ಸಮೀಕ್ಷೆಯಿಂದ ಲಿಂಗಾಯತ ಹಾಗೂ ಒಕ್ಕಲಿಗರು ಒಳಗೊಂಡಂತೆ ಎಲ್ಲಾ ಅಹಿಂದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳು ಬಹಿರಂಗಗೊಳ್ಳುತ್ತವೆ. ಇದರ ಜೊತೆಗೆ ಕಳೆದ ಹತ್ತು ವರ್ಷಗಳಲ್ಲಿ ಬ್ರಾಹ್ಮಣರ ಆರ್ಥಿಕ, ರಾಜಕೀಯ ಸ್ಥಿತಿಗತಿಗಳು ಉತ್ತುಂಗಕ್ಕೇರಿದ ಸಂಗತಿಯೂ ಬಹಿರಂಗಗೊಳ್ಳುತ್ತದೆ. ಇದು ಬ್ರಾಹ್ಮಣ್ಯದ ಜನರಿಗೆ ಬೇಡವಾಗಿದೆ. ತಮ್ಮ ವಂಚಕತನ ಬಹಿರಂಗಗೊಳ್ಳುವುದನ್ನು ಅವರು ಯಾವತ್ತೂ ಸಹಿಸುವುದಿಲ್ಲ.
ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿಯಲು ಮುಖ್ಯ ಕಾರಣ ಬ್ರಾಹ್ಮಣ್ಯ ಎನ್ನುವ ಸಂಗತಿ ಬಹುತೇಕ ಭಾರತೀಯರಿಗೆ ತಿಳಿದಿಲ್ಲ. ಬುದ್ಧೋತ್ತರ ಕಾಲದಿಂದ ಈ ನೆಲದಲ್ಲಿ ಆರಂಭಗೊಂಡ ಬ್ರಾಹ್ಮಣ್ಯದ ಅಪಾಯಕಾರಿ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ನಡೆದ ಅನೇಕ ಪ್ರಯತ್ನಗಳು ಸಂಪೂರ್ಣ ಯಶಸ್ಸು ಕಾಣಲಿಲ್ಲ. ಕಳೆದ ಹನ್ನೊಂದು ವರ್ಷಗಳಿಂದ ದಿಲ್ಲಿ ಗದ್ದುಗೆ ಅತಿಕ್ರಮಿರುವ ಬ್ರಾಹ್ಮಣ್ಯ ಭಾರತವನ್ನು ಒಂದು ಶತಮಾನ ಹಿಂದಕ್ಕೆ ತಳ್ಳಿದೆ. ಈ ಸಂಗತಿ ಇಲ್ಲಿನ ಜನರ ಅರಿವಿಗೆ ಬಾರದಂತೆ ಧರ್ಮದ ನಶೆ ಮತ್ತು ಮುಸ್ಲಿಮ್ ದ್ವೇಷವನ್ನು ವಂಚಕತನದಿಂದ ಬಳಸಿಕೊಳ್ಳಲಾಗುತ್ತಿದೆ. ಬ್ರಾಹ್ಮಣ್ಯದ ವಂಚಕತನಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಇದು 4500 ವರ್ಷಗಳ ಆರ್ಯ-ದ್ರಾವಿಡ ಸಂಘರ್ಷ ಕಾಲ, ಪುರಾಣ ಕಾಲದಿಂದ ಹಿಡಿದು ಇಲ್ಲಿಯವರೆಗೆ ದಾಖಲಾಗುತ್ತ ಬಂದಿದೆ. ಬ್ರಾಹ್ಮಣ್ಯ ಭಾರತದ ಪಾಲಿನ ಬಹುದೊಡ್ಡ ಶಾಪವಾಗಿದೆ. ಇದನ್ನು ನಾಶಮಾಡದ ಹೊರತು ಭಾರತಕ್ಕೆ ಭವಿಷ್ಯವಿಲ್ಲ. ಭಾರತದ ಭವಿಷ್ಯವನ್ನು ರೂಪಿಸಬೇಕಾದವರು, ಅದರ ಹಿತಾಸಕ್ತಿಯನ್ನು ರಕ್ಷಿಸಬೇಕಾದವರು ಬ್ರಾಹ್ಮಣ್ಯದ ಹೊರಗಿರುವ ಬಹುಜನರು. ಹಿಂದಿನಿಂದಲೂ ಭಾರತವನ್ನು ಸದೃಢವಾಗಿ, ವೈಚಾರಿಕವಾಗಿ ಕಟ್ಟುತ್ತಾ ಬಂದವರು ಬಹುಜನರೆ, ಆದರೆ, ಅದರ ಶ್ರೇಯವನ್ನು ಮಾತ್ರ ಬ್ರಾಹ್ಮಣ್ಯದ ಜನರು ಪಡೆದಿದ್ದಾರೆ. ಭಾರತದ ಹಿತಾಸಕ್ತಿವನ್ನು ಬಲಿಕೊಟ್ಟ ಬ್ರಾಹ್ಮಣ್ಯದ ಜನರು ಇಂದು ತಾವು ಮಾತ್ರ ದೇಶಭಕ್ತರು, ತಮ್ಮಿಂದಲೇ ಭಾರತಕ್ಕೆ ಒಳಿತಾಗಿದೆ ಎಂದು ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತಿದ್ದಾರೆ.
