ರಷ್ಯಾ | ಪುಟಿನ್‌ ವಿರುದ್ಧ ಬಂಡೆದಿದ್ದ ಯೆವ್ಗೆನಿ ಪ್ರಿಗೋಷಿನ್ ವಿಮಾನ ಅಪಘಾತದಲ್ಲಿ ಸಾವು; ಕೊಲೆ ಶಂಕೆ?

Date:

ಕಳೆದ ಜೂನ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವಾಗ್ನರ್ ಗ್ರೂಪ್ ಎಂಬ ಖಾಸಗಿ ಸೇನೆ ಮುಖ್ಯಸ್ಥ ಯವ್ಗೆನಿ ಪ್ರಿಗೋಷಿನ್ ಖಾಸಗಿ ವಿಮಾನ ಪತನದಲ್ಲಿ ಮೃತಪಟ್ಟಿರಬಹುದಾಗಿ ವರದಿಯಾಗಿದೆ.

- Advertisement -

ಯೆವ್ಗೆನಿ ಪ್ರಿಗೋಷಿನ್‌ ಅವರು ಪ್ರಯಾಣ ಮಾಡುತ್ತಿದ್ದ ವಿಮಾನವು ಮಾಸ್ಕೋದ ವಾಯವ್ಯದಲ್ಲಿರುವ ಟ್ವೆರ್‌ ಪ್ರದೇಶದಲ್ಲಿ ಬುಧವಾರ(ಆಗಸ್ಟ್ 23) ಪತನಗೊಂಡಿದೆ ಎಂದು ರಷ್ಯಾದ ಮಾಸ್ಕೋ ಟೈಮ್ಸ್‌ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಪ್ರಿಗೋಷಿನ್‌ ರಷ್ಯಾ ಉಕ್ರೇನ್‌ ಯುದ್ಧದ ಸಮಯದಲ್ಲಿ ರಷ್ಯಾ ವಿರುದ್ಧ ಬಂಡಾಯವೆದ್ದ ಖಾಸಗಿ ಸೇನೆ ವಾಗ್ನರ್‌ ಗ್ರೂಪ್‌ನ ಸ್ಥಾಪಕರಾಗಿದ್ದಾರೆ. ಇಲ್ಲಿನ ಎಮರ್ಜೆನ್ಸಿ ಮಿನಿಸ್ಟರಿ ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಸರ್ಕಾರಿ ವಾಯುಯಾನ ಏಜೆನ್ಸಿಯಾದ ರೊಸಾವಿಯಾಟ್ಸಿಯಾ ಪ್ರಕಾರ ಪ್ರಿಗೋಷಿನ್‌ ಕೂಡ ವಿಮಾನದಲ್ಲಿದ್ದರು ಎನ್ನಲಾಗುತ್ತಿದೆ.

ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿದ್ದು, ಅಲ್ಲಿ ಏನಾಗಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ಪ್ರಿಗೋಷಿನ್‌ ಸಾವು ನನಗೆ ಆಶ್ವರ್ಯ ಎನ್ನಿಸಿಲ್ಲ. ರಷ್ಯಾದಲ್ಲಿ ಪುಟಿನ್‌ ಹೇಳಿಕೆ ಇಲ್ಲದೆ ಯಾವುದೂ ನಡೆಯುತ್ತಿಲ್ಲ. ಆದರೆ ಈ ಸಾವು ನಿಜವೇ, ಕಾರಣವೇನು ಎಂಬುದು ನನ್ನ ಅರಿವಿಗೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಿಗೊಷಿನ್ ಮತ್ತು ಅವನ ಪರಿವಾರವನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂಬುದಕ್ಕೆ ಇವುಗಳಲ್ಲಿ ಯಾವುದೂ ಪುರಾವೆಯಾಗಿಲ್ಲ. ರಷ್ಯಾದ ರಕ್ಷಣಾ ಸ್ಥಾಪನೆಗೆ ನೀಡಿದ ಸವಾಲಿಗೆ ಅಧ್ಯಕ್ಷ ಪುಟಿನ್ ಅವರ ಆರಂಭಿಕ ಪ್ರತಿಕ್ರಿಯೆಯು ಸೇಡಿನದಾಗಿತ್ತು. ಜೂನ್ 24 ರಂದು ನೀಡಿದ ವಿಡಿಯೋ ಸಂದೇಶದಲ್ಲಿ ಪುಟಿನ್ ದ್ರೋಹ ಮತ್ತು ಬೆನ್ನಿಗೆ ಚೂರಿ ಇರಿದವರನ್ನು ತಕ್ಕ ದಂಡನೆ ತೆರುತ್ತಾರೆ ಎಂದು ತಿಳಿಸಿದ್ದರು.

