(ಮುಂದುವರಿದ ಭಾಗ..) ವಿರೋಧಿಯನ್ನು ಕಲ್ಪಿಸಿಕೊಳ್ಳದ ಅಸ್ತಿತ್ವ ಇರಲು ಸಾಧ್ಯವಿಲ್ಲ. ಅದರಲ್ಲೂ ಗುಲಾಮಗಿರಿಯ ಮೊದಲ ಪಾಠವೇ ತನ್ನ ಎನಿಮಿಯನ್ನು ಗುರುತಿಸಿಕೊಳ್ಳುವುದು, ಅದರ ಬಗ್ಗೆ ಎಚ್ಚರದಿಂದ ಇರುವುದು, ಪ್ರತಿರೋಧಕ್ಕೆ ತಂತ್ರವನ್ನು ರೂಪಿಸಿಕೊಳ್ಳುವುದು ಹಾಗೂ ಅದಕ್ಕಾಗಿ ನಿರಂತರ ಶ್ರಮವಹಿಸುವುದು. ನಂತರವೇ ಉತ್ತಮ ಫಲಿತಾಂಶ. ಇದನ್ನು ಡಿ.ಆರ್. ನಾಗರಾಜ ಅವರು ‘ಬಯಲು-ಬಿಲʼ ಪರಿಕಲ್ಪನೆಯನ್ನಾಗಿ ರೂಪಿಸುತ್ತಾರೆ. ಅವರು ಭಾರತೀಯ ಸ್ತ್ರೀವಾದವನ್ನು ಕುರಿತು ಬರೆಯುತ್ತಾ ಮುಖ್ಯವಾಗಿ ಮಹಾಶ್ವೇತಾದೇವಿಯವರ ‘ಸ್ತನದಾಯಿನಿʼ, ವೈದೇಹಿಯವರ ‘ಅಕ್ಕುʼ ಮುಂತಾದ ಬರಹಗಳನ್ನು ಚರ್ಚಿಸುತ್ತಾ ‘ಹುಲಿ ಇಲಿಗೆ ಸೋತ ಕಥೆʼಯನ್ನು ನಿರೂಪಿಸುವ ಸಂಕೇತಗಳಾಗಿ ‘ಬಯಲು…

ಪ್ರೊ. ರಾಜಪ್ಪ ದಳವಾಯಿ
ಕನ್ನಡ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. 'ಕವಿರಾಜ ಮಾಗ౯: ಬಹುಶಿಸ್ತೀಯ ಅಧ್ಯಯನ' ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ.