ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್‌ಗಳ ಜಯ ಸಾಧಿಸಿದ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.
ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಅರ್ಧಶತಕದ ಸಹಾಯದಿಂದ ಭಾರತ 168 ರನ್ ಗಳಿಸಿತು. ಬಾಂಗ್ಲಾದೇಶದ ಬ್ಯಾಟಿಂಗ್ ವಿಫಲವಾಗಿ 41 ರನ್‌ಗಳಿಂದ ಸೋಲೊಪ್ಪಿಕೊಂಡರು. ಈ ಗೆಲುವಿನೊಂದಿಗೆ ಭಾರತ ಅಜೇಯವಾಗಿ ಫೈನಲ್‌ಗೆ ತಲುಪಿದೆ.
ಭಾರತ ನೀಡಿದ್ದ 169 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (18ಕ್ಕೆ3) ಹಾಗೂ ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ (18ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.3 ಓವರುಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಸೈಫ್ ಹಸನ್ (69; 51 ಎಸೆತ, 4×3, 6×5) ಅವರ ಏಕಾಂಗಿ ಹೋರಾಟದ ನಡುವೆಯೂ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಇದಕ್ಕೆ ಮುನ್ನ, ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಸೂರ್ಯಕುಮಾರ್ ಪಡೆಯು ಸಿಡಿಲಮರಿ ಅಭಿಷೇಕ್ ಶರ್ಮಾ (75; 37ಎಸೆತ, 4×6, 6×5) ಅವರ ಅಬ್ಬರದ ಆಟದಿಂದಾಗಿ 6 ವಿಕೆಟ್‌ಗಳಿಗೆ 168 ರನ್ ಗಳಿಸಿತು.
ಪರ್ವೇಜ್ ಹೊಸೇನ್ ಎಮನ್ 21 ರನ್ ಗಳಿಸಿ ಔಟಾದರು. ಒಂದು ಕಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಆರಂಭಿಕ ಆಟಗಾರ ಸೈಫ್ ಹಸನ್ ಮುನ್ನುಗ್ಗಿ ಹೊಡೆಯುತ್ತಿದ್ದರು. ಅಕ್ಷರ್ ಪಟೇಲ್, ಶಿವಂ ದುಬೆ ಮತ್ತು ಕೀಪರ್ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಕ್ಯಾಚ್ ಡ್ರಾಪ್ ಮಾಡಿದರು. ಕೊನೆಗೆ 69 ರನ್(61 ಎಸೆತ, 3 ಬೌಂಡರಿ, 5 ಸಿಕ್ಸ್) ಬುಮ್ರಾ ಬೌಲಿಂಗ್‌ನಲ್ಲಿ ಸಿಕ್ಸ್ ಸಿಡಿಸಲು ಹೋದರು. ಆದರೆ ಬೌಂಡರಿ ಗೆರೆಯ ಬಳಿ ಅಕ್ಷರ್ ಪಟೇಲ್ ಉತ್ತಮ ಕ್ಯಾಚ್ ಹಿಡಿದಿದ್ದರಿಂದ ಔಟಾದರು.
ಟೀಂ ಇಂಡಿಯಾದ ಬ್ಯಾಟಿಂಗ್ ಬಲಿಷ್ಠವೆಂದು ಪರಿಗಣಿಸಲಾಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಬೌಲರ್‌ಗಳು. ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಉರುಳಿಸಿ ಬಾಂಗ್ಲಾಗೆ ಆಘಾತ ನೀಡಿದರು. ಉಳಿದಂತೆ ಮಧ್ಯಮ ಓವರ್‌ಗಳಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಬಾಂಗ್ಲಾ ಬ್ಯಾಟರ್ಗಳನ್ನು ಕಾಡಿದರು. ವರುಣ್ ಚಕ್ರವರ್ತಿ, ಬುಮ್ರಾ ಎರಡು ವಿಕೆಟ್‌ಗಳನ್ನು ಪಡೆದರೆ, ಕುಲ್ದೀಪ್ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರು. ಅಕ್ಷರ್ ಪಟೇಲ್ ಮತ್ತು ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು. ಈ ಇಬ್ಬರು ಬೌಲರ್‌ಗಳು ಎಂಟು ಓವರ್‌ಗಳಲ್ಲಿ 47 ರನ್‌ಗಳನ್ನು ನೀಡಿ ಬಾಂಗ್ಲಾದೇಶದ ಐದು ವಿಕೆಟ್‌ಗಳನ್ನು ಕಬಳಿಸಿದರು.