yevgeny prigozhin 5
yevgeny-prigozhin-5

ರೋಚಕ ಹಿನ್ನೆಲೆ ಹೊಂದಿದ್ದ ಪ್ರಿಗೋಷಿನ್

1961 ಜೂನ್‌ 1ರಂದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜನಿಸಿದ ಯೆವ್ಗೆನಿ ಪ್ರಿಗೋಷಿನ್ ಕೆಲವೇ ವರ್ಷಗಳಲ್ಲಿ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಅಜ್ಜಿಯ ಆರೈಕೆಯಲ್ಲಿ ಬೆಳೆಯಬೇಕಾಯಿತು. ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈತನ ತಾಯಿ ಮತ್ತೊಂದು ಮದುವೆಯಾದ ಕಾರಣ ಮಲತಂದೆಯ ಆಶ್ರಯ ಪ್ರಿಗೋಷಿನ್‌ಗೆ ದೊರಕಿತು. ಈತನ ತಂದೆ ಹಾಗೂ ಮಲತಂದೆ ಯಹೂದಿ ಮೂಲದವರು. ತನ್ನ ಶಾಲಾ ದಿನಗಳಲ್ಲಿ ಪ್ರಿಗೋಷಿನ್‌ ಮರಳುಗಾಡಿನ ಸ್ಕೇಟಿಂಗ್‌ ಆಟಗಾರನಾಗಬೇಕೆಂಬ ಬಯಕೆ ಹೊಂದಿದ್ದ. ದೈಹಿಕ ಶಿಕ್ಷಣ ಬೋಧಕರಾಗಿದ್ದ ಈತನ ಮಲತಂದೆಯಿಂದ ತರಬೇತಿ ಕೂಡ ಪಡೆದುಕೊಂಡಿದ್ದ. ಆದರೆ ಕಾಲಾನಂತರದಲ್ಲಿ ಇದ್ಯಾವುದು ನೆರವೇರಲಿಲ್ಲ. ಪ್ರತಿಷ್ಠಿತ ಅಥ್ಲೆಟಿಕ್ಸ್ ಬೋರ್ಡಿಂಗ್ ಶಾಲೆಯಲ್ಲಿ ಈತ 1977 ರಲ್ಲಿ ಪದವಿ ಪಡೆದ.

ಆದರೆ ಚಿಕ್ಕವನಿರುವಾಗಲೇ ಬಾಲಪರಾಧಿಗಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. 1980 ರಲ್ಲಿ ಹಲವಾರು ಹಿಂಸಾತ್ಮಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದೇ ಕಾರಣಕ್ಕೆ ಯೆವ್ಗೆನಿ ಪ್ರಿಗೋಷಿನ್ ಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿಗೆ ಹೋದಾಗ ಆತನಿಗೆ 20ರ ಹರೆಯ. ಯೌವನದ ಬಹುಪಾಲು ಸಮಯವನ್ನು ಜೈಲಿನಲ್ಲಿಯೇ ಕಳೆದು 1990 ರಲ್ಲಿ ಸೆರೆಮನೆಯಿಂದ ಬಿಡುಗಡೆಯಾದ.

ಯೆವ್ಗೆನಿ ಪ್ರಿಗೋಷಿನ್ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾಗುವ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಆತ ತನ್ನ ತಾಯಿ ಮತ್ತು ಮಲತಂದೆಯೊಂದಿಗೆ ಸಣ್ಣ ಪ್ರಮಾಣದಲ್ಲಿ ತಿಂಡಿ ತಿನಿಸು ಮಾರಾಟ ಮಾಡುವ ವೃತ್ತಿಯನ್ನು ಪ್ರಾರಂಭಿಸಿದ. ತುಂಬಾ ಕಡಿಮೆ ಸಮಯದಲ್ಲಿಯೇ, ತನ್ನ ತವರು ನಗರ ಪೀಟರ್ಸ್‌ಬರ್ಗ್‌ನಲ್ಲಿ ಅಂದಿನ ಕಾಲಕ್ಕೆ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಸೂಪರ್‌ಮಾರ್ಕೆಟ್ ಘಟಕಗಳ ಪಾಲು ಪಡೆದುಕೊಂಡ.

