ಮೈಸೂರು ರಾಜ್ಯದ ‘ಕರ್ನಾಟಕ’ ಎಂಬ ಹೆಸರಿನ 1973ರ ಮರುನಾಮಕರಣಕ್ಕೆ ಚಾರಿತ್ರಿಕ ಮಹತ್ವವಿದೆ. ಬೀದರ್ನಿಂದ ಚಾಮರಾಜನಗರದವರೆಗಿನ ಹಲವು `ಒಳನುಡಿಗಳನ್ನು ಆಡುವ, ವಿಭಿನ್ನ ಜೀವನಕ್ರಮಗಳನ್ನು ಹೊಂದಿರುವ ಕನ್ನಡಿಗರ ಒಳಗೊಳ್ಳುವಿಕೆಯ ದೃಷ್ಟಿಯಿಂದ ಈ ಘಟನೆಯು ಏಕೀಕರಣದಂತೆಯೇ ಮುಖ್ಯ. ಈ ಒಳಗೊಳ್ಳುವಿಕೆಯು ಮಹಿಳೆಯರನ್ನೂ ಒಳಗೊಂಡದ್ದಾಗಿದೆ ಎಂಬುದು ಗಮನಾರ್ಹವಾದರೂ ಈ ನಾಮಕರಣಕ್ಕೂ ಕರ್ನಾಟಕದ ಮಹಿಳೆಯರ ಸ್ಥಿತಿಗತಿಗೂ ನೇರಾನೇರ ಸಂಬಂಧವಿಲ್ಲ. ಆದರೆ, ಅದು ಕಳೆದ ಐವತ್ತು ವರ್ಷಗಳ ಅವಲೋಕನಕ್ಕೆ ಒದಗಿ ಬರುತ್ತದೆ ಎಂಬುದು ಇಲ್ಲಿ ಮುಖ್ಯ. ಕರ್ನಾಟಕದ ಮರುನಾಮಕರಣದ ಸಿದ್ಧತೆಯು ನಡೆಯುತ್ತಿದ್ದ ದಿನಮಾನಗಳಲ್ಲಿ ಅಂದರೆ, 1974ರಲ್ಲಿ…

ಡಾ. ಎಂ. ಉಷಾ
ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್ಡಿ ಪದವಿ ಪಡೆದು ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ‘ಬಾಳಬಟ್ಟೆ’ ಪುಸ್ತಕಕ್ಕೆ ವಿಜಯ ದಬ್ಬೆ ಸಾಹಿತ್ಯ ಪ್ರಶಸ್ತಿ ದೊರಕಿದೆ.