಅವರಿಗೆ ಎರಡು ಪದಗಳನ್ನು ಬರೆಯಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಅವರು ತಪ್ಪಾಗಿ ಬರೆಯುವುದನ್ನು ನೋಡಿ ಏನನ್ನಿಸಿರಬಹುದು ಎಂದು ಅರ್ಥಮಾಡಿಕೊಳ್ಳಬಹುದು! ಇಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮುನ್ನ ಮತದಾರರು ಯೋಚಿಸಬೇಕಿತ್ತು. ಮೋದಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಎತ್ತುವ ವಿದ್ಯಾವಂತ ನಾಯಕರು ಬೇಕಾಗಿಲ್ಲ” ಎಂದು ಟೀಕಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಖನೌ ಕೆಫೆ ಮಾಲೀಕನ ಸಾವು ಪ್ರಕರಣ: ರೂಪದರ್ಶಿ ಶ್ರದ್ಧಾ ದುಬೆ ಬಂಧನ

​ಲಖನೌದ ಕೆಫೆ ಮಾಲೀಕ ಶಿವ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ...

ಏಷ್ಯನ್ ಪ್ಯಾರಾ ಗೇಮ್ಸ್‌ | 192 ಕೆಜಿ ಭಾರ ಎತ್ತಿ ಬೆಳ್ಳಿ ಗೆದ್ದ ಅಶೋಕ್ ಮಲಿಕ್

ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 65 ಕೆಜಿ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ...

ಝುಬಿನ್ ಗರ್ಗ್‌ಗೆ ನ್ಯಾಯಕ್ಕಾಗಿ ಆಗ್ರಹ: ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಅಸ್ಸಾಂ ಪೊಲೀಸ್ ವಶಕ್ಕೆ

ಅಸ್ಸಾಂನ ಪ್ರಸಿದ್ಧ ಸಾಂಸ್ಕೃತಿಕ ಪ್ರತಿಭೆ, ಗಾಯಕ ಝುಬಿನ್ ಗರ್ಗ್ ಅವರ ಸಾವಿಗೆ...

ಪ್ರಧಾನಿ ಮೋದಿಗೆ ಎರಡು ಪತ್ರಗಳನ್ನು ಬರೆದು, ಮೂರು ಮುಖ್ಯ ಕಳವಳ ವ್ಯಕ್ತಪಡಿಸಿದ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಮಾತನಾಡುತ್ತಾ, ಚುನಾವಣಾ ಪಟ್ಟಿಯಲ್ಲಿ...