70ರ ದಶಕದಲ್ಲಿ ‘ದಲಿತ’ ಎನ್ನುವ ಶಬ್ದವನ್ನು ಅರ್ಥೈಸಲು ಸಾಕಷ್ಟು ಚರ್ಚೆಗಳು ನಡೆದವು. ಹಾಗೆಯೇ ಈಗ ಮತ್ತೆ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಇದು ಮರು ಅರ್ಥೈಸುವಿಕೆಯಾಗಿರದೆ, ‘ದಲಿತ’ ಎನ್ನುವ ಪದದ ಮೇಲೆ ನಡೆಸುವ ಪ್ರಹಾರದಂತೆ ಭಾಸವಾಗುತ್ತದೆ. ಹೀಗಾಗಲು ಮುಖ್ಯ ಕಾರಣ, ಚರಿತ್ರೆಯ ಗ್ರಹಿಕೆಯಲ್ಲಿಯ ಲೋಪಗಳು ಮತ್ತು ಮೇಲ್ಪದರಿನ ಹಾರಿಕೆಯ ಮಾತುಗಳಾಗಿವೆ. ಅದರಲ್ಲೂ ದಲಿತ ಚಳವಳಿಯಲ್ಲಿ ಸಕ್ರಿಯವಾಗಿದ್ದವರೇ ಅಪವ್ಯಾಖ್ಯಾನ ಅಥವಾ ಅಪಾರ್ಥಕ್ಕೆ ಗುರಿ ಮಾಡಲು ನಿಂತಾಗ ಇಂಥ ಚರ್ಚೆಗಳು ಭುಗಿಲೇಳುತ್ತವೆ. ಇಂದಿನ ದಲಿತ ಪದದ ಚರ್ಚೆಯೂ ಇಂಥದೇ ಸಂದರ್ಭದ್ದಾಗಿದೆ. ವಿಧಾನಸಭೆಯಲ್ಲಿ…

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.