ಭಾರತವು ಇಂಗ್ಲಿಷರ ಆಳ್ವಿಕೆಯಲ್ಲಿ ಇದ್ದಾಗ ಕನ್ನಡ ಮಾತನಾಡುವ ಪ್ರದೇಶಗಳು ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಹೈದರಾಬಾದ್ ನಿಜಾಂನ ಆಡಳಿತ ಮತ್ತು ಮೈಸೂರು ರಾಜ್ಯ ಹಾಗೂ ಕೊಡಗು ಸೇರಿ ವಿವಿಧ ಆಡಳಿತ ವ್ಯವಸ್ಥೆಯಲ್ಲಿ ಹರಿದು ಹಂಚಿಹೋಗಿದ್ದವು. ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟ ಬಿರುಸುಗೊಂಡಿತ್ತು. ಇದೇ ಅವಧಿಯಲ್ಲಿ ಕನ್ನಡ ಭಾಷೆ ಮಾತನಾಡುವ ಜನರನ್ನು ಒಗ್ಗೂಡಿಸಿ ಒಂದು ರಾಜ್ಯ ರೂಪಿಸುವ ಕರ್ನಾಟಕ ಏಕೀಕರಣ ಚಳವಳಿ ಆರಂಭವಾಗಿತ್ತು. ಕರ್ನಾಟಕ ಏಕೀಕರಣ ಚಳವಳಿಯ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ ಮತ್ತು…

ಪ್ರೊ. ಓಂಕಾರ ಕಾಕಡೆ
ಪ್ರೊ. ಓಂಕಾರ ಕಾಕಡೆ ಅವರು ಕೆಲಕಾಲ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸದ್ಯ ಜರ್ನಲಿಸಂ ವಿಭಾಗದ ಅಧ್ಯಾಪಕರಾಗಿದ್ದಾರೆ. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.