ಸಿದ್ಧರಾಮಯ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಆರಂಭಿಸಿದೆ. ಈ ನಾಡಿನಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಹಾಗು ಶೂದ್ರ ಸಮುದಾಯಗಳಾದ ಲಿಂಗಾಯತ ಹಾಗು ಒಕ್ಕಲಿಗರ ಮೂಲಕ ಆರಂಭದಿಂದಲೂ ಬ್ರಾಹ್ಮಣ್ಯದ ಜನರು ಈ ಸಮೀಕ್ಷೆಯನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ಹಾಗು ಒಕ್ಕಲಿಗ ನಾಯಕರನ್ನು ಸಿದ್ದರಾಮಯ್ಯನವರ ವಿರುದ್ಧ ವೈದಿಕ ಮಾಧ್ಯಮಗಳ ಮುಖೇನ ಎತ್ತಿಕಟ್ಟುವ ಪ್ರಯತ್ನಗಳು ಸಹ ವಿಫಲವಾಗಿವೆ. ಕೆಲವು ಲಿಂಗಾಯತ ಉಪವರ್ಗದ ಮಠಾಧೀಶರನ್ನು ಆಮಿಷಗಳ ಮೂಲಕ ಬ್ರಾಹ್ಮಣ್ಯ ಒಳಗೆ ಹಾಕಿಕೊಂಡಿತಾದರೂ ಆಯಾ ಉಪವರ್ಗದ ಜನರ ಜಾಗೃತಿ ಆ ಮಠಾಧೀಶರ ಮಾತು ನಡೆಯದಂತೆ ಮಾಡಿದೆ. ಬಿಜೆಪಿಯಲ್ಲಿವ ಸ್ವಾರ್ಥಿ ಹಾಗೂ ಮಿದುಳು ರಹಿತ ಒಕ್ಕಲಿಗ ಮತ್ತು ಲಿಂಗಾಯತ ಪುಢಾರಿಗಳ ಮೂಲಕವೂ ಬ್ರಾಹ್ಮಣ್ಯದ ಜನರು ಸಮೀಕ್ಷೆಯ ವಿರುದ್ಧ ಮಾಡಿದ ಎಲ್ಲಾ ಪ್ರಯತ್ನಗಳು ಸಂಪೂರ್ಣ ಯಶ ಕಾಣಲಿಲ್ಲ. ಸದಾ ತೆರೆಯ ಮರೆಯಲ್ಲಿ ಮೆರೆದಾಡುವ ಬ್ರಾಹ್ಮಣ್ಯದ ಜನರು ಈಗ ಅನಿವಾರ್ಯವಾಗಿ ಪ್ರತ್ಯಕ್ಷವಾಗಿ ಅಖಾಡಕ್ಕೆ ಇಳಿದಿದ್ದಾರೆ. ಬ್ರಾಹ್ಮಣ ಮಹಾಸಭಾದವರು, ಕೇಂದ್ರದ ಮಂತ್ರಿ ಪ್ರಲ್ಲಾದ ಜೋಶಿ ಮುಂತಾದ ಬ್ರಾಹ್ಮಣರು ಈಗ ಸಮೀಕ್ಷೆಯನ್ನು ಬಹಿಷ್ಕರಿಸಲು ಸಂವಿಧಾನಬಾಹಿರ ಕರೆಯನ್ನು ನೀಡುತ್ತಿದ್ದಾರೆ. ಪರೋಕ್ಷವಾಗಿ ಮಾಡುವ ಹುನ್ನಾರಗಳು ಯಶ ಕಾಣದಿದ್ದಾಗ ನೇರವಾಗಿ ಅಖಾಡಕ್ಕೆ ಧುಮುಕುವುದು ಬ್ರಾಹ್ಮಣ್ಯದ ಪುರಾತನ ನಡೆ.

ಇತಿಹಾಸದುದ್ದಕ್ಕೂ ಬ್ರಾಹ್ಮಣ್ಯದ ಈ ಕುಟಿಲತೆ ದಾಖಲಾಗುತ್ತ ಬಂದಿದೆ. ಸಮೀಕ್ಷೆಯಿಂದ ಲಿಂಗಾಯತ ಹಾಗೂ ಒಕ್ಕಲಿಗರು ಒಳಗೊಂಡಂತೆ ಎಲ್ಲಾ ಅಹಿಂದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳು ಬಹಿರಂಗಗೊಳ್ಳುತ್ತವೆ. ಇದರ ಜೊತೆಗೆ ಕಳೆದ ಹತ್ತು ವರ್ಷಗಳಲ್ಲಿ ಬ್ರಾಹ್ಮಣರ ಆರ್ಥಿಕ, ರಾಜಕೀಯ ಸ್ಥಿತಿಗತಿಗಳು ಉತ್ತುಂಗಕ್ಕೇರಿದ ಸಂಗತಿಯೂ ಬಹಿರಂಗಗೊಳ್ಳುತ್ತದೆ. ಇದು ಬ್ರಾಹ್ಮಣ್ಯದ ಜನರಿಗೆ ಬೇಡವಾಗಿದೆ. ಅವರ ವಂಚಕತನ ಬಹಿರಂಗಗೊಳ್ಳುವುದು ಅವರು ಯಾವತ್ತೂ ಸಹಿಸುವುದಿಲ್ಲ. ಹಿಂದೆ 600 ವರ್ಷ ಮುಸ್ಲಿಮ್ ಆಳರಸರ ಜವಾನಗಿರಿ, ದಿವಾನಗಿರಿ, ಚಮಚಾಗಿರಿ ಮಾಡಿ, ಗೋದಾನ, ಭೂದಾನ ಮತ್ತು ಜಹಗೀರು ಪಡೆದು ತಾವು ಮಾತ್ರ ಎಲ್ಲಾ ಬಗೆಯ ತೆರಿಗೆಗಳಿಂದ ರಿಯಾಯಿತಿ ಪಡೆದು ಈ ದೇಶವನ್ನು ಹಾಳು ಮಾಡಿದ ಸಂಗತಿ ಜನರಿಗೆ ತಿಳಿಯಬಾರದೆಂದು ಶಾಲಾ ಪಠ್ಯದಿಂದ ಮೊಘಲರ ಇತಿಹಾಸ ಕಿತ್ತು ಹಾಕಲು ಇವರು ಈಗ ಹಾತೊರೆಯುತ್ತಿದ್ದಾರೆ. ಪ್ರಾಕೃತ ಹಾಗೂ ಉಳಿದ ಭಾರತೀಯ ಭಾಷೆಗಳ ಸತ್ವ ಹೀರಿಕೊಂಡು ಹುಲುಸಾಗಿ ಬೆಳೆದ ವಿದೇಶಿ ಸಂಸ್ಕೃತವನ್ನು ಹಿಂದೆ ಬಹುಜನರಿಂದ ಮುಚ್ಚಿಟ್ಟು ಅದರ ಅವನತಿಗೆ ಕಾರಣರಾದವರು ಬ್ರಾಹ್ಮಣ್ಯದ ಜನರು. ಈಗ ಬಹುಜನರು ಇಂಗ್ಲಿಷ್ ಕಲಿತು ಮುಂದೆ ಹೋಗುತ್ತಿರುವುದನ್ನು ತಡೆಯಲು ಮತ್ತೆ ಹಿಂದಿ ಹಾಗೂ ಸಂಸ್ಕೃತವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಭಾರತೀಯ ಬಹುಜನರಿಗೆ ಒಂದಷ್ಟು ಒಳಿತಾಗಿದ್ದು ಬ್ರಿಟಿಷರ ಆಡಳಿತ ಕಾಲದಲ್ಲಿ ಮಾತ್ರ.
ಬ್ರಿಟಿಷರು ಭಾರತದಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಮೆಕಾಲೆ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಇದನ್ನು ಆಗ ಬಲವಾಗಿ ವಿರೋಧಿಸಿದವರು ಬ್ರಾಹ್ಮಣರು. ಏಕೆಂದರೆ ಶಿಕ್ಷಣ ಬ್ರಾಹ್ಮಣರ ಗುರುಕುಲಗಳ ಹಿಡಿತದಿಂದ ಹೊರಬಂದು ಭಾರತೀಯ ಬಹುಜನರಿಗೆ ದೊರಕುವುದು ಬ್ರಾಹ್ಮಣರಿಗೆ ಆಗ ಸಹ್ಯವಾಗಲಿಲ್ಲ. ಮೆಕಾಲೆ ಶಿಕ್ಷಣ ನೀತಿಯನ್ನು ತಡೆಯಲು ಇವರಿಂದ ಆಗಲಿಲ್ಲ. ತಾವು ಗುರುಕುಲದಲ್ಲಿ ಸಂಸ್ಕೃತ ಮಂತ್ರಗಳು ಕಲಿಯುತ್ತಾ ಕುಳಿತರೆ ಬಹುಜನರು ಶಿಕ್ಷಣ ಪಡೆದು ಬ್ರಿಟಿಷ್ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎನ್ನುವ ಆತಂಕದಿಂದ ತಮ್ಮ ಗುರುಕುಲಗಳನ್ನು ತಮ್ಮ ಕೈಯ್ಯಾರೆ ತಾವೇ ಸ್ವತಃ ಮುಚ್ಚಿ ಇಂಗ್ಲಿಷ್ ಶಿಕ್ಷಣ ಪಡೆಯಲು ಆರಂಭಿಸಿದರು. ಈಗ ಗುರುಕುಲ ಮುಚ್ಚಿ ಭಾರತದಲ್ಲಿ ಶಿಕ್ಷಣವನ್ನು ಬ್ರಿಟಿಷರು ಕ್ರೈಸ್ತೀಕರಣಗೊಳಿಸಿದರು ಎಂದು ಬಹುಜನ ಯುವಕರಿಗೆ ಸುಳ್ಳು ಹೇಳುತ್ತಿದ್ದಾರೆ. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯುವುದನ್ನು ಮೊದಲು ಆರಂಭಿಸಿದ್ದು ಇದೆ ಬೆಂಗಾಲಿ ಬ್ರಾಹ್ಮಣರು ಹಾಗೂ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು. ಭಾರತೀಯತೆಯ ಶಿವ-ದ್ರಾವಿಡ ಸಂಸ್ಕೃತಿಯನ್ನು ನಾಶ ಮಾಡಿರುವ ಬ್ರಾಹ್ಮಣರು ಭಾರತದ ಮೂಲ ಸಂಸ್ಕೃತಿಗೆ ಸದಾ ಅಪಾಯಕಾರಿಯಾಗಿದ್ದಾರೆ. ಈಗ ಜಾತಿ ಸಮೀಕ್ಷೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ಶೂದ್ರರ ಆಡಳಿತ ಕಾಲದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿಕೊಂಡಿರುವ ಇವರು ಈಗ ಮಹಾರಾಷ್ಟ್ರದಲ್ಲಿ ಪರಶುರಾಮ ಆರ್ಥಿಕ ಅಭಿವೃದ್ಧಿ ನಿಗಮದ ಅಧ್ಯಕ್ಷನಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ.
