ನ್ಯಾಯ ಸಮಾವೇಶಕ್ಕೆ ಬರಲಿರುವ ಸುಭಾಷಿಣಿ ಅಲಿ ಯಾರು ಗೊತ್ತೇ?

Date:

Advertisements

ಸುಭಾಷಿಣಿ ಕರ್ನಾಟಕಕ್ಕೆ ಹೊಸಬರಲ್ಲ. ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಬಂಧನ, ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ನಡೆದ ‘ಹಾಸನ ಚಲೋ’ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಗುಜರಾತಿನ ಬಿಲ್ಕಿಸ್ ಬಾನೊ ಅತ್ಯಾಚಾರದ ಅಪರಾಧಿಗಳನ್ನು ಜೈಲುವಾಸದಿಂದ ಬಿಡುಗಡೆ ಮಾಡಿದ್ದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ ಮೂವರು ಪ್ರಸಿದ್ಧ ಮಹಿಳಾ ನಾಯಕರಲ್ಲಿ ಒಬ್ಬರಾಗಿದ್ದರು

ಸುಭಾಷಿಣಿ ಅಲಿ ಅವರು ದೇಶದ ಅತಿ ದೊಡ್ಡ ಮಹಿಳಾ ಸಂಘಟನೆ AIDWA (All India Democratic Women’s Association) ದ ಸಕ್ರಿಯ ಕಾರ್ಯಕರ್ತರಾಗಿದ್ದು ಅದರ ಅಖಿಲ ಭಾರತ ಅಧ್ಯಕ್ಷರಾಗಿದ್ದು, ದೇಶದ ಮಹಿಳೆಯರ ಸಮಸ್ಯೆಗಳ ಆಳವಾದ ಅರಿವು ಇರುವ ಮತ್ತು ಅವುಗಳ ಪರಿಹಾರಕ್ಕೆ ಸಮರಧೀರ ಹೋರಾಟಗಳನ್ನು ಸಂಘಟಿಸಿದವರು. ಅವರು CPI(M) (ಭಾರತ ಕಮ್ಯುನಿಸ್ಟ್ ಪಕ್ಷ – ಮಾರ್ಕ್ಸ್ ವಾದಿ) ನ ಹಿರಿಯ ನಾಯಕರಲ್ಲೊಬ್ಬರು. ಅವರು ದೀರ್ಘಕಾಲ ಪಕ್ಷದ ಕೇಂದ್ರ ಸಮಿತಿ ಸದಸ್ಯರು ಮತ್ತು ಎರಡನೆಯ ಮಹಿಳಾ ಪಾಲಿಟ್ ಬ್ಯುರೋ ಸದಸ್ಯರೂ ಆಗಿದ್ದರು. ಕಾನಪುರ ಕ್ಷೇತ್ರದಿಂದ 1989ರ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯೂ ಆಗಿದ್ದರು.

ಅವರು ಆಜಾದ್ ಹಿಂದ್ ಫೌಜ್ ನಲ್ಲಿ ಸೇವೆ ಸಲ್ಲಿಸಿದ್ದ ಕರ್ನಲ್ ಪ್ರೇಮ್ ಸೆಹಗಲ್ ಮತ್ತು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ. ಮದ್ರಾಸ್, ಯುಎಸ್ ಮತ್ತು ಕಾನಪುರದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಸುಭಾಷಿಣಿ ಯುಎಸ್ ನಲ್ಲಿ ಓದುತ್ತಿದ್ದಾಗ 1960ರ ದಶಕದ ಕೊನೆಯ ಅವಧಿಯಲ್ಲಿ ಅಲ್ಲಿ ಭುಗಿಲೆದ್ದ ವಿಯೆಟ್ನಾಂ ಯುದ್ಧ-ವಿರೋಧಿ ಚಳವಳಿಯ ಸಮರಶೀಲ ವಿಭಾಗದಿಂದ ಪ್ರಭಾವಿತರಾಗಿ ಮಾರ್ಕ್ಸ್ ವಾದದತ್ತ ಅಕರ್ಷಿತರಾದರು.

ಯು.ಎಸ್ ನಿಂದ ಬಂದ ಕೂಡಲೇ ಅಕಾಡೆಮಿಕ್ ಅಥವಾ ಉದ್ಯೋಗದ ಹಾದಿಯನ್ನು ನಿರಾಕರಿಸಿ, ಕಮ್ಯುನಿಸ್ಟ್ ಚಳವಳಿಯ ಸಕ್ರಿಯ ಸದಸ್ಯರಾಗಲು ಬಯಸಿದರು. 1969ರಲ್ಲಿ ಸಿಪಿಐ(ಎಂ) ಸದಸ್ಯರು ಮತ್ತು ಸಕ್ರಿಯ ಕಾರ್ಯಕರ್ತರಾದರು. ಅವರು ಹಲವು ವರ್ಷಗಳ ಕಾಲ ಕಾನಪುರದಲ್ಲೇ ಟ್ರೇಡ್ ಯೂನಿಯನ್ ಕಾರ್ಯಕರ್ತರೂ ನಾಯಕರೂ ಆಗಿದ್ದರು. ಮುಂದೆ ಪಕ್ಷದ ಮತ್ತು ಮಹಿಳಾ ಚಳವಳಿಯ ಉತ್ತರ ಪ್ರದೇಶ ರಾಜ್ಯ ಮತ್ತು ಅಖಿಲ ಭಾರತ ನಾಯಕರೂ ಆಗಿ ಬೆಳೆದರು.

ಮಹಿಳಾ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸುತ್ತಿದ್ದ ಅವರು ಇತ್ತೀಚೆಗೆ ಗುಜರಾತಿನ ಬಿಲ್ಕಿಸ್ ಬಾನೊ ಅತ್ಯಾಚಾರದ ಹೇಯ ಪ್ರಕರಣದಲ್ಲಿ ಅಪರಾಧಿಗಳನ್ನು ಜೈಲುವಾಸದಿಂದ ಬಿಡುಗಡೆ ಮಾಡಿದ್ದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಅದನ್ನು ರದ್ದುಪಡಿಸಿದ ಮೂವರು ಪ್ರಸಿದ್ಧ ಮಹಿಳಾ ನಾಯಕರಲ್ಲಿ ಒಬ್ಬರಾಗಿದ್ದರು. ಸುಭಾಷಿಣಿ ಕರ್ನಾಟಕಕ್ಕೆ ಹೊಸಬರಲ್ಲ. ಇತ್ತೀಚೆಗಿನ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಚಳವಳಿಗಳಲ್ಲಿ ನಾಯಕತ್ವ ನೀಡಿ ಭಾಗವಹಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಂಧನ, ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ನಡೆದ ‘ಹಾಸನ ಚಲೋ’ ಚಳವಳಿಯ ನಾಯಕತ್ವ ವಹಿಸಿದ್ದರು.

ಅವರು ಉತ್ತಮ ಲೇಖಕರೂ, ಕಲಾವಿದರೂ ಆಗಿದ್ದಾರೆ. ಅವರ ಆಗಿನ ಪತಿ ಮುಜಫ್ಫರ್ ಅಲಿ ನಿರ್ದೇಶಿಸಿದ್ದ ಪ್ರಸಿದ್ಧ ಚಿತ್ರ ‘ಉಮರಾವ್ ಜಾನ್’ ಗೆ ವಸ್ತ್ರವಿನ್ಯಾಸ ಮಾಡಿದ್ದರು. ‘ಅಶೋಕ’ ಮತ್ತು ‘ಅಮು’ ಸಿನಿಮಾಗಳಲ್ಲಿ ನಟಿಸಿದ್ದರು ಕೂಡಾ. ಅವರ ಮಗ ಶಾದ್ ಅಲಿ ಸಹ ಸಿನಿಮಾ ನಿರ್ದೇಶಕರಾಗಿದ್ದಾರೆ.

ವಸಂತರಾಜ್
ವಸಂತರಾಜ್ ‌ಎನ್.ಕೆ.
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

ಲಡಾಖ್ | ಅಭಿವೃದ್ಧಿಯ ಆಶ್ವಾಸನೆ ನೀಡಿ ಜನರನ್ನು ವಂಚಿಸಿದ ಕೇಂದ್ರ ಸರ್ಕಾರ

ಲಡಾಖ್‌ನಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ರಾಜ್ಯ ಸ್ಥಾನಮಾನ ಅಥವಾ ಆರನೆಯ ಅನುಸೂಚನೆ...

Download Eedina App Android / iOS

X