ಮಾನವ ಸಮುದಾಯವನ್ನು ‘ಹೆಣ್ಣು’ ಮತ್ತು `ಗಂಡು’ ಎನ್ನುವ ಎರಡು ಪರಿಕಲ್ಪನೆಗಳಲ್ಲಿ ವಿವರಿಸಿಕೊಳ್ಳುವುದು ಅಪಾಯಕಾರಿಯಾದುದು. ಯಾಕೆಂದರೆ ಹೆಣ್ಣಿನ ಜೈವಿಕತೆಯನ್ನು ಮೀರಿ ಸಾಮಾಜೀಕರಣಗೊಂಡ ಮಹಿಳೆಯರಿದ್ದಾರೆ; ಹೆಣ್ಣಾಗಿ ಹುಟ್ಟಿ ನಂತರ ಗಂಡಾಗಿ ಪರಿವರ್ತನೆ ಹೊಂದಿದವರು ಇದ್ದಾರೆ; ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಪರಿವರ್ತನೆಯಾದವರೂ ಇದ್ದಾರೆ; ಹೆಣ್ಣಿನಲ್ಲಿ `ಹೆಣ್ಣು ಮತ್ತು ಗಂಡು’, ಹಾಗೆಯೇ ಗಂಡಿನಲ್ಲಿ `ಗಂಡು ಮತ್ತು ಹೆಣ್ಣು’-ಹೀಗೆ ಲೈಂಗಿಕವಾಗಿ ಹಾಗೂ ಭಾವನಾತ್ಮಕವಾಗಿ ಒಟ್ಟಿಗೆ ಇರುವ ದ್ವಿಲಿಂಗಿಗಳೂ ಇದ್ದಾರೆ; ಹೊರ ನೋಟಕ್ಕೆ ಹೆಣ್ಣಿನಂತೆ ಮೊಲೆ ಮುಡಿ ಹೊಂದಿ, ಸಮಾಜ ಅಪೇಕ್ಷಿಸುವ ಹೆಣ್ಣಿನಂತೆ ಇದ್ದರೂ…

ಡಾ. ಶೈಲಜ ಹಿರೇಮಠ
ಡಾ. ಶೈಲಜ ಹಿರೇಮಠ ಅವರು ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 65ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. 'ಸ್ತ್ರೀಕಥನ', 'ಮಹಿಳಾ ಕಾರ್ಮಿಕರು' ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರ 'ಪಾತರದವರು' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ದೊರಕಿವೆ.