ಇದನ್ನೂ ಓದಿ ದಿಲ್ಲಿ ಮಾತು | ಇದು ಪಿತೃ ಪ್ರಭುತ್ವವನ್ನು ಒಡೆಯುವ ಕಾಲ
ಸಿದ್ಧರಾಮಯ್ಯ ಸರಕಾರ ಕೈಕೊಂಡಿರುವ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬ್ರಾಹ್ಮಣರು ಮುಂದಿನ ವರ್ಷ ಮೋದಿ ಸರಕಾರ ಕೈಕೊಳ್ಳಲಿರುವ ಜಾತಿ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಕಾಂಗ್ರೆಸ್ ಸರಕಾರ ಯಾವ ಜನೋಪಯೋಗಿ ಕಾರ್ಯಗಳನ್ನು ಮಾಡಿದರು ಇವರ ವಿರೋಧ ಇದ್ದೇ ಇರುತ್ತದೆ. ಆರಂಭದಲ್ಲಿ ಆಧಾರ್, ಜಿಎಸ್ಟಿ ಎಲ್ಲವನ್ನು ವಿರೋಧಿಸಿ ನಂತರ ಅವನ್ನು ಅತಿ ಹೆಚ್ಚು ಅನುಷ್ಠಾನಕ್ಕೆ ತಂದಿದ್ದು ಬ್ರಾಹ್ಮಣ್ಯದ ಆಡಳಿತ. ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಸಿದ್ಧರಾಮಯ್ಯ ಸರ್ಕಾರ ಮಾಡಿದ ಶಿಫಾರಸ್ಸನ್ನು ತೀವ್ರವಾಗಿ ವಿರೋಧಿಸಿದ ಇವರು ಮುಂದಿನ ದಿನಗಳಲ್ಲಿ ತಾವೇ ಸಂವಿಧಾನ ಮಾನ್ಯತೆ ನೀಡಿದರೂ ಆಶ್ಚರ್ಯಪಡುವಂತಿಲ್ಲ. ಜಾತಿ ಸಮೀಕ್ಷೆಯನ್ನು ಮಾಡಿಯೇ ತೀರಬೇಕು ಎನ್ನುವ ಸಿದ್ಧರಾಮಯ್ಯನವರ ಇಚ್ಛಾಶಕ್ತಿ ಮೆಚ್ಚುವಂತದ್ದು. ಅದನ್ನು ನ್ಯಾಯಾಲಯಲ್ಲಿ ಪ್ರಶ್ನಿಸಿ ಈ ಬ್ರಾಹ್ಮಣ್ಯದ ಮನಸ್ಸುಗಳು ಕೈಸುಟ್ಟುಕೊಂಡಿವೆ. ಈಗ ಪ್ರಲ್ಲಾದ ಜೋಶಿಯಂತಹ ಸಾಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣರ ಅಸಹನೆ ಹೊರಬೀಳುತ್ತಿದೆ. ಒಂದು ಹಂತದಲ್ಲಿ ಲಿಂಗಾಯತ, ಒಕ್ಕಲಿಗ ಹಾಗೂ ಅಹಿಂದ ವರ್ಗದ ಮಠಾಧೀಶರು ಮತ್ತು ಬಹುತೇಕ ರಾಜಕೀಯ ನಾಯಕರು ಸಮೀಕ್ಷೆಯ ಪರವಾಗಿ ನಿಲ್ಲದಿದ್ದರೂ ಪರವಾಗಿಲ್ಲ, ಈಗ ತಟಸ್ಥ ನಿಲುವನ್ನು ತಾಳಿದ್ದಾರೆ. ಅಲ್ಲದೆ ಧರ್ಮದ ಕಾಲಂನಲ್ಲಿ ಹಿಂದೂ ಬದಲಾಗಿ ಅವೈದಿಕ ಧರ್ಮಗಳನ್ನು ನಮೂದಿಸಲು ಬಹಿರಂಗವಾಗಿ ಕರೆ ಕೊಡುತ್ತಿರುವುದು ಬ್ರಾಹ್ಮಣ್ಯದ ಜನರ ನಿದ್ರೆಯನ್ನು ಕಳೆದಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