ಯೆವ್ಗೆನಿ ಪ್ರಿಗೋಷಿನ್
yevgeny-prigozhin

ಪುಟಿನ್ ಸ್ನೇಹ, ಜಾರ್ಜ್ ಬುಷ್‌ಗೂ ಆತಿಥ್ಯ

ಯೆವ್ಗೆನಿ ಪ್ರಿಗೋಷಿನ್ ಸೂಪರ್‌ಮಾರ್ಕೆಟ್ ಘಟಕಗಳ ಜೊತೆ, ಜೂಜಿನ ವ್ಯವಹಾರ, ಮಾರುಕಟ್ಟೆ ಸಂಶೋಧನೆ ಮತ್ತು ವಿದೇಶಿ ವ್ಯಾಪಾರ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ಕೂಡ ತೊಡಗಿಸಿಕೊಂಡಿದ್ದ. ಆಗಲೇ ಆತ ವ್ಲಾಡಿಮಿರ್ ಪುಟಿನ್ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳ ವಿಶ್ವಾಸ ಗಳಿಸಿಕೊಂಡು ಅವರಿಗಾಗಿ ಕೆಲಸ ಮಾಡತೊಡಗಿದ್ದ. ಪ್ರಿಗೋಷಿನ್‌ನ ಹಲವು ವ್ಯವಹಾರಗಳ ಏಳುಬೀಳುಗಳು ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯಿತು. ಈತನ ವ್ಯವಹಾರ ಪ್ರಿನ್ಸ್ ಚಾರ್ಲ್ಸ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಆತಿಥ್ಯ ನೀಡುವಷ್ಟು ದೊಡ್ಡದಾಗಿ ಬೆಳೆಯಿತು. ಸರ್ಕಾರದ ಪ್ರಮುಖ ನಾಯಕರ ಬೆಂಬಲವಿರುವ ಕಾರಣ ದೊಡ್ಡ ದೊಡ್ಡ ಗುತ್ತಿಗೆಗಳಿಂದ ಈತ ಅತಿ ಬೇಗನೆ ಭಾರೀ ಪ್ರಮಾಣದ ಆಸ್ತಿ ಸಂಪಾದಿಸಿದ. ಈ ನಡುವೆಯಲ್ಲಿಯೇ ಸೇಂಟ್ ಪೀಟರ್ಸ್‌ಬರ್ಗ್‌ ಮೇಯರ್‌ ಸೇರಿದಂತೆ ಕೆಲವು ರಾಜಕೀಯ ಹುದ್ದೆಗಳನ್ನು ನಿಭಾಯಿಸಿದ.

ಪುಟಿನ್‌ ಬೆಂಬಲದಿಂದ ವ್ಯಾಗ್ನರ್ ಪಡೆ

2000ರಲ್ಲಿ ವ್ಲಾಡಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾದ ನಂತರ ಪ್ರಿಗೋಷಿನ್‌ ವ್ಯವಹಾರಗಳು ಮತ್ತಷ್ಟು ಹೆಚ್ಚಾದವು. ರಷ್ಯಾ ಸರ್ಕಾರದ ಮಿಲಿಟರಿ ಮತ್ತು ಶಾಲಾ ಆಹಾರ ಒಪ್ಪಂದಗಳು ಈತನಿಗೆ ಸುಲಭವಾಗಿ ಸಿಗತೊಡಗಿದವು. ಇನ್ನೊಂದು ಪ್ರಮುಖ ವಿಚಾರವೆಂದರೆ ರಷ್ಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ದಂಗೆಯ ಮೂಲ ಒಂದು ದಶಕದ ಹಿಂದಿನ ಘಟನಾವಳಿಗಳಿಗೆ ಬೆಸೆದುಕೊಂಡಿದೆ. ದಶಕದ ಹಿಂದೆ 2014ರಲ್ಲಿ ರಷ್ಯಾ ಅಕ್ರಮವಾಗಿ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತ್ತು ಮತ್ತು ಪೂರ್ವ ಉಕ್ರೇನ್‌ಗೆ ಅನಾಮಧೇಯ ಸೇನಾ ಪಡೆಗಳನ್ನು ಕಳುಹಿಸಿತ್ತು.

ಆಗಲೇ ಪ್ರಿಗೋಷಿನ್‌ 2014ರಲ್ಲಿ ವ್ಯಾಗ್ನರ್​ ಎಂಬ ಖಾಸಗಿ ಸೇನೆಯನ್ನು ಪುಟಿನ್‌ ಬೆಂಬಲದಿಂದಲೇ ಸ್ಥಾಪಿಸಿ, ಆತನ ಪರವಾಗಿ ಹೋರಾಡಿದ್ದ. ಅನಂತರ ಸಿರಿಯಾದಲ್ಲಿ ಅಪ್ರತಿಮ ಹೋರಾಟ ನಡೆಸಿದ ವ್ಯಾಗ್ನರ್ ಪಡೆಗಳು ಪ್ರಥಮ ಬಾರಿಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿದವು. ಪ್ರಿಗೋಷಿನ್‌ ಕೆಲ ವರ್ಷಗಳಲ್ಲಿ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಉಕ್ರೇನಿನಾದ್ಯಂತ ವ್ಯಾಗ್ನರ್ ಪಡೆಯನ್ನು ಪ್ರಬಲ ಶಕ್ತಿಯಾಗಿ ನಿರ್ಮಿಸಿದ. 50 ಸಾವಿರಕ್ಕೂ ಹೆಚ್ಚು ಯೋಧರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಾಗ್ನರ್​ ಗುಂಪನ್ನು ಅಧಿಕೃತವಾಗಿ ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ.

yevgeny prigozhin 2

ಹಲವು ದೇಶಗಳಿಗೆ ರಕ್ಷಣೆ

ಇದು ರಷ್ಯಾದ ಖಾಸಗಿ ಅರೆಕಾಲಿಕ ಸಂಸ್ಥೆ. ಮೂಲತಃ ಖಾಸಗಿ ಮಿಲಿಟರಿ ಕಂಪನಿ ಮತ್ತು ಕೂಲಿ ಕಾರ್ಮಿಕರ ಜಾಲ. ವಾಸ್ತವವಾಗಿ ಈ ಹೆಸರಿನಲ್ಲಿ ಯಾವುದೇ ಕಂಪನಿ ನೋಂದಣಿಯಾಗಿಲ್ಲ. ಅಲ್ಲದೆ ಖಾಸಗಿ ಸೈನ್ಯವನ್ನು ನಡೆಸುವುದು ಕಾನೂನಿನ ಅಡಿಯಲ್ಲಿ ರಷ್ಯಾದಲ್ಲಿ ಅಪರಾಧವಾಗಿದೆ. ಆದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೆಚ್ಚು ಆಪ್ತವಾಗಿರುವ ಕಾರಣ ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು.

ವ್ಯಾಗ್ನರ್ ಪಡೆ ಲಿಬಿಯಾ ಅಂತರ್ಯುದ್ಧ, ಮೊಜಾಂಬಿಕ್, ಮಾಲಿ, ಸುಡಾನ್, ಆಫ್ರಿಕನ್ ರಿಪಬ್ಲಿಕ್ ಮತ್ತು ವೆನಿಜುವೆಲಾದಂತಹ ದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಉಕ್ರೇನ್‌ ಯುದ್ಧದಲ್ಲಿ ಈ ಪಡೆಯ ಯೋಧರು ಹೆಚ್ಚು ಪರಾಕ್ರಮ ತೋರಿದ್ದಾರೆ. ಹಲವು ಪ್ರದೇಶಗಳು ವಶವಾಗಲು ಈ ಸೇನೆ ತೋರಿದ ಸಾಹಸವೆ ಕಾರಣ ಎನ್ನಲಾಗುತ್ತದೆ. ಇದಲ್ಲದೆ ರಷ್ಯಾದ ತೈಲ ಕ್ಷೇತ್ರಗಳನ್ನು ಈ ಗುಂಪು ಕಾವಲು ಕಾಯುತ್ತಿದೆ. ಲಿಬಿಯಾದಲ್ಲಿ ಜನರಲ್ ಖಲೀಫಾ ಹಫ್ತಾರ್‌ಗೆ ನಿಷ್ಠರಾಗಿರುವ ಪಡೆಗಳಿಗೆ ಬೆಂಬಲಿಸುತ್ತಿದೆ. ಮಧ್ಯ ಆಫ್ರಿಕನ್ ರಿಪಬ್ಲಿಕ್ ವಜ್ರದ ಗಣಿಗಳಿಗೆ, ಸುಡಾನ್‌ನಲ್ಲಿ ಚಿನ್ನದ ಗಣಿಗಳಿಗೆ ರಕ್ಷಣೆ ಕೂಡ ನೀಡುತ್ತಿದೆ.

ಅಮೆರಿಕದ ಎಫ್‌ಬಿಐಗೆ ಬೇಕಾಗಿದ್ದ ವ್ಯಕ್ತಿ

ಪಿತೂರಿ ನಡೆಸಿರುವ ಕಾರಣಕ್ಕಾಗಿ ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐಗೆ ಕೂಡ ಪ್ರಿಗೋಷಿನ್‌ ಬೇಕಾಗಿದ್ದಾನೆ. 2014 ರಿಂದ 2018 ರವರೆಗೆ ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಫ್ಲೋರಿಡಾ ಮೂಲದ ಪ್ರಿಗೋಷಿನ್‌ ಮಾಲೀಕತ್ವದ ಇಂಟರ್ನೆಟ್ ರಿಸರ್ಚ್ ಏಜೆನ್ಸಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಪ್ರಚಾರ ಮಾಡಿತ್ತು. ಅಲ್ಲದೆ ‘ಡೆಬಾಲ್ಟ್ಸೆವ್ ಕದನ’ದಲ್ಲಿ ಈತನ ಕೈವಾಡವೂ ಇತ್ತು. ಈ ಆರೋಪಗಳಿಗಾಗಿ ಎಫ್‌ಬಿಐ ಈತನ ಮೇಲೆ 2,50,000 ಡಾಲರ್ ಬಹುಮಾನ ಘೋಷಿಸಿದೆ.

Russia Rebel leader 1

ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದೇಕೆ?

ಸಾಮಾನ್ಯ ಉದ್ಯಮಿಯಾಗಿದ್ದ ಪ್ರಿಗೋಷಿನ್‌ ತಾನು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಬೆನ್ನೆಲುಬಾಗಿದ್ದ ವ್ಲಾಡಿಮಿರ್ ಪುಟಿನ್ ವಿರುದ್ಧವೇ ತಿರುಗಿ ಬೀಳಲು ಕಾರಣವೇನು ಎಂಬುದಕ್ಕೆ ಪ್ರಮುಖ ವಿಷಯಗಳು ತೆರೆದುಕೊಳ್ಳುತ್ತವೆ.

ವ್ಯಾಗ್ನರ್ ಗುಂಪು ಒಂದು ದಶಕದಿಂದಲೂ ರಷ್ಯಾ ಪರವಾಗಿ ಉಕ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿದೆ. ಆದರೆ ಕೆಲವು ವಿಚಾರಗಳಲ್ಲಿ ವ್ಯಾಗ್ನರ್ ಗುಂಪು ರಷ್ಯಾ ಸೇನೆ ವಿರುದ್ಧ ಅಸಮಾಧಾನಗೊಂಡಿತ್ತು. ಕೆಲವು ವರ್ಷಗಳಿಂದ ತಮ್ಮ ಸೈನಿಕರಿಗೆ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ ಹಾಗೂ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ಮಿಲಿಟರಿ ಜನರಲ್‌ಗಳೊಂದಿಗೆ ಸೇರಿ ವ್ಯಾಗ್ನರ್ ಗುಂಪನ್ನು ನಾಶಮಾಡಲು ಬಯಸುತ್ತಿದ್ದಾರೆ ಎನ್ನುವುದು ಪ್ರಿಗೋಷಿನ್‌ ಆರೋಪ.

ರಷ್ಯಾ ಸೇನೆ, ವ್ಯಾಗ್ನರ್ ನಡುವಿನ ಸಮರದಲ್ಲಿ ವ್ಯಾಗ್ನರ್ ಗುಂಪನ್ನೇ ತಮ್ಮ ನೇರ ಸುಪರ್ದಿಗೆ ಪಡೆಯಲು ರಷ್ಯಾ ಸೇನೆ ಯತ್ನಿಸಿತ್ತು. ಕೆಲವು ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿತ್ತು ಎಂಬ ಕಾರಣದಿಂದ ಸರ್ಕಾರವನ್ನೇ ವಶಪಡಿಸಿಕೊಳ್ಳಲು ಯತ್ನಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್‌ ಏನು ಹೇಳುತ್ತಾರೆ?

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು....

ಅಮೆರಿಕ ಸರ್ಕಾರದ ವಿರುದ್ಧ ನ್ಯಾಯಾಲಯದ ಮಹತ್ವದ ಆದೇಶ: 55 ಸಾವಿರ ಗ್ರೀನ್ ಕಾರ್ಡ್ ಅರ್ಜಿಗಳ ಪರಿಗಣನೆಗೆ ಸೂಚನೆ

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ವಿದೇಶಿಯರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಗತ್ತಿನ...

‘ಲೆಹರಾ ದೋ ತಿರಂಗಾ’ ಮಾರ್ಚ್‌ಗೆ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರಿಂದ ವಶಕ್ಕೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...