ಸಿಎಂ ಬದಲಾವಣೆಯ ನಂತರ ಕಾಂಗ್ರೆಸ್ ಮುಂದಿರುವ ಸವಾಲುಗಳು: ಇದು ಸಿದ್ಧಾಂತ ರಾಜಕೀಯವೇ? ಅಧಿಕಾರ ರಾಜಕಾರಣವೇ?

Date:

ಡಿ.ಕೆ. ಶಿವಕುಮಾರ್ ಅವರ ಮುಂದಿರುವ ಸದ್ಯದ ದೊಡ್ಡ ಸವಾಲು ಕೇವಲ ರಾಜ್ಯದ ಆಡಳಿತ ನಡೆಸುವುದಲ್ಲ. ಪಕ್ಷದೊಳಗಿನ ವಿವಿಧ ಗುಂಪುಗಳನ್ನು ಸಮನ್ವಯಗೊಳಿಸುವುದು, ಅಸಮಾಧಾನಗೊಂಡ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಪಕ್ಷದ ಒಗ್ಗಟನ್ನು ಕಾಪಾಡುವುದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ರಾಜಕೀಯ ನಾಯಕತ್ವದ ಅಗ್ನಿ ಪರೀಕ್ಷೆಯಾಗಿದೆ. ಮುಖ್ಯಮಂತ್ರಿಯಾಗಿ ಅವರ ಯಶಸ್ಸು ಕೇವಲ ಅಭಿವೃದ್ಧಿ ಯೋಜನೆಗಳಲ್ಲದೇ ಪಕ್ಷದೊಳಗಿನ ಸ್ಥಿರತೆಯನ್ನು ಹೇಗೆ ಕಾಪಾಡುತ್ತಾರೆ ಎಂಬುದರ ಮೇಲೂ ಅವಲಂಬಿತವಾಗಿದೆ

- Advertisement -

ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಾಂಗ್ರೆಸ್ ಪಕ್ಷದೊಳಗಿನ ಕೆಲವು ಅಸಮಾಧಾನಗಳು, ರಾಜೀನಾಮೆಗಳ ಚರ್ಚೆಗಳು ಮತ್ತು ಅಧಿಕಾರ ಹಂಚಿಕೆಯ ಕುರಿತ ಅನಿಶ್ಚಿತತೆಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನನ್ನು ಸ್ವಾತಂತ್ರ್ಯ ಹೋರಾಟದ ಪರಂಪರೆ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿನಿಧಿಯೆಂದು ಪರಿಚಯಿಸಿಕೊಳ್ಳುತ್ತದೆ. ಪಕ್ಷದ ರಾಜಕೀಯ ಬೆಳವಣಿಗೆಗಳು ಪಕ್ಷದ ಸಿದ್ಧಾಂತಕ್ಕಿಂತ ಹುದ್ದೆ ಮತ್ತು ಅಧಿಕಾರದ ರಾಜಕೀಯ ಹೆಚ್ಚು ಪ್ರಾಬಲ್ಯ ಪಡೆಯುತ್ತಿದೆಯೇ ಎಂಬ ಅನುಮಾನವನ್ನು ಮೂಡಿಸುತ್ತಿವೆ.

ಸಚಿವ ಸ್ಥಾನ ಸಿಗದಿದ್ದಾಗ, ನಿರೀಕ್ಷಿತ ಖಾತೆ ದೊರೆಯದಿದ್ದಾಗ ಅಥವಾ ಅಧಿಕಾರದ ಕೇಂದ್ರದಿಂದ ದೂರ ಉಳಿದಾಗ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸುವುದು, ರಾಜೀನಾಮೆಯ ಸೂಚನೆ ನೀಡುವುದು ಅಥವಾ ಬಹಿರಂಗವಾಗಿ ಅಸಮಾಧಾನ ಹೊರಹಾಕುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ. ಭಾರತದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಇದೇ ಪ್ರವೃತ್ತಿ ಕಂಡುಬರುತ್ತದೆ. ಆದರೆ ತಮ್ಮನ್ನು ಜಾತ್ಯತೀತ ಸಿದ್ಧಾಂತ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ನಂತಹ ಪಕ್ಷಗಳಿಗೆ ಇದು ಹೆಚ್ಚು ಗಂಭೀರ ಸವಾಲಾಗಿದೆ.

ಯಾವುದೇ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಹುದ್ದೆ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧವೇ ನಿಲ್ಲುವುದು ಅಥವಾ ಒತ್ತಡ ಹೇರುವುದು ಸಿದ್ಧಾಂತದ ರಾಜಕೀಯದ ಲಕ್ಷಣವಲ್ಲ. ಒಬ್ಬ ನಾಯಕನ ರಾಜಕೀಯ ನಿಷ್ಠೆ ಹುದ್ದೆ ಮತ್ತು ಅಧಿಕಾರಕ್ಕೆ ಮಾತ್ರ ಸೀಮಿತವಾಗಿದ್ದರೆ, ಅದು ಜನಸೇವೆಯ ರಾಜಕೀಯವಲ್ಲ; ಅದು ಅವಕಾಶವಾದಿ ರಾಜಕೀಯ.

ಡಿ.ಕೆ. ಶಿವಕುಮಾರ್ ಅವರ ಮುಂದಿರುವ ಸದ್ಯದ ದೊಡ್ಡ ಸವಾಲು ಕೇವಲ ರಾಜ್ಯದ ಆಡಳಿತ ನಡೆಸುವುದಲ್ಲ. ಪಕ್ಷದೊಳಗಿನ ವಿವಿಧ ಗುಂಪುಗಳನ್ನು ಸಮನ್ವಯಗೊಳಿಸುವುದು, ಅಸಮಾಧಾನಗೊಂಡ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಪಕ್ಷದ ಒಗ್ಗಟನ್ನು ಕಾಪಾಡುವುದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ರಾಜಕೀಯ ನಾಯಕತ್ವದ ಅಗ್ನಿ ಪರೀಕ್ಷೆಯಾಗಿದೆ. ಮುಖ್ಯಮಂತ್ರಿಯಾಗಿ ಅವರ ಯಶಸ್ಸು ಕೇವಲ ಅಭಿವೃದ್ಧಿ ಯೋಜನೆಗಳಲ್ಲದೇ ಪಕ್ಷದೊಳಗಿನ ಸ್ಥಿರತೆಯನ್ನು ಹೇಗೆ ಕಾಪಾಡುತ್ತಾರೆ ಎಂಬುದರ ಮೇಲೂ ಅವಲಂಬಿತವಾಗಿದೆ.

ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಕರ್ನಾಟಕದ ಜನರು ಆಂತರಿಕ ಅಧಿಕಾರ ಹೋರಾಟಗಳನ್ನು ನೋಡುವುದಕ್ಕಾಗಿ ಮತ ನೀಡಿಲ್ಲ. ಬದಲಾಗಿ ಉತ್ತಮ ಆಡಳಿತ, ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತವನ್ನು ನಿರೀಕ್ಷಿಸಿದ್ದಾರೆ. ಪಕ್ಷದ ನಾಯಕರು ತಮ್ಮ ವೈಯಕ್ತಿಕ ರಾಜಕೀಯ ಲೆಕ್ಕಾಚಾರಗಳಿಗಿಂತ ಜನರ ನಿರೀಕ್ಷೆಗಳಿಗೆ ಆದ್ಯತೆ ನೀಡಬೇಕಾಗಿದೆ.

*ಇಂದಿನ ರಾಜಕೀಯ ಪಕ್ಷಗಳಲ್ಲಿ ಕಂಡುಬರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಪಕ್ಷಗಳೊಳಗಿನ ಸಿದ್ಧಾಂತ ಮತ್ತು ಮೌಲ್ಯಗಳ ಕುರಿತ ತರಬೇತಿಯ ಕೊರತೆ. ಪಕ್ಷ ತನ್ನ ಕಾರ್ಯಕರ್ತರು ಮತ್ತು ನಾಯಕರಿಗೆ ನಿರಂತರವಾಗಿ ಮೌಲ್ಯಾಧಾರಿತ ರಾಜಕೀಯ ಶಿಕ್ಷಣ ನೀಡಿದರೆ, ಹುದ್ದೆಗಿಂತ -ಸಿದ್ಧಾಂತ, ಅಧಿಕಾರಕ್ಕಿಂತ- ಸೇವೆ ಮತ್ತು ವೈಯಕ್ತಿಕ ಲಾಭಕ್ಕಿಂತ -ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ನೀಡುವ ಸಂಸ್ಕೃತಿ ಬೆಳೆಯುತ್ತದೆ. ಆದರೆ, ಇಂದು ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಗೆಲ್ಲುವುದು ಮತ್ತು ಅಧಿಕಾರ ಪಡೆಯುವುದೇ ಮುಖ್ಯ ಉದ್ದೇಶವಾಗಿ ಮಾರ್ಪಟ್ಟಿದೆ.

ಒಂದು ರಾಜಕೀಯ ಪಕ್ಷ ತನ್ನ ಕಾರ್ಯಕರ್ತರನ್ನು ಕೇವಲ ಮತ ಸಂಗ್ರಹಿಸುವ ಕಾರ್ಯಕರ್ತರಾಗಿ ಅಲ್ಲ, ಸಮಾಜ ಪರಿವರ್ತನೆಯ ಪ್ರತಿನಿಧಿಗಳಾಗಿ ರೂಪಿಸಬೇಕು. ನಾಯಕರು ಹುದ್ದೆ ಸಿಗದಿದ್ದರೂ ಪಕ್ಷದ ಬೆಳವಣಿಗೆಗಾಗಿ ದುಡಿಯುವ ಮನೋಭಾವವನ್ನು ಬೆಳೆಸಬೇಕು. ಆಗ ಮಾತ್ರ ರಾಜೀನಾಮೆಗಳು, ಅಸಮಾಧಾನಗಳು ಮತ್ತು ಗುಂಪುಗಾರಿಕೆಯಂತಹ ಸಮಸ್ಯೆಗಳು ಕಡಿಮೆಯಾಗಬಹುದು.

ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿತ್ವ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅವಕಾಶವನ್ನು ಒದಗಿಸಿದೆ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ಜನರ ವಿಶ್ವಾಸವನ್ನು ಹೆಚ್ಚಿಸಿ, ಅಭಿವೃದ್ಧಿ ಮತ್ತು ಸುಶಾಸನದ ಮೂಲಕ ಜಾತ್ಯತೀತ ಸಿದ್ಧಾಂತದ ನೆಲೆಯನ್ನು ಗಟ್ಟಿಗೊಳಿಸುವ ಅವಕಾಶ ಇದಾಗಿದೆ. ಆದರೆ ಪಕ್ಷದೊಳಗಿನ ನಿರಂತರ ಅಸಮಾಧಾನ ಮತ್ತು ಅಧಿಕಾರದ ಸಂಘರ್ಷಗಳು ಮುಂದುವರಿದರೆ, ಅದು ಸರ್ಕಾರದ ಕಾರ್ಯಕ್ಷಮತೆ ಮತ್ತು ರಾಜ್ಯದ ಜಾತ್ಯತೀತ ಪರಂಪರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಯಾವುದೇ ರಾಜಕೀಯ ಪಕ್ಷದ ನಿಜವಾದ ಬಲ. ಅದರ ನಾಯಕರ ಹುದ್ದೆಗಳಲ್ಲಿ ಇರುವುದಿಲ್ಲ. ಅದರ ಬಲ ಸಿದ್ಧಾಂತದಲ್ಲಿ, ಸಂಘಟನಾ ಶಿಸ್ತಿನಲ್ಲಿ, ಕಾರ್ಯಕರ್ತರ ಬದ್ಧತೆಯಲ್ಲಿ ಮತ್ತು ಜನರ ವಿಶ್ವಾಸದಲ್ಲಿ ಇರುತ್ತದೆ. ಕಾಂಗ್ರೆಸ್ ಪಕ್ಷವು ಈ ಮೂಲ ಸತ್ಯವನ್ನು ಅರಿತು ಮೌಲ್ಯಾಧಾರಿತ ರಾಜಕೀಯವನ್ನು ಬಲಪಡಿಸಿದರೆ ಮಾತ್ರ ಕರ್ನಾಟಕದಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಅನ್ಯತಃ ಅಧಿಕಾರದ ರಾಜಕಾರಣ ಮತ್ತು ಆಂತರಿಕ ಅಸಮಾಧಾನಗಳು ಯಾವುದೇ ಪಕ್ಷದ ದೊಡ್ಡ ಶತ್ರುವಾಗಿಯೇ ಮಾರ್ಪಡುತ್ತದೆ.

WhatsApp Image 2026 06 06 at 10.32.40 AM
ಅಬ್ದುಲ್ ಅಝೀಝ್ ಉದ್ಯಾವರ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿಗೆ ಅಣ್ಣಾಮಲೈ ಬೆಂಬಲ: ‘ಬಂಧನವು ಅವರನ್ನು ಮತ್ತಷ್ಟು ಬಲಶಾಲಿಗಳನ್ನಾಗಿಸುತ್ತದೆ’ ಎಂದ ನಾಯಕ

ಚುನಾವಣಾ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮಗಳು ನಡೆದಿವೆ ಎಂದು...

ಆರ್‌ಎಸ್‌ಎಸ್‌ ಕೇವಲ ಪುರುಷರಿರುವ ‘ಸಂವಿಧಾನ ವಿರೋಧಿ’ ಸಂಘಟನೆ: ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ...

ಅಪ್ರಾಪ್ತ ಮಗನ ಕಾರು ಅಪಘಾತದಲ್ಲಿ ಮೂವರ ಸಾವು; ತಂದೆ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಅಪ್ರಾಪ್ತ ವಯಸ್ಸಿನ ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಆರೋಪ ಎದುರಿಸುತ್ತಿರುವ...